

Garuda Purana : ಯಾರೇ ಆಗಲಿ ಒಂದಲ್ಲ ಒಂದು ದಿನ ಸಾಯುವುದು ಖಚಿತ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಒಬ್ಬ ವ್ಯಕ್ತಿ ಸತ್ತಾಗ ಏನಾಗುತ್ತದೆ? ಸಾಯುತ್ತಿರುವ ವ್ಯಕ್ತಿಯು ತನ್ನ ಸಾವನ್ನು ಮೊದಲೇ ಅನುಭವಿಸಲು ಪ್ರಾರಂಭಿಸುತ್ತಾನೆಯೇ? ಸಾವು ಸಮೀಪಿಸುತ್ತಿದ್ದಂತೆ, ಆತ ಏನನ್ನು ನೋಡಲು ಪ್ರಾರಂಭಿಸುತ್ತಾನೆ? ಎಂಬ ಪ್ರಶ್ನೆ ಯುಗಯುಗಾಂತರಗಳಿಂದ ನಿಮ್ಮ ಮನಸ್ಸಿನಲ್ಲಿದೆ.
ಸಾವಿಗೂ ಮುನ್ನ ಜೀವನಕ್ಕೆ ಸಂಬಂಧಿಸಿದ ಕೆಲವು ರಹಸ್ಯಗಳ ಬಗ್ಗೆ ಆಘಾತಕಾರಿ ಸಂಗತಿಗಳನ್ನು ನಾವೀಗ ತಿಳಿದುಕೊಳ್ಳೋಣ. ಸಾವಿಗೆ ಸಂಬಂಧಿಸಿದ ಕುತೂಹಕಾರಿ ಸಂಗತಿಗೆ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಪೂರ್ವಜರ ಗೋಚರತೆ: ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಮರಣವು ಸಮೀಪಿಸುತ್ತಿದ್ದಂತೆ ಆತ ಮುಂಚಿತವಾಗಿಯೇ ಕೆಲವು ಸಂಕೇತಗಳನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಆ ವ್ಯಕ್ತಿಯ ಕೈಯಲ್ಲಿನ ರೇಖೆಗಳು ಹಗುರವಾಗಲು ಪ್ರಾರಂಭಿಸುತ್ತವೆ. ಕಣ್ಣುಗಳ ಮುಂದೆ ಕತ್ತಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ದೃಷ್ಟಿ ಕಡಿಮೆಯಾಗುತ್ತಾ ಬರುತ್ತದೆ. ಸಾಯುವ ಮುಂಚೆ ತಮ್ಮ ಪೂರ್ವಜರನ್ನು ತಮ್ಮ ಕನಸಿನಲ್ಲಿ ನೋಡಲು ಪ್ರಾರಂಭಿಸುತ್ತಾರೆ. ಅಲ್ಲದೆ, ಪೂರ್ವಜರು ತಮ್ಮೊಂದಿಗೆ ಕಳೆದ ಎಲ್ಲ ಒಳ್ಳೆಯ ಸಮಯವನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಅವರು ಅಪ್ಪಿಕೊಂಡು ತಮ್ಮ ಹತ್ತಿರ ಬರುವಂತೆ ಬೇಡಿಕೊಳ್ಳುತ್ತಿರುವಂತೆ ಭಾಸವಾಗುತ್ತದೆ.
ಇದನ್ನೂ ಓದಿ: ಎಸ್ಐ, ಲೇಡಿ ಪೊಲೀಸ್, ಯುವಕನ ಶವ ಕರೆಯಲ್ಲಿ ಪತ್ತೆ! ಭಾರಿ ಸಂಚಲನ ಸೃಷ್ಟಿಸಿದ ಪ್ರಕರಣ! ಸಾವಿಗೆ ಕಾರಣವೇನು? Police Officersನೆರಳು ಕಣ್ಮರೆಯಾಗುತ್ತದೆ: ಗರುಡ ಪುರಾಣದ ಪ್ರಕಾರ, ಒಬ್ಬನ ಮರಣದ ಅಂತಿಮ ಕ್ಷಣ ಸಮೀಪಿಸಿದಾಗ, ಅವನು ತನ್ನ ಪ್ರತಿಬಿಂಬವನ್ನು ಎಣ್ಣೆ, ತುಪ್ಪ, ಲೋಟ ಅಥವಾ ನೀರಿನಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಅವನ ನೆರಳು ಅವನನ್ನು ಬಿಟ್ಟು ಹೋಗುತ್ತದೆ. ಯಾರಾದರೂ ಸಾವಿನಿಂದ ಒಂದು ಗಂಟೆ ದೂರದಲ್ಲಿದ್ದಾಗ, ಯಾವುದೋ ನಕಾರಾತ್ಮಕ ಶಕ್ತಿಯು ತಮ್ಮ ಹತ್ತಿರದಲ್ಲಿದೆ ಎಂದು ಅವರು ಭಾವಿಸುತ್ತಾರೆ. ಯಮಧರ್ಮರಾಜನು ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾನೆಂದು ಅರಿತುಕೊಳ್ಳುತ್ತಾರೆ. ಅವನ ದೇಹವು ಕ್ರಮೇಣ ನಿರ್ಜೀವವಾಗುತ್ತದೆ ಮತ್ತು ಏನನ್ನೂ ಮಾಡಲಾಗೇದೆ ಉಸಿರು ಬಿಡುತ್ತಾನೆ.
ಗರುಡ ಪುರಾಣದಲ್ಲಿ, ಒಬ್ಬ ವ್ಯಕ್ತಿಯು ಸಾಯುವ ಮೊದಲು ಸುಮಾರು 1 ಗಂಟೆ ಇದ್ದಾಗ, ಅವನು ನಿಗೂಢ ಬಾಗಿಲನ್ನು ನೋಡಲು ಪ್ರಾರಂಭಿಸುತ್ತಾನೆ ಎಂದು ಹೇಳಲಾಗುತ್ತದೆ. ಆ ಬಾಗಿಲಿನಿಂದ ಬೆಂಕಿಯ ಕಿರಣಗಳು ಹೊರಬರುತ್ತವೆ. ಅದನ್ನು ನೋಡಿದಾಗ, ಆ ವ್ಯಕ್ತಿಯು ತನ್ನ ಜೀವನದಲ್ಲಿ ಮಾಡಿದ ಎಲ್ಲ ಕೆಟ್ಟ ಕೆಲಸಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತಾನೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.