

Horoscope 2025 : ಇನ್ನು ಕೆಲವೇ ದಿನಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ. ಅಂತೆಯೇ, 2025ರ ಜಾತಕದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಹೊಸ ವರ್ಷದಲ್ಲಿ ಶನಿಯ ಪ್ರಭಾವವನ್ನು ಎದುರಿಸಲಿದ್ದಾರೆ.
ಶನಿ ದೇವರನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿ ಮಹಾತ್ಮ ಪ್ರತಿಯೊಬ್ಬ ವ್ಯಕ್ತಿಯ ಅರ್ಹತೆ ಮತ್ತು ದೋಷಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆಂದು ನಂಬಲಾಗಿದೆ. ಎಲ್ಲ ಜನರು ಶನಿ ದೇವರಿಗೆ ಭಯಪಡುತ್ತಾರೆ. ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ಅನುಗುಣವಾಗಿ ಶನಿ ನಮಗೆ ಫಲಿತಾಂಶವನ್ನು ನೀಡುತ್ತಾನೆಂದು ನಂಬಲಾಗಿದೆ.
ಅಂದಹಾಗೆ 2025ರಲ್ಲಿ ಶನಿ ಗ್ರಹವು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿದೆ. ಇದರ ಪರಿಣಾಮ ಎಲ್ಲ 12 ರಾಶಿಚಕ್ರದ ಚಿಹ್ನೆಗಳಲ್ಲಿ ಕಂಡುಬರುತ್ತದೆ. ಆದರೆ, 2025ರಲ್ಲಿ, ನಿರ್ದಿಷ್ಟ 3 ರಾಶಿಚಕ್ರ ಚಿಹ್ನೆಗಳಿಗೆ ಶನಿ ಪ್ರಭಾವ ತೀವ್ರವಾಗಿರುತ್ತದೆ. ಈ ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಅವರು ಮುಂಬರುವ ಅಪಾಯದಿಂದ ಪಾರಾಗುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ. ಅವರು ಯಾವ ರಾಶಿಯವರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರು 2025ರ ಮಾರ್ಚ್ 29ರವರೆಗೆ ಶನಿಯಿಂದ ದೃಷ್ಟಿಯಿಂದ ಪ್ರಭಾವಿತರಾಗುತ್ತಾರೆ. ಇದಾದ ನಂತರ ಶನಿಯು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸಿದಾಗ ಅದರ ಪ್ರಭಾವವು ಸಿಂಹ ಮತ್ತು ಧನು ರಾಶಿಯಲ್ಲಿ ಆರಂಭವಾಗುತ್ತದೆ. ಈ ಪ್ರಭಾವವು ಎರಡೂವರೆ ವರ್ಷಗಳವರೆಗೆ ಇರುತ್ತದೆ. ಈ ರಾಶಿಯವರು ಮಾಡಬೇಕಾದ ಪರಿಹಾರಗಳು ಇಲ್ಲಿದೆ.
* ಶನಿಯ ಪ್ರಭಾವದಿಂದ ಮುಕ್ತಿ ಹೊಂದಲು ಪ್ರತಿ ಶನಿವಾರ ಉಪವಾಸ ಮಾಡಬೇಕು.
* ಉಪವಾಸದ ಸಮಯದಲ್ಲಿ ಶನಿಯ ಮೂರ್ತಿಗೆ ಎಳ್ಳೆಣ್ಣೆ ಸುರಿದು ಪೂಜಿಸಬಹುದು. ಇದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ.
* ಪ್ರತಿ ಶನಿವಾರ ಅಥವಾ ಅಮಾವಾಸ್ಯೆ ದಿನ ಕುಷ್ಠರೋಗಿಗಳಿಗೆ ಅನ್ನ, ಪಾದರಕ್ಷೆ, ಬಟ್ಟೆ ಇತ್ಯಾದಿಗಳನ್ನು ದಾನ ಮಾಡಿ.
* ನಾವು ಕಪ್ಪು ನಾಯಿ ಮತ್ತು ಕಪ್ಪು ಹಸುವಿಗೆ ಬ್ರೆಡ್ ತಿನ್ನಿಸಿದರೆ ಶನಿಗ್ರಹವನ್ನು ಮೆಚ್ಚಿಸಬಹುದು. ಇದಲ್ಲದೆ, ನೀವು ಮೀನುಗಳಿಗೆ ಹಿಟ್ಟಿನ ಚೆಂಡುಗಳನ್ನು ಕೊಳದಲ್ಲಿ ಹಾಕಬಹುದು. ಇದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ.
* ಶನಿಗೆ ಪೂಜೆ ಮಾಡುವಾಗ ಶನಿ ಮಂತ್ರಗಳನ್ನು ಪಠಿಸಬೇಕು. ಮಂತ್ರಗಳನ್ನು ಸರಿಯಾಗಿ ಪಠಿಸುವುದು ಮುಖ್ಯ.
* ಪ್ರತಿ ಶನಿವಾರ, ನೀವು ಕಪ್ಪು ಬಟ್ಟೆಗಳನ್ನು ಧರಿಸಬಹುದು ಏಕೆಂದರೆ ಶನಿ ದೇವರು ಕಪ್ಪು ಬಣ್ಣವನ್ನು ಇಷ್ಟಪಡುತ್ತಾನೆ. ಹೀಗೆ ಮಾಡುವುದರಿಂದ ಶನಿಯ ಪ್ರಭಾವದಿಂದ ಪಾರಾಗಬಹುದು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.