

ಮೂಗಿನಿಂದ ರಕ್ತ ಬಂದರೆ ಕ್ಯಾನ್ಸರ್ ಅಪಾಯವೆಂದು ಹಲವರು ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಭಯಪಡುವ ಅಗತ್ಯವಿಲ್ಲ ಏಕೆಂದರೆ ಕ್ಯಾನ್ಸರ್ ಕಾಯಿಲೆಯಿದ್ದರೆ ಮಾತ್ರ ಮೂಗಿನಿಂದ ರಕ್ತ ಬರುವುದಿಲ್ಲ. ಮೂಗಿನಿಂದ ರಕ್ತ ಬರಲು ಅನೇಕ ಕಾರಣಗಳಿವೆ. ಇದಕ್ಕೆ ಕಾರಣಗಳೇನು ಹಾಗೂ ಆ ಸಮಯದಲ್ಲಿ ನಮಗೆ ನಾವು ಹೇಗೆ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಮೂಗಿನಿಂದ ರಕ್ತ ಬರುವುದನ್ನು ವೈದ್ಯಕೀಯ ಭಾಷೆಯಲ್ಲಿ ಎಪಿಸ್ಟಾಕ್ಸಿಸ್ ಎಂದು ಕರೆಯುತ್ತಾರೆ. ಎಪಿಸ್ಟಾಕ್ಸಿಸ್ನಲ್ಲಿಯೂ ಎರಡು ಬಗೆಯಿದೆ. ಮೊದಲನೆಯದು ಮುಂಭಾಗದ ಮೂಗಿನ ರಕ್ತಸ್ರಾವ. ಮೂಗಿನ ಮುಂಭಾಗದಲ್ಲಿರುವ ರಕ್ತನಾಳಗಳು ಮುರಿದು ರಕ್ತಸ್ರಾವ ಪ್ರಾರಂಭವಾದಾಗ ಅದನ್ನು ಮುಂಭಾಗದ ಮೂಗಿನ ರಕ್ತಸ್ರಾವ ಎಂದು ಕರೆಯಲಾಗುತ್ತದೆ. ಎರಡನೆಯದು ಹಿಂಭಾಗದ ರಕ್ತಸ್ತಾವ, ಹಿಂಭಾಗದ ಮೂಗಿನ ರಕ್ತಸ್ರಾವದ ಸಮಯದಲ್ಲಿ, ಮೂಗಿನ ಆಳವಾದ ಭಾಗದ ರಕ್ತನಾಳಗಳಲ್ಲಿ ಸಮಸ್ಯೆ ಇರುತ್ತದೆ ಎಂದರ್ಥವಾಗಿದೆ.
ಎಪಿಸ್ಟಾಕ್ಸಿಸ್ ಸಾಮಾನ್ಯವಾಗಿದೆ. ಶೇಕಡಾ 60ರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಮೂಗಿನ ರಕ್ತಸ್ರಾವವನ್ನು ಅನುಭವಸಿರುತ್ತಾರೆ. ಕೇವಲ ಶೇ.10ರಷ್ಟು ಪ್ರಕರಣಗಳು ವೈದ್ಯಕೀಯ ಚಿಕಿತ್ಸೆ ಪಡೆಯುವಷ್ಟು ತೀವ್ರವಾಗಿರುತ್ತವೆ. ಮೂಗಿನ ರಕ್ತಸ್ರಾವವು ವಯಸ್ಕರಲ್ಲಿ ಸಾಮಾನ್ಯವಾಗಿದೆ.
ಮೂಗಿನ ರಕ್ತಸ್ರಾವಕ್ಕೆ ಕಾರಣಗಳು:
ತಕ್ಷಣ ಮೂಗಿನ ರಕ್ತಸ್ರಾವ ನಿಲ್ಲಲು ಅನುಸರಿಸಬೇಕಾದ ಟಿಪ್ಸ್: