ಆ ಜಾಗದಲ್ಲಿ ಕೆಟ್ಟ ವಾಸನೆಯಿಂದ ನನ್ನ ಮೇಲೇ ನನಗೆ ಅಸಹ್ಯ ಹುಟ್ಟಿದೆ- ಪರಿಹಾರ ಹೇಳಿ

aptha
Published on
ನನ್ನ ವಯಸ್ಸು 24. ಅವಿವಾಹಿತೆ. ನನಗೆ ಬಿಳಿ ಸೆರಗಿನ ಸಮಸ್ಯೆ ತುಂಬ ಕಾಡುತ್ತಿದೆ. ಅಲ್ಲದೆ ದುರ್ವಾಸನೆ ಬರುತ್ತದೆ. ಇದರಿಂದ ನನ್ನ ಬಗ್ಗೆ ನನಗೇ ಅಸಹ್ಯ ಎನಿಸುತ್ತದೆ. ಎಲ್ಲರೊಂದಿಗೆ ಬೆರೆಯಲೂ ಸಂಕೋಚವಾಗುತ್ತಿದೆ. ಏನು ಮಾಡುಬೇಕು ತಿಳಿಯುತ್ತಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.

ಉತ್ತರ: ನೀವು ಅಶೋಕಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರಿನೊಂದಿಗೆ ಬೆರೆಸಿ ಊಟದ ನಂತರ ಸೇವಿಸಿ. ಒಂದು ಲೀಟರ್ ನೀರಿಗೆ ಒಂದು ಚಮಚ ಅರಿಶಿನ ಹಾಕಿ ಕುದಿಸಿ ಆರಿಸಿ, ಅರಿಶಿನದ ಕಷಾಯದಿಂದ ಜನನಾಂಗವನ್ನು ದಿನಕ್ಕೆರಡು ಬಾರಿ ಸ್ವಚ್ಛಗೊಳಿಸಿಕೊಳ್ಳಿ. ಪ್ರತಿಬಾರಿ ಮೂತ್ರವಿಸರ್ಜನೆಯ ನಂತರ ಸ್ವಲ್ಪ ಬ್ಚೆಗಿನ ನೀರಿನಿಂದ ತೊಳೆದುಕೊಳ್ಳಿ.

ನೀವು ಧರಿಸುವ ಒಳ ಉಡುಪು ಬಿಸಿನೀರಿನಲ್ಲಿ ತೊಳೆದು ಬಿಸಿಲಲ್ಲಿ ಒಣಗಿಸಿ. ಅಲ್ಲದೇ ಒಮ್ಮೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಸೋಂಕು ಇದೆಯೇ ಎಂಬುದನ್ನು ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net