ಪ್ರಶ್ನೆ: ನನ್ನ ಗಂಡನಿಗೆ 45 ವರ್ಷ. ನನಗೆ 36 ವರ್ಷ. ಮದುವೆಯಾಗಿ 15 ವರ್ಷಗಳಾಗಿವೆ. ನಮಗೆ 12 ಮತ್ತು 9 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿಗೆ ನಾಲ್ಕು ವರ್ಷಗಳಿಂದ ರಕ್ತದೊತ್ತಡದ ಸಮಸ್ಯೆ ಇದೆ. ಅವರು ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ.
ಸಕ್ಕರೆ ಕಾಯಿಲೆ ಇಲ್ಲ. ಕಳೆದ 2 ವರ್ಷಗಳಿಂದ ಅವರಿಗೆ ಹಿಂದಿನಂತೆ ಸಂಭೋಗ ಮಾಡಲು ಆಗುತ್ತಿಲ್ಲ. ರಾತ್ರಿ ಸಮಯ ಅವರಿಗೆ ನಿಮಿರುವಿಕೆ ಸಾಧ್ಯವಾಗುತ್ತಿಲ್ಲ. ಬೆಳಗಿನ ಜಾವ ಮಾತ್ರ ಅಲ್ಪಮಟ್ಟಿಗೆ ಪ್ರಯತ್ನಿಸುತ್ತಾರೆ. ಗಡಸುತನವೂ ಇಲ್ಲ, ಹಿಂದಿನಷ್ಟು ವೀರ್ಯವೂ ಹೊರಚೆಲ್ಲುವುದಿಲ್ಲ. ಈ ಕಾರಣದಿಂದ ನನಗೆ ಜೀವನವೇ ಬೇಸರವಾಗಿದೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ?
ಉತ್ತರ: ನಿಮ್ಮ ಪತಿ ಈಗ ರಕ್ತದೊತ್ತಡಕ್ಕೆ ತೆಗೆದುಕೊಳ್ಳುತ್ತಿರುವ ಮಾತ್ರೆಯ ಅಡ್ಡ ಪರಿಣಾಮಗಳೇನಾದರೂ ಇದೆಯೇ ಎಂಬುದನ್ನು ನಿಮ್ಮ ಕುಟುಂಬ ವೈದ್ಯರನ್ನು ಕೇಳಿ ಅರಿತುಕೊಳ್ಳಿ. ಹಾಗೇನಾದರೂ ಇದ್ದಲ್ಲಿ ಮಾತ್ರೆ ಬದಲಾಯಿಸಿ ಕೊಡುತ್ತಾರೆ.