ಫ್ಯಾನ್ಸ್​​​ಗೆ ವರಮಹಾಲಕ್ಷ್ಮಿ ಹಬ್ಬದ ಗಿಫ್ಟ್ ಕೊಟ್ಟ ಉಪ್ಪಿ; UI ರಿಲೀಸ್ ಡೇಟ್ ಅನೌನ್ಸ್

Untitled-design-2024-08-16T200002.011
Published on

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ವರಮಹಾಲಕ್ಷ್ಮೀ ಹಬ್ಬದಂದು ಭರ್ಜರಿ ಉಡುಗೊರೆ ನೀಡಿದ್ದಾರೆ. ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಯುಐ ಸಿನಿಮಾವನ್ನು 2024ರ ಅಕ್ಟೋಬರ್​ನಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸುಮಾರು 45 ಸೆಕೆಂಡುಗಳ ಯುಐ ಸಿನಿಮಾದ ರಿಲೀಸ್ ಅನೌನ್ಸ್​ಮೆಂಟ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಆರಂಭವಾಗುತ್ತಿದ್ದಂತೆ ಸೇಬು ಬಳಿಕ ಬಾಣ, ವಿಷಸರ್ಪ, ರೈಲು, ಮನೆ ಮೇಲೆ ಕುಳಿತಿರುವ ಕಾಗೆ ಹಾಗೂ ರಾಜನ ಗೆಟಪ್​ನಲ್ಲಿ ಉಪ್ಪಿ ಮಿಂಚಿದ್ದಾರೆ. ಈಗಾಗಲೇ ತನ್ನ ಟೈಟಲ್​ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ‘ಯುಐ’ ಸಿನಿಮಾ ಬಿಡುಗಡೆಗೂ ಮುನ್ನವೇ ವಿಭಿನ್ನ ಪ್ರಚಾರದಿಂದ ಸಿನಿಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಚಿಕ್ಕದು-ದೊಡ್ಡದು ಎನ್ನುವ ಹಾಡಿನ ಪ್ರೋಮೋ ಬಿಟ್ಟು ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದ ಉಪೇಂದ್ರ ಆ ಬಳಿಕ ಟೀಸರ್ ಮತ್ತು ಟ್ರೋಲ್ ಆಗುತ್ತೆ ಎನ್ನುವ ಹಾಡನ್ನು ರಿಲೀಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.

ಸೂಪರ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಯುಐ’ ಸಿನಿಮಾಗೆ ಕೆ.ಪಿ.ಶ್ರೀಕಾಂತ್, ಜಿ.ಮನೋಹರನ್ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಉಪ್ಪಿ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net