'ನಾನು ವಿಪರೀತ ಕುಡುಕ.. ಧನುಷ್‌ ಸಹ ಕುಡುಕನಾಗಿದ್ದ'! ತಮಿಳು ಹಾಸ್ಯನಟ ರೋಬೋ ಶಂಕರ್ ತೆರೆದಿಟ್ಟ ರಹಸ್ಯ…

dhanush-shankar
Published on

Tamil Comedian Robo Shankar Opens Up About Dhanush’s Habit Of Drinking Alcohol

ಚೆನ್ನೈ: ನಾನು ವಿಪರೀತ ಕುಡುಕ.. ಧನುಷ್‌ಗೂ ಅದೇ ರೀತಿಯಲ್ಲಿ ಅಭ್ಯಾಸವಿತ್ತು ಎಂದು| ತಮಿಳು ಹಾಸ್ಯನಟ ರೋಬೋ ಶಂಕರ್ ಇತ್ತೀಚೆಗೆ ಸಂದರ್ಷನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಈ ಹಿಂದೆ ಸೂಪರ್​ ಸ್ಟಾರ್​ ರಜನೀಕಾಂತ್​ ಅಳಿಯನಾಗಿದ್ದ ನಟ ಧನುಷ್‌ಗೆ ಮದ್ಯಪಾನ ಮಾಡುವ ಅಭ್ಯಾಸ ವಿತ್ತೆಂದು ಹೇಳಿರುವ ಸುದ್ದಿ ಈಗ ವೈರಲ್​ ಆಗಿದೆ.

ಯರು ಈ ಶಂಕರ್: ರೋಬೋ ಶಂಕರ್ ಸ್ಟ್ಯಾಂಡಪ್ ಕಾಮಿಡಿಯನ್. ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮಾರಿ ಚಿತ್ರದ ಅವರ ನಟನೆ ಜನಮೆಚ್ಚುಗೆ ಗಳಿಸಿದೆ. ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಅವರಿಗೆ ಈ ಹಿಂದೆ ಕೆಟ್ಟ ಚಟವಿತ್ತು. ಸಮಯ ಮತ್ತು ಸಂದರ್ಭವಿಲ್ಲದೆ ಅವರು ಯಾವಾಗಲೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದ ಆತನಿಗೆ ಅನಿಯಂತ್ರಿತ ಆರೋಗ್ಯ ಸಮಸ್ಯೆಗಳಿದ್ದವು. ಇದರ ಜೊತೆಗೆ ಜಾಂಡೀಸ್ ಸೋಂಕಿಗೆ ಒಳಗಾಗಿದ್ದರು.

ಧನುಷ್ ನನ್ನಂತೆಯೇ: ದನುಷ್​ಗೆ ಸಹ ನನ್ನಂತೆಯೇ ಕುಡಿತದ ಚಟವಿತ್ತು. ಇದರಿಂದಾಗಿ ಅವರು ನಾಲ್ಕು ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು. ಆಗ ಆತನಿಗೆ ಜೀವನದ ಮೌಲ್ಯದ ಅರಿವಾಯಿತು. ಪ್ರಸ್ತುತ, ಅವರು ಮದ್ಯಪಾನದಿಂದ ದೂರವಿರುತ್ತಾರೆ ಮತ್ತು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ ಎಂದು ರೋಬೋ ಶಂಕರ್ ಸಂದರ್ಶನವೊಂದರಲ್ಲಿ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ: ‘ಕುಡಿತದ ಚಟ ನಿಯಂತ್ರಿಸಲಾಗದೆ ಒಂದು ಹಂತದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದೆ. ನಾನು ಅಷ್ಟು ದೊಡ್ಡ ಕುಡುಕನಾದೆ. ನಾನು ಯಾರ ಮಾತನ್ನೂ ಕೇಳಲಿಲ್ಲ. ನಾಯಕ ಧನುಷ್ ಕೂಡ ನನ್ನಂತೆಯೇ ಡ್ರಗ್ಸ್ ಸೇವಿಸುತ್ತಿದ್ದ. ನನಗೆ ಯಾರೂ ನೇರವಾಗಿ ಅವಕಾಶಗಳನ್ನು ಕೊಡದಿದ್ದರೂ, ದನುಷ್​ ಮಾರಿ ಚಿತ್ರದೊಂದಿಗೆ ನನಗೆ ಅಭಿನಯಕ್ಕೆ ಮರುಜೀವ ನೀಡಿದರು ಎಂದಿದ್ದಾರೆ.

ನಮ್ಮ ನಡುವಿನ ಸಂಬಂಧವೇ ಹಾಗೆ!

ಮಾರಿ ಸಿನಿಮಾ ಶೂಟಿಂಗ್ ವೇಳೆ ತುಂಬಾ ಖುಷಿಯಾಗಿದ್ದೆ. ಧನುಷ್ ಹಾಕಿದ್ದ ಕನ್ನಡಕವನ್ನೂ ತೆಗೆದುಕೊಂಡೆ. ನಮ್ಮ ನಡುವೆ ಉತ್ತಮ ಸ್ನೇಹಸಂಬಂಧವಿತ್ತು. ಧನುಷ್ ನಿರ್ಣಾಯಕ ನಿರ್ಧಾರ ತೆಗೆದುಕೊಂಡರು. ಅವರು ಸ್ವಯಂಪ್ರೇರಿತವಾಗಿ ಕುಡಿಯುವುದನ್ನು ನಿಲ್ಲಿಸಿದರು. ನನಗೂ ಬೇಡವೆಂದು ಸಲಹೆ ನೀಡಿದರು. ಆದರೆ ಕಾಳಜಿ ವಹಿಸಲಿಲ್ಲ. ನಾನು ಸಾವಿನ ಅಂಚಿನಲ್ಲಿದ್ದಾಗ, ಜೀವನ ಏನು ಎಂದು ನನಗೆ ತಿಳಿಯಿತು. ಆಗ ನಾನು ಈ ಚಟವನ್ನು ನಿಲ್ಲಿಸಿದೆ. ಹಾಗಾಗಿ ಯಾರೂ ಕೆಟ್ಟ ಚಟಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳಬಾರದು’ ಎಂದು ರೋಬೋ ಶಂಕರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net