More

    ಹೃದಯದ ಚಿಕಿತ್ಸೆಗೂ, ಕಿವುಡುತನಕ್ಕೂ ಸಂಬಂಧವಿದೆಯಾ? ಮಾನಸಿಕ ಹಿಂಸೆಯಾಗಿದೆ… ಪರಿಹಾರ ಹೇಳಿ…

    ಹೃದಯದ ಚಿಕಿತ್ಸೆಗೂ, ಕಿವುಡುತನಕ್ಕೂ ಸಂಬಂಧವಿದೆಯಾ? ಮಾನಸಿಕ ಹಿಂಸೆಯಾಗಿದೆ... ಪರಿಹಾರ ಹೇಳಿ...ನನ್ನ ವಯಸ್ಸು 71. ಹೃದಯ ಚಿಕಿತ್ಸೆ ಪಡೆದು ಅಲೋಪಥಿ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಒಂದು ವರ್ಷದಿಂದ ಮುಂಜಾನೆ ಏಳುವ ಸಮಯದಲ್ಲಿ ತಲೆ ತಿರುಗಿದಂತೆ, ಶರೀರ ಜೋಲು ಬಂದಂತೆ ಆಗಿ ಕಳವಳಕ್ಕೀಡಾಗಿದ್ದೇನೆ. ನರರೋಗತಜ್ಞರಲ್ಲಿ, ಇಎನ್‍ಟಿ ವೈದ್ಯರಲ್ಲಿ ತೋರಿಸಿದ್ದೇನೆ. ಎಡ ಕಿವಿ ಸ್ವಲ್ಪ ಮಂದವಾಗಿ ಕೇಳುತ್ತಿದೆ ಎಂದರು. ಮತ್ತೆ ಎಡಕಿವಿಯಲ್ಲಿ ಶಬ್ದ ಆರಂಭವಾಗಿದೆ. ಆಯುರ್ವೇದ ವೈದ್ಯರಲ್ಲಿ ತೋರಿಸಿದರೆ ಎಡಕಿವಿಯ ಒಳಭಾಗದ ಕಿವಿ ಸವಕಳಿ ಆಗಿದೆಎಂದು ಮಾತ್ರೆಗಳು ನೀಡಿದರು. ಆದರೂ ಕಿವಿ ಮಂದವಾಗಿ ಕೇಳಿಸುತ್ತಿದೆ.

    ಅಲ್ಲದೆ ಎರಡೂ ಕಣ್ಣುಗಳ ಅಂಚಿನಲ್ಲಿ ನೀರಿನ ಪಸೆ ಉಂಟಾಗಿ ದೂರದ ಅಕ್ಷರ ಓದಲು ತೊಂದರೆಯಾಗಿದೆ . ಆದರೆ ಕಣ್ಣುಗಳಲ್ಲಿ ಪೊರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ನೀರಿನ ಪಸೆಯಿಂದ ಕಣ್ಣುಗಳಲ್ಲಿ ಬಿಳಿ ಪದಾರ್ಥ ಮತ್ತು ಜಿಗುಟು ದ್ರವ ಬರುತ್ತದೆ.

    ಡ್ರಾಪ್ ಹಾಕಿಸಿದ್ದೇನೆ. ಆದರೂ ಯಾವುದೂ ಕಡಿಮೆಯಾಗುತ್ತಿಲ್ಲ. ಈ ಮೇಲಿನ ಎರಡೂ ಸಮಸ್ಯೆಗಳಿಗೆ ಸೂಕ್ತವಾಗಿ ಉತ್ತರ ನೀಡಿ.

    ಉತ್ತರ: ನಿಮ್ಮ ತಲೆತಿರುಗುವ ಸಮಸ್ಯೆ ಬಹುಶಃ ವರ್ಟಿಗೋ ತೊಂದರೆಯಿಂದ ಇರಬಹುದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಗುಡೂಚಿ ಸತ್ವವನ್ನು ಒಂದು ಚಿಟಿಕೆಯಷ್ಟನ್ನು ಜೇನಿನೊಂದಿಗೆ ಬೆರೆಸಿ ಸೇವಿಸಿ. ಕಣ್ಣಿನ ಸಮಸ್ಯೆಗೆ ಒಮ್ಮೆ ನೇತ್ರತರ್ಪಣ ಚಿಕಿತ್ಸೆ ತೆಗೆದುಕೊಳ್ಳಿ. ಕಿವಿಯ ಒಳಭಾಗ ಸವಕಳಿಯಾದುದನ್ನು ಸರಿಪಡಿಸಲು ಸಾಧ್ಯವಿಲ್ಲ. ಆಡಿಯೋಗ್ರಾಮ್ ಮಾಡಿಸಿ.

    ಹಿಯರಿಂಗ್ ಏಡ್ ಧರಿಸುವುದು ಉತ್ತಮ. ಈ ಎಲ್ಲ ಸಮಸ್ಯೆಗಳು ವಯಸ್ಸಾಗುವಿಕೆಯಿಂದ ಕಂಡುಬರುವಂಥವುಗಳು. ಇವುಗಳು ಹೆಚ್ಚಾಗದಂತೆ ತಡೆಯಬಹುದೇ ಹೊರತು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ.

    ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್​ ಮಾಡಿ:
    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಏನೆಲ್ಲಾ ಸರ್ಕಸ್‌ ಮಾಡಿದರೂ ಮಲವಿಸರ್ಜನೆಯಲ್ಲಿ ತೊಂದರೆಯಾಗುತ್ತಿದೆ- ಆಯುರ್ವೇದದಲ್ಲಿ ಪರಿಹಾರವಿದೆಯ?

    ನನ್ನ ಈ ಸಮಸ್ಯೆ ಮುದ್ದಿನ ಪತ್ನಿಯನ್ನು ತೀವ್ರ ಕುಗ್ಗಿಸಿಬಿಟ್ಟಿದೆ- ಪ್ಲೀಸ್​ ನನಗೆ ಸಹಾಯ ಮಾಡಿ… ಇದರಿಂದ ಮುಕ್ತಿ ನೀಡಿ…

    ಬಿಳಿ ಸೆರಗು ಹೋಗುವುದಕ್ಕೂ, ಗರ್ಭ ಬೇಡವೆಂದು ಮಾತ್ರೆ ತೆಗೆದುಕೊಳ್ಳುವುದಕ್ಕೂ ಸಂಬಂಧವಿದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts