ರೆಡ್​ಮೀಟ್​ ಸೇವನೆ ಎಷ್ಟು ಅಪಾಯಕಾರಿ ಗೊತ್ತೆ? ಸಂಶೋಧನೆಯಿಂದ ಬಯಲಾಯ್ತು ಅಸಲಿ ಸಂಗತಿ..

Untitled-design-2024-08-26T205221.338-1
Published on

ಕೆಂಪು ಮಾಂಸವನ್ನು ಹೆಚ್ಚಾಗಿ ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗಲು ಬಹಳ ಸಮಯ ಬೇಕಾಗುವುದಿಲ್ಲ. ಅದರಲ್ಲೂ ಸಂಸ್ಕರಿಸಿದ ಕೆಂಪು ಮಾಂಸ ಸೇವನೆ ಅನೇಕ ಕಾಯಿಲೆ ಬರಲು ಕಾರಣವಾಗುತ್ತದೆ. ಕೆಂಪು ಮಾಂಸದಲ್ಲಿ ಅನೇಕ ಆರೋಗ್ಯಕರ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳಿವೆ. ಇದು ಪ್ರೋಟೀನ್, ಬಿ ಜೀವಸತ್ವಗಳು, ಕಬ್ಬಿಣ ಮತ್ತು ಸತುವಿನಂಶಗಳ ಉತ್ತಮ ಮೂಲವಾಗಿದೆ. ಆದರೆ ಇದು ಕೆಲವು ರೀತಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದು, ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುವುದು ಮತ್ತು ಸ್ಥೂಲಕಾಯತೆಗೆ ಕೊಡುಗೆ ನೀಡುವಂತಹ ಕೆಲವು ಅಪಾಯಗಳಿಗೂ ಕಾರಣವಾಗುತ್ತದೆ.

ರೆಡ್​​ಮೀಟ್​ನಲ್ಲಿ ಸಾಕಷ್ಟು ಕೊಬ್ಬಿನಂಶವಿದೆ. ಆದ್ದರಿಂದ ಇದು ಕೆಟ್ಟ ಕೊಲೆಸ್ಟ್ರಾಲ್​​​ ಅನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ನಾನ್​ವೆಜ್​ ಪ್ರಿಯರು ಇದನ್ನು ಅವಾಯ್ಡ್​ ಮಾಡುವುದು ಕಷ್ಟ ಎಂದೆನ್ನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಕೆಂಪು ಮಾಂಸವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯವಾಗುತ್ತದೆ.

ಸಂಶೋಧಕರು ಕಳೆದ 10 ವರ್ಷಗಳಿಂದ ಜನರ ಆಹಾರ ಪದ್ಧತಿಯನ್ನು ನೋಡಿದ್ದಾರೆ. ಇದಲ್ಲದೇ ಕುಟುಂಬದಲ್ಲಿನ ಅನುವಂಶಿಕ ಸಕ್ಕರೆ ಕಾಯಿಲೆ, ದೈಹಿಕ ಕ್ಷಮತೆ ಮೊದಲಾದವುಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಸಂಶೋಧನೆಯಿಂದ ಹೆಚ್ಚು ಕೆಂಪು ಮಾಂಸ ಸೇವನೆ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂಬುದು ಸ್ಪಷ್ಟವಾಗಿದೆ. ಈ ಸಂಶೋಧನೆಯು 20 ದೇಶಗಳ 19 ಲಕ್ಷಕ್ಕೂ ಹೆಚ್ಚು ಜನರ ಡೇಟಾ ಒಳಗೊಂಡಿದೆ.

ವಿದೇಶಗಳಲ್ಲಿ ಸಂಸ್ಕರಿಸಿರುವ ಮಾಂಸವನ್ನು ತಿನ್ನುತ್ತಾರೆ. ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೆಚ್ಚು ಹಾನಿಕಾರಕ ಎಂದು ಈ ಸಂಶೋಧನೆಯಲ್ಲಿ ಕಂಡುಬಂದಿದೆ. ಸಂಸ್ಕರಿಸಿದ ಮಾಂಸವು ಟೈಪ್ 2 ಮಧುಮೇಹದ ಅಪಾಯವನ್ನು ಶೇ.15ರಷ್ಟು ಹೆಚ್ಚಿಸಿದರೆ, ಸಂಸ್ಕರಿಸದ ಮಾಂಸದಿಂದ ಶೇ.10ರಷ್ಟು ಅಪಾಯ ಉಂಟುಮಾಡುತ್ತದೆ. ಒಟ್ಟಿನಲ್ಲಿ ಕೆಂಪು ಮಾಂಸದ ಸೇವನೆಯನ್ನು ಎಷ್ಟೇ ಕಡಿಮೆ ಮಾಡಿದರೂ ಅದರಿಂದ ದೇಹಕ್ಕೆ ಉಂಟಾಗುವ ಹಾನಿಯೂ ಹಾಗೆಯೇ ಉಳಿಯುತ್ತದೆ.

ಅಧ್ಯಯನದ ಫಲಿತಾಂಶದಲ್ಲಿ, ಮೀನು, ಚರ್ಮವಿಲ್ಲದ ಕೋಳಿ, ಡೈರಿ, ಮೊಟ್ಟೆ, ಧಾನ್ಯಗಳು ಅಥವಾ ತರಕಾರಿಗಳ ಹೆಚ್ಚಳದೊಂದಿಗೆ ಕೆಂಪು ಮಾಂಸದ ಇಳಿಕೆಯು ಎಂಟು ವರ್ಷಗಳಲ್ಲಿ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net