ಅತಿಯಾಗಿ ಮೊಟ್ಟೆ ತಿನ್ನುತ್ತಿದ್ದೀರಾ? ಹಾಗಾದ್ರೆ ನೀವು ತಪ್ಪದೇ ಈ ವಿಷಯ ತಿಳಿದುಕೊಳ್ಳಲೇಬೇಕು

Untitled-design-2024-08-27T200829.786
Published on

ಮೊಟ್ಟೆ ಆರೋಗ್ಯಕರ ಆಹಾರಗಳಲ್ಲಿ ಒಂದು. ಮೊಟ್ಟೆಯು ಪ್ರೋಟೀನ್​​, ವಿಟಮಿನ್​ ಎ, ಕ್ಯಾಲೋರಿ, ವಿಟಮಿನ್​ ಡಿ, ವಿಟಮಿನ್​​ ಇ, ವಿಟಮಿನ್​ ಬಿ6, ಕ್ಯಾಲ್ಸಿಯಂ, ಸತುವಿನ ಅಂಶವನ್ನು ಹೇರಳವಾಗಿ ಹೊಂದಿದೆ. ಆದರೆ ಅತಿಯಾದರೆ ಅಮೃತವು ವಿಷ ಎಂಬ ಗಾತೆ ಮಾತೊಂದಿದೆ. ಈ ಮಾತು ಅತಿ ಹೆಚ್ಚು ಮೊಟ್ಟೆ ಸೇವಿಸುವವರಿಗೆ ಅನ್ವಯವಾಗುತ್ತದೆ. ಏಕೆಂದರೆ ಮೊಟ್ಟೆಯನ್ನು ನಿಯಮಿತವಾಗಿ ಸೇವಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಅತಿಯಾಗಿ ಸೇವಿಸಿದರೆ ಅಡ್ಡಪರಿಣಾಮ ತಪ್ಪಿದಲ್ಲ. ಹಾಗಾದ್ರೆ ಅತಿಯಾದ ಮೊಟ್ಟೆ ಸೇವನೆಯಿಂದ ಆಗುವ ದುಷ್ಪಾರಿಣಾಮಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ರೆಡ್​ಮೀಟ್​ ಸೇವನೆ ಎಷ್ಟು ಅಪಾಯಕಾರಿ ಗೊತ್ತೆ? ಸಂಶೋಧನೆಯಿಂದ ಬಯಲಾಯ್ತು ಅಸಲಿ ಸಂಗತಿ.. ಅತಿಯಾಗಿ ಮೊಟ್ಟೆ ತಿನ್ನುವುದರಿಂದ ಆಗುವ ಅಡ್ಡಪರಿಣಾಮ:

  • ಹೆಚ್ಚು ಮೊಟ್ಟೆಗಳನ್ನು ಸೇವಿಸುವುದರಿಂದ ಕೆಲವರಲ್ಲಿ ಹೊಟ್ಟೆನೋವು ಮತ್ತು ಹೊಟ್ಟೆ ಉಬ್ಬರದಂತಹ ಜೀರ್ಣಕಾರಿ ಸಮಸ್ಯೆ ಉಂಟಾಗಬಹುದು. ಕೆಲವರು ಅತಿಸಾರದಂತಹ ಸಮಸ್ಯೆಗಳನ್ನು ಅನುಭವಿಸಬಹುದು. ಕೊಲೆಸ್ಟ್ರಾಲ್​ ಇರುವ ಆಹಾರದೊಂದಿಗೆ ಮೊಟ್ಟೆ ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ.
  • ಹೆಚ್ಚು ಮೊಟ್ಟೆಯನ್ನು ತಿನ್ನುವುದರಿಂದ ಅಲರ್ಜಿ ಉಂಟಾಗಬಹುದು. ದದ್ದುಗಳು, ಎಸ್ಜಿಮಾ, ಊತ, ಉಸಿರಾಟದ ತೊಂದರೆ ಸಮಸ್ಯೆ ಎದುರಾಗುತ್ತದೆ. ಶೀತ ಮತ್ತು ಕೆಂಪು ಕಣ್ಣುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
  • ದಿನನಿತ್ಯ ಮೊಟ್ಟೆ ಸೇವಿಸುವುದರಿಂದ ಕೆಲವರಲ್ಲಿ ಕೊಲೆಸ್ಟ್ರಾಲ್​ ಹೆಚ್ಚಾಗಬಹುದು. ಆದರೆ ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ, ಆದರೆ ಹೃದಯ ಸಂಬಂಧಿ ತೊಂದರೆ ಇರುವವರು ಹಾಗೂ ಕೊಲೆಸ್ಟ್ರಾಲ್ ಅಧಿಕವಾಗಿರುವವರು ಮೊಟ್ಟೆ ತಿನ್ನುವುದನ್ನು ನಿಯಂತ್ರಿಸಿದರೆ ಉತ್ತಮ.
  • ಮೊಟ್ಟೆಗಳಲ್ಲಿ ಬಯೋಟಿನ್ ಇರುವುದರಿಂದ ಇನ್ಸುಲಿನ್​ ಅನ್ನು ಉತ್ಪಾದಿಸುತ್ತದೆ. ಮಿತಿಯಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಅತಿಯಾಗಿ ತಿಂದರೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಮೊಟ್ಟೆಯನ್ನು ಹೆಚ್ಚಾಗಿ ಸೇವಿಸುವುದರಿಂದ ಮಧುಮೇಹ ಬರುವ ಸಾಧ್ಯತೆಯಿದೆ ಎಂದು ಅಧ್ಯಯನವೊಂದರಿಂದ ಬಹಿರಂಗವಾಗಿದೆ.

ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ಮೊಟ್ಟೆ ಸೇವಿಸುವುದ ಒಳ್ಳೆಯದು. ಆರೋಗ್ಯವಂತರು ವಾರಕ್ಕೆ 7 ಮೊಟ್ಟೆ, ಕೊಲೆಸ್ಟ್ರಾಲ್ ಇರುವವರು ವಾರಕ್ಕೆ 2 ಅಥವಾ 3, ಹೃದಯದ ತೊಂದರೆ ಇರುವವರು 3-4, ಮಧುಮೇಹಿಗಳಾಗಿದ್ದರೆ ವಾರಕ್ಕೆ 5 ಮೊಟ್ಟೆ ಸೇವಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net