

ಸಾಮಾನ್ಯವಾಗಿ ದೊಡ್ಡವರಿಗೆ ನಮಸ್ಕರಿಸಿದಾಗ ಶತಾಯುಷಿಯಾಗು, ದೀರ್ಘಾಯುಷ್ಯ ನಿನ್ನದಾಗಲಿ ಎಂದು ಆಶೀರ್ವಾದ ಮಾಡುತ್ತಾರೆ. ಆದರೆ ಬದಲಾದ ಆಧುನಿಕ ಜೀವನ ಶೈಲಿ ಮಾನವನ ಆಯಸ್ಸನ್ನು 100 ವರ್ಷದಿಂದ 50-60 ವರ್ಷಕ್ಕೆ ಇಳಿಸಿಬಿಟ್ಟಿದೆ. ದೀರ್ಘಾಯುಷಿ ಆಗಲು ಏನು ಮಾಡಬೇಕು..? ದೀರ್ಘಾಯುಷ್ಯ ಪಡೆಯಲು ಕೆಲವು ಸರಳ ನಿಯಮಗಳನ್ನು ನಿಮ್ಮ ಜೀವನದಲ್ಲಿ ಪಾಲಿಸಿ.
ಇತ್ತೀಚಿನ ಅಧ್ಯಯನವೊಂದರ ವರದಿಯ ಪ್ರಕಾರ 2021ರಲ್ಲಿ ಪ್ರಪಂಚದಲ್ಲಿ 5,73,000ರಷ್ಟು ಶತಾಯುಷಿಗಳು ಇದ್ದಾರೆ. 2050ರ ವೇಳೆಗೆ 100 ವರ್ಷ ದಾಟಿದವರು ಸುಮಾರು 3.5 ಮಿಲಿಯನ್ಗೆ ಏರುತ್ತಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೆ, ಈ ಅಧ್ಯಯನದ ವರದಿಯಲ್ಲಿ ಒಬ್ಬ ವ್ಯಕ್ತಿ ದೀರ್ಘಾಯುಷಿ ಆಗಲು ಈ 4 ಸರಳ ಅಭ್ಯಾಸಗಳನ್ನು ಪಾಲಿಸಿದರೆ ಸಾಕು ಎಂದು ತಿಳಿಸಲಾಗಿದೆ.