ತೀರಾ ಸಣ್ಣಗಿದ್ದು, ಮುಜುಗರಗೊಳಗಾಗಿದ್ದೇನೆ- ಪ್ಲೀಸ್​ ದಪ್ಪ ಆಗುವ ಪರಿಹಾರ ಹೇಳಿ..

aptha
Published on
 ನನ್ನ ವಯಸ್ಸು 31. ನನಗೆ 10 ವರ್ಷದ ಮಗಳಿದ್ದಾಳೆ. ತೂಕ 39 ಕೆ.ಜಿ. ನನಗೆ 27ನೇ ವಯಸ್ಸಿನಲ್ಲಿದ್ದಾಗ ಟಿಬಿ ಬಂತು. ಇದಕ್ಕೆ 6 ತಿಂಗಳು ಚಿಕಿತ್ಸೆ ತಗೊಂಡೆ. ಈಗ ವಾಸಿಯಾಗಿದೆ. ನಾನು ತುಂಬಾನೇ ವೀಕ್ ಇದ್ದೇನೆ. ಇತ್ತೀಚೆಗೆ 2 ವರ್ಷಗಳಿಂದ ಮುಖದ ಬಲಭಾಗ ಊದಿಕೊಳ್ಳುತ್ತದೆ. ಹಣೆಯ ಭಾಗ ಜಾಸ್ತಿ ಊದಿಕೊಳ್ಳುತ್ತದೆ. ಕಣ್ಣು ಸರಿಯಾಗಿ ಕಾಣುವುದಿಲ್ಲ. ದೂರದೃಷ್ಟಿ ದೋಷ ಇದೆ.

ನಾನು ತುಂಬ ತೆಳ್ಳಗಿದ್ದೇನೆ. ತೀರಾ ಮುಜುಗರಪಡುವಂತಾಗಿದೆ. ದಪ್ಪಗಾಗಲು ಪರಿಹಾರ ತಿಳಿಸಿ. ನನ್ನ ಮಗಳಿಗೆ 10 ವರ್ಷ. 21 ಕೆಜಿ ತೂಕವಿದ್ದಾಳೆ. ನೋಡಲು ಸಣ್ಣಗಿದ್ದಾಳೆ. ನೆನಪಿನ ಶಕ್ತಿಯು ಕಡಿಮೆ ಇದೆ. ಅವಳು ದಪ್ಪವಾಗಲು ಮತ್ತು e್ಞÁಪಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ತಿಳಿಸಿ.

ಕ್ಷಯ ರೋಗಕ್ಕೆ ಉತ್ತಮ ಚಿಕಿತ್ಸೆ ಈಗ ಲಭ್ಯವಿದೆ. ಕಾಯಿಲೆ ಸಂಪೂರ್ಣ ವಾಸಿಯಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಂಡು ಚಿಕಿತ್ಸೆ ನಿಲ್ಲಿಸಿ. ಪೌಷ್ಟಿಕಾಂಶ ಉಳ್ಳ ಆಹಾರ ಸೇವನೆ, ಹಾಲು, ಬೇಳೆಕಾಳುಗಳು, ತರಕಾರಿ, ಹಣ್ಣುಗಳು, ಮೊಟ್ಟೆ ಮ್ತತು ಮಾಂಸಾಹಾರ ಸೇವಿಸುವವರಾದರೆ ಮಾಂಸಾಹಾರ ಸೇವಿಸಿ.

ದಿನಕ್ಕೆ ನಾಲ್ಕೈದು ಬಾರಿ ಆಹಾರ ಸೇವಿಸಿ. ಆಹಾರದ ಪ್ರಮಾಣವನ್ನು ಸ್ವಲ್ಪಸ್ವಲ್ಪ ಹೆಚ್ಚಿಸಿಕೊಳ್ಳಿ. ಜೇನುತುಪ್ಪವನ್ನು ಹಾಲಿಗೆ ಬೆರೆಸಿ ಕುಡಿಯಿರಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸಿಹಿ ಸೇವಿಸಿ. ಶೇಂಗಾ, ಎಳ್ಳು, ಹುರಿಗಡಲೆ ಮುಂತಾದವುಗಳಿಂದ ತಯಾರಿಸಿದ ಉಂಡೆ ಇಲ್ಲವೇ ಪಾಯಸ ಸೇವಿಸಿ. ನಿಮ್ಮ ಮಗಳಿಗೂ ಉಂಡೆ ತಿನ್ನಿಸಿ. ಸಿಹಿಗುಂಬಳವನ್ನು ತುಪ್ಪದಲ್ಲಿ ಹುರಿದು ನೀರಿನಂಶವೆಲ್ಲ ಹೋದಮೇಲೆ ದಿನಕ್ಕೊಂದು ಚಮಚದಷ್ಟು ಬೆಲ್ಲ, ಜೇನುತುಪ್ಪ ಬೆರೆಸಿ ತಿನ್ನಿ. ಇದರಿಂದ ತಿಂಗಳಿಗೆ ಎರಡು ಮೂರು ಕೆಜಿ ತೂಕ ಹೆಚ್ಚಾಗುತ್ತದೆ.

ನಿಮ್ ಮಗಳಿಗೂ ಪೋಷಕಾಂಶಗಳುಳ್ಳ ಆಹಾರ ಕೊಡಿ. ದಪ್ಪಗಾಗುತ್ತಾಳೆ. ನೆನಪಿನ ಶಕ್ತಿ ಹೆಚ್ಚಳಕ್ಕೆ ಉತ್ತಮ ಆಹಾರ, ನಿದ್ರೆ, ವ್ಯಾಯಾಮ ಬಹಳ ಮುಖ್ಯ. ಬ್ರಾಹ್ಮಿಯನ್ನು ವಾರಕ್ಕೆರಡು ಬಾರಿ ಆಹಾರದಲ್ಲಿ ಬಳಸಿ. ದಿನಕ್ಕೊಮ್ಮೆ ಅರ್ಧ ಚಮಚ ಬ್ರಾಹ್ಮಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಲು ಹೇಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net