More

    ದೀಪಾವಳಿ ಸಂಭ್ರಮ: ದೆಹಲಿಯಲ್ಲಿ ದಾಖಲೆಯ 121 ಕೋಟಿ ರೂ.ಮದ್ಯ ಮಾರಾಟ!

    ನವದೆಹಲಿ: ದೀಪಾವಳಿ ಸಂದರ್ಭ ರಾಷ್ಟ್ರರಾಜಧಾನಿಯಲ್ಲಿ ಮೂರು ದಿನ ಮದ್ಯ ಸದ್ದು ಮಾಡಿದೆ. ಎಣ್ಣೆಪ್ರಿಯರು 121 ಕೋಟಿ ರೂ.ಮೌಲ್ಯದ 64 ಲಕ್ಷ ಮದ್ಯದ ಬಾಟಲಿಗಳನ್ನು ಖರೀದಿಸಿದ್ದಾರೆ.

    ಇದನ್ನೂ ಓದಿ: ಪಟಾಕಿ ಸಿಡಿಸಿದ ಅಭಿಮಾನಿಗಳು; ಹಾಗೆ ಮಾಡಬೇಡಿ ಅಂದಿದ್ಯಾಕೆ ಸಲ್ಮಾನ್ ಖಾನ್?
    ಈ ಹಿಂದೆ ದೀಪಾವಳಿ ಆಚರಣೆಗೆ ಹಿಂದಿನ ಮತ್ತು ಮುಂದಿನ ದಿನಗಳಲ್ಲಿ ಮಾಂಸ, ಮದ್ಯಾರಾಧನೆ ಮಾಡುತ್ತಿರಲಿಲ್ಲ. ಆದರೆ ಈಗ ದೇಶದೆಲ್ಲೆಡೆ ಶ್ರದ್ಧಾ, ಭಕ್ತಿಯಿಂದ ಮಾಡುವ ಹಬ್ಬಗಳ ಸಂದರ್ಭದಲ್ಲೂ ಮಾಂಸ ಸೇವನೆ ಜತೆಗೆ ಮದ್ಯಪಾನ ಮಾಡುವುದನ್ನು ಹಲವರು ರೂಢಿಸಿಕೊಂಡಿದ್ದಾರೆ. ಹೀಗಾಗಿಯೇ ದೆಹಲಿಯಲ್ಲಿ ದೀಪಾವಳಿ ಸಂದರ್ಭದ ಒಂದು ವಾರದ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ಮದ್ಯದ ಬಾಟಲಿಗಳನ್ನು ಜನರು ಖರೀದಿಸಿದ್ದಾರೆ. ಮದ್ಯ ಮಾರಾಟದಿಂದ ಸರ್ಕಾರವು 234.15 ಕೋಟಿ ರೂಪಾಯಿಗಳಿಸಿದೆ.

    ಅಬಕಾರಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ‘ದೆಹಲಿಯಲ್ಲಿ ಹೋಳಿ, ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು, ಇದನ್ನು ವೈಯಕ್ತಿಕ ಬಳಕೆ ಮತ್ತು ಸಂಗ್ರಹಣೆಗೆ ಮಾತ್ರವಲ್ಲದೆ ಉಡುಗೊರೆಯಾಗಿ ನೀಡಲು ಸಹ ಖರೀದಿಸಲಾಗುತ್ತದೆ.

    ಅಬಕಾರಿ ಇಲಾಖೆ ಅಧಿಕೃತ ಅಂಕಿಅಂಶಗಳ ಪ್ರಕಾರ ದೀಪಾವಳಿಯ ಹಿಂದಿನ 17 ದಿನಗಳಲ್ಲಿ ಮೂರು ಕೋಟಿಗೂ ಹೆಚ್ಚು ಬಾಟಲಿಗಳು ಮಾರಾಟವಾಗಿದ್ದು, 525.84 ಕೋಟಿ ವಹಿವಾಟು ನಡೆದಿದೆ. ದೀಪಾವಳಿಗೆ ಮುನ್ನವೇ ಮದ್ಯ ಮಾರಾಟದಲ್ಲಿ ಬಿರುಸಿನ ವಹಿವಾಟು ನಡೆದಿದ್ದು, ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಕ್ರಮವಾಗಿ 17.33 ಲಕ್ಷ, 18.89 ಲಕ್ಷ ಮತ್ತು 27.89 ಲಕ್ಷ ಬಾಟಲಿಗಳು ಮದ್ಯದಂಗಡಿಗಳಲ್ಲಿ ಮಾರಾಟವಾಗಿವೆ. ದೀಪಾವಳಿಯಂದು ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನು ಕಳೆದ ವರ್ಷ ದೀಪಾವಳಿಯ ಮೂರು ದಿನಗಳಲ್ಲಿ ಕ್ರಮವಾಗಿ 13.46 ಲಕ್ಷ, 15 ಲಕ್ಷ ಮತ್ತು 19.39 ಲಕ್ಷ ಬಾಟಲಿಗಳ ಮದ್ಯ ಮಾರಾಟವಾಗಿತ್ತು. 2022ರ ದೀಪಾವಳಿಯ ಹಿಂದಿನ 17 ದಿನಗಳಲ್ಲಿ ದೆಹಲಿಯಲ್ಲಿ 2.11 ಕೋಟಿ ಮದ್ಯದ ಬಾಟಲಿಗಳು ಮಾರಾಟವಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Gold, Silver Price; ದೀಪಾವಳಿ ಹಬ್ಬದ ಸಂಭ್ರಮ; ಚಿನ್ನ, ಬೆಳ್ಳಿ ಖರೀದಿಸಲು ಸೂಕ್ತ ದಿನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts