ಒಮ್ಮೊಮ್ಮೆ ಜೀವನ ಸಾಕಾಗಷ್ಟು ಸುಸ್ತಾಗುತ್ತದೆ, ಇದು ಮುಟ್ಟು ನಿಲ್ಲುವ ಲಕ್ಷಣವೆ?

aptha
Published on
ನನಗೆ 43 ವರ್ಷ. ಇತ್ತೀಚೆಗೆ ವಿಪರೀತ ಸುಸ್ತು. ನಾನು ಉದ್ಯೋಗದಲ್ಲಿದ್ದೇನೆ. ಒಂದೊಂದು ದಿನ ಕಚೇರಿಗೆ ಹೋಗಲು ಸಾಧ್ಯವಾಗದಷ್ಟು ಸುಸ್ತು ಕಾಣಿಸುತ್ತದೆ. ಜೀವನವೇ ಬೇಡ ಎನ್ನುವಷ್ಟು ಸುಸ್ತಾಗುತ್ತದೆ/ ಕಳೆದ ಎರಡು ತಿಂಗಳಿಂದ ಮುಟ್ಟು ಆಗಿಲ್ಲ. ಈಗಲೇ ಮೆನೋಪಾಸ್ ಆರಂಭವಾಗುತ್ತಿದೆಯೇ? ಸುಸ್ತು ಕಡಿಮೆಯಾಗಲು ಏನು ಮಾಡಲಿ?

ಉತ್ತರ: ನೀವು ಒಮ್ಮೆ ರಕ್ತಪರೀಕ್ಷೆ ಮಾಡಿಸಿಕೊಳ್ಳಿ (ಟಿ3, ಟಿ4, ಟಿಎಸ್‍ಎಚ್). ಥೈರಾಯ್ಡ್ ತೊಂದರೆ ಮತ್ತು ಸಕ್ಕರೆ ಕಾಯಿಲೆ ಇದೆಯಾ ನೋಡಿಕೊಳ್ಳಿ. ಅಲ್ಲದೆ, ಕ್ಯಾಲ್ಸಿಯಂ, ವಿಟಮಿನ್ ಬಿ ಕಾಂಪ್ಲೆಕ್ಸ್ ನ್ಯೂನ್ಯತೆಯಿಂದಲೂ ಸುಸ್ತು ಕಾಣಿಸಿಕೊಳ್ಳುತ್ತದೆ.

ಕೆಲವೊಮ್ಮೆ ಮಾನಸಿಕ ಸುಸ್ತು ದೈಹಿಕ ಸುಸ್ತಾಗಿ ಪರಿಣಮಿಸುತ್ತದೆ. ಆಹಾರದಲ್ಲಿ ಹಾಲು, ಮೊಸರು, ತುಪ್ಪ, ಮೊಳಕೆಕಾಳು, ಸೊಪ್ಪುಗಳನ್ನು ಯಥೇಚ್ಛವಾಗಿ ಸೇವಿಸಿ. ಅಶ್ವಗಂಧಾರಿಷ್ಟ ಮತ್ತು ಬಲಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಊಟದ ನಂತರ ಸೇವಿಸಿ. ಮಾನಸಿಕ ಸುಸ್ತು ಕಡಿಮೆ ಮಾಡಿಕೊಳ್ಳಲು ಸಂಗೀತ, ಸಾಹಿತ್ಯ, ಗಿಡ ಬೆಳೆಸುವುದು ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net