ಮನೆಯಲ್ಲೇ ಶುದ್ಧವಾದ ಪ್ರೋಟೀನ್​ ಪೌಡರ್​ ಮಾಡುವುದು ಹೇಗೆ? ಇಲ್ಲಿದೆ ನೋಡಿ ಎರಡು ವಿಧಾನ... Protein Powder

Protein Powder
Published on

Protein Powder : ದೇಹದ ಸ್ನಾಯುಗಳನ್ನು ನಿರ್ಮಿಸಲು, ತೂಕವನ್ನು ಕಳೆದುಕೊಳ್ಳಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಪ್ರೋಟೀನ್ ಪೌಡರ್​ ಪ್ರಯೋಜನಕಾರಿಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಪ್ರೋಟೀನ್ ಪೌಡರ್​ಗಳ ಬೆಲೆ ಹೆಚ್ಚು. ಇದಲ್ಲದೆ, ಅವು ಸಂರಕ್ಷಕಗಳು, ಕೃತಕ ಸುವಾಸನೆ ಮತ್ತು ಸಕ್ಕರೆಯಂತಹ ಅಂಶಗಳನ್ನು ಒಳಗೊಂಡಿರಬಹುದು. ಹೀಗಾಗಿ ಇವು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು.

ಯಾವುದೇ ಕೃತಕ ಪದಾರ್ಥಗಳನ್ನು ಬಳಸದೇ ಮನೆಯಲ್ಲಿಯೇ ಶುದ್ಧವಾದ ಹಾಗೂ ಕೈಗೆಟುಕುವ ದರದಲ್ಲಿ ಪ್ರೋಟೀನ್ ಪೌಡರ್​ ಅನ್ನು ತಯಾರಿಸಿ ಮಾಡಿಕೊಳ್ಳಬಹುದು. ಮನೆಯಲ್ಲಿ ತಯಾರಿಸಿದ ಪ್ರೋಟೀನ್ ಪೌಡರ್​ನಲ್ಲಿ ನಿಮ್ಮ ರುಚಿ ಮತ್ತು ಅಗತ್ಯಗಳಿಗೆ ಅನುಗುಣವಾಗಿ ನೀವು ಪದಾರ್ಥಗಳನ್ನು ಸೇರಿಸಬಹುದು. ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಪೌಷ್ಟಿಕಾಂಶದಿಂದಲೂ ಸಮೃದ್ಧವಾಗಿದೆ. ಹೀಗಾಗಿ ಪ್ರೋಟೀನ್​ ಪೌಡರ್​ ಅನ್ನು ಮನೆಯಲ್ಲಿಯೇ ಹೇಗೆ ಮಾಡಬೇಕೆಂದು ನಾವೀಗ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು

ಕೊಬ್ಬಿನಾಂಶ ಇಲ್ಲದ ಹಾಲಿನ ಪುಡಿ- 3 ಕಪ್, ಒಣ ಓಟ್ಸ್ - 1 ಕಪ್, ಬಾದಾಮಿ - 1 ಕಪ್, ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಬೇಕಿದ್ದರೆ. ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಕಾಲು ಕಪ್ ಕೋಕೋ ಪೌಡರ್ ಅನ್ನು ಕೂಡ ಸೇರಿಸಬಹುದು. ಇವೆಲ್ಲವನ್ನೂ ಮಿಕ್ಸಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ, ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ. ಒಂದು ವೇಳೆ ದೊಡ್ಡ ಪ್ರಮಾಣದಲ್ಲಿ ತಯಾರಿಸಿದರೆ, ಅದನ್ನು ಫ್ರಿಜ್​ನಲ್ಲಿ ಸಂಗ್ರಹಿಸಬಹುದು. ಇದನ್ನು ಪ್ರತಿದಿನ ಬಳಸಿದರೆ ತುಂಬಾ ಒಳ್ಳೆಯದು.

ಒಂದೂವರೆ ಕಪ್ ಪ್ರೋಟೀನ್ ಪೌಡರ್ 180 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ನೀವು ಈ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಬಹುದು ಅಥವಾ ಸ್ಮೂಥಿಗಳು ಹಾಗೂ ಮಿಲ್ಕ್​ ಶೇಕ್‌ಗಳಿಗೆ ಸೇರಿಸಬಹುದು.

ಇದನ್ನೂ ಓದಿ: ಸಾವಿಗೂ ಒಂದು ಗಂಟೆಯ ಮುಂಚೆ ಏನಾಗುತ್ತದೆ? ಗರುಡ ಪುರಾಣದಲ್ಲಿದೆ ಅಚ್ಚರಿಯ ಸಂಗತಿ! Garuda Puranaಇದನ್ನು ಹೊರತುಪಡಿಸಿದರೆ ಇನ್ನೊಂದು ರೀತಿಯಲ್ಲಿ ಪ್ರೋಟೀನ್ ಪೌಡರ್​ ಅನ್ನು ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು

ಬಾದಾಮಿ, ಪಿಸ್ತಾ, ವಾಲ್‌ನಟ್ಸ್, ಕಡಲೆಕಾಯಿ, ಸೋಯಾ ಬೀನ್ಸ್, ಕುಂಬಳಕಾಯಿ ಬೀಜಗಳು, ಅಗಸೆ ಬೀಜಗಳು, ಚಿಯಾ ಬೀಜಗಳು, ಓಟ್ಸ್, ಹಾಲಿನ ಪುಡಿ. ಪ್ರತಿಯೊಂದನ್ನು ಕಾಲು ಕಪ್ ತೆಗೆದುಕೊಳ್ಳಿ. ಹಾಲಿನ ಪುಡಿಯನ್ನು ಹೊರತುಪಡಿಸಿ ಉಳಿದ ಪದಾರ್ಥಗಳನ್ನು ಪ್ರತ್ಯೇಕವಾಗಿ ಒಣಗಿಸಿ. ನೀವು ಎಲ್ಲವನ್ನೂ ಒಟ್ಟಿಗೆ ಹುರಿದರೆ, ಅವುಗಳಲ್ಲಿ ಕೆಲವು ಸುಟ್ಟುಹೋಗುವ ಅಪಾಯವಿದೆ. ಹೀಗಾಗಿ ಒಂದೊಂದನ್ನು ಉರಿದುಕೊಳ್ಳಿ. ತಣ್ಣಗಾದ ನಂತರ ಹಾಲಿನ ಪುಡಿಯೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

ರುಬ್ಬಿದ ಬಳಿಕ ಪೌಡರ್​ ಅನ್ನು ಶೋಧಿಸಿದರೆ ಮೃದುವಾದ ಪುಡಿಯಾಗುತ್ತದೆ. ನೀವು ಬಯಸಿದರೆ, ಅದಕ್ಕೆ ಕಾಲು ಕಪ್ ಕೋಕೋ ಪೌಡರ್ ಅನ್ನು ಕೂಡ ಸೇರಿಸಬಹುದು. ಜರಡಿಯಲ್ಲಿ ಉಳಿದ ಪೌಡರ್​ ಅನ್ನು ಎಸೆಯುವ ಅಗತ್ಯವಿಲ್ಲ. ನೀವು ಇದನ್ನು ಯಾವುದೇ ಪಾಯಸ ಅಥವಾ ಹಲ್ವಾದಲ್ಲಿ ಬೆರೆಸಬಹುದು. ನೀವು ಇದನ್ನು ಹಾಲು, ಸ್ಮೂಥಿಗಳು ಮತ್ತು ಮಿಲ್ಕ್​ಶೇಕ್‌ಗಳಲ್ಲಿ ಬೆರೆಸಿ ಕುಡಿಯಬಹುದು. ಒಂದು ಕಪ್​ ಪುಡಿಯು ಸರಿಸುಮಾರು ಹನ್ನೊಂದು ಗ್ರಾಂ ಪ್ರೋಟೀನ್ ಮತ್ತು 45 ಕ್ಯಾಲೋರಿಗಳನ್ನು ಹೊಂದಿರುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net