

ರಾಮ ಕಿಶನ್ ಕೆ.ವಿ.
ಬೆಂಗಳೂರು: ದೇಶದ ಮುಂಚೂಣಿಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಏಥರ್ ಎನರ್ಜಿ ಆಕರ್ಷಕ ಫೀಚರ್ ಹೊಂದಿರುವ 450ಎಸ್ ಹಾಗೂ 450ಎಕ್ಸ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ನೂತನ ವಾಹನವು ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿದ್ದು, ಗಂಟೆಗೆ 90 ಕಿ.ಮೀ. ಟಾಪ್ ಸ್ಪೀಡ್ ನೀಡುತ್ತದೆ. ಡೀಪ್ ವ್ಯೂ ಡಿಸ್ಪ್ಲೇ, ವಿನೂತನ ಸ್ವಿಚ್ ಗೇರ್, ಫಾಲ್ ಸೇಫ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್ಎಸ್) ಹೊಂದಿದೆ. ಗ್ರಿಡ್ ಫಾಸ್ಟ್ ಚಾರ್ಜರ್ ವೇಗವಾಗಿ ಚಾರ್ಜಿಂಗ್ ಮಾಡಬಹುದಾಗಿದೆ. 450 ಎಕ್ಸ್ಗೆ ಹೋಲಿಸಿದರೆ 450ಎಸ್ ಅನ್ನು ಸಾಕಷ್ಟು ನವೀಕರಿಸಲಾಗಿದೆ.
ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಏಥರ್ 450ಎಸ್ ಆಕರ್ಷಕ ವಿನ್ಯಾಸ ಹೊಂದಿದ್ದು, ಯುವಜನರಿಗೆ ಹೆಚ್ಚು ಇಷ್ಟವಾಗುತ್ತದೆ. ಇತರ ಸ್ಕೂಟರ್ಗಳಿಗೆ ಹೋಲಿಸಿದರೆ ನೋಡಲು ಸಣ್ಣದಾಗಿ ಕಂಡರೂ, ಇಬ್ಬರು ಸವಾರರು ಆರಾಮವಾಗಿ ಪ್ರಯಾಣಿಸಬಹುದು.
ಏಥರ್ 450ಎಸ್ ಸ್ಕೂಟರ್ 3.9 ಸೆಕೆಂಡ್ನಲ್ಲಿ 0-40 ಕಿ.ಮೀ. ವೇಗ ಹೊಂದುತ್ತದೆ. ಪೂರ್ಣಪ್ರಮಾಣದಲ್ಲಿ ಒಂದು ಬಾರಿ ಚಾರ್ಜ್ ಮಾಡಿದರೆ 115 ಕಿ.ಮೀ. ಪ್ರಯಾಣಿಸಬಹುದು. ಜತೆಗೆ ಇದೇ ಮೊದಲ ಬಾರಿಗೆ ಆಟೋ ಬೆಟ್ನೆಸ್ ಡಿಸ್ಪ್ಲೇ ಪರಿಚಯಿಸಿದ್ದು, 450ಎಸ್ ಮತ್ತು 450ಎಕ್ಸ್ ಎರಡೂ ವಾಹನಗಳು ಹೊಸ ಸ್ವಿಚ್ ಗೇರ್ ಹೊಂದಿವೆ. ಅಲ್ಲದೆ ಒನ್ ಕ್ಲಿಕ್ ರಿವರ್ಸ್ ಮತ್ತು ಜಾಯ್ ಸ್ಟಿಕ್ ಹೊಂದಿದ್ದು, ಸವಾರರಿಗೆ ಹೊಸ ಅನುಭವ ನೀಡುತ್ತದೆ.
ಫಾಲ್ ಸೇಫ್ ಸೌಲಭ್ಯ ನೀಡಲಾಗಿದ್ದು, ಸವಾರರು ಆಯತಪ್ಪಿ ಬೀಳುವ ಸಂದರ್ಭದಲ್ಲಿ ಸ್ಕೂಟರ್ ವೇಗ ಮತ್ತು ಆ್ಯಕ್ಸಲರೇಷನ್ ಬದಲಾವಣೆಗೆ ನೆರವಾಗುತ್ತದೆ. ತಕ್ಷಣ ಇಂಜಿನ್ ಆ್ ಮಾಡಿ ಸ್ಕಿಡ್ ಆಗುವುದನ್ನು ತಪ್ಪಿಸಲಿದ್ದು, ಇಂಡಿಕೇಟರ್ ಲೈಟ್ಗಳು ಆನ್ ಆಗುತ್ತವೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಯೂರೋಪ್ ಕಾನೂನಿನಂತೆ ಹೊಸ "ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್' ಅಳವಡಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದನ್ನು ಮೊದಲ ಬಾರಿಗೆ ಪರಿಚಯಿಸಲಾಗಿದ್ದು, ಅಪಘಾತಗಳನ್ನು ತಪ್ಪಿಸಲು ಅನುಕೂಲ ಕಲ್ಪಿಸಲಿದೆ. ಸವಾರ ಗಂಟೆಗೆ 50 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಾಗುವಾಗ ಪ್ಯಾನಿಕ್ ಬ್ರೇಕ್ ಹಾಕಿದರೆ ಬ್ರೇಕ್ ಲೈಟ್ಗಳು ನಿರಂತರವಾಗಿ ಆನ್ ಆಗುವ ಮೂಲಕ ಇತರ ಸವಾರರಿಗೆ ಕಾಣುವಂತೆ ಎಚ್ಚರಿಕೆ ನೀಡುವ ಸೌಲಭ್ಯ ಹೊಂದಿದೆ.
ಹೊಸ ಏಥರ್ 450ಎಸ್ ಸ್ಕೂಟರ್ ಮೂಲಕ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ. 450ಎಸ್ 125ಸಿಸಿ ಹೊಂದಿರುವ ವಾಹನವು ಹೊಸ ಮೈಲುಗಲ್ಲು ಸಾಧಿಸಿದ್ದು, ಡೀಪ್ ವ್ಯೂ ಡಿಸ್ಪ್ಲೇ ಡ್ಯಾಶ್ ಬೋರ್ಡ್ ಹೊಂದಿದೆ. ಜತೆಗೆ ಸವಾರರಿಗೆ ಆರಾಮದಾಯಕ ಪ್ರಯಾಣ ಮತ್ತು ಹೆಚ್ಚಿನ ಸುರಕ್ಷತೆ ನೀಡುತ್ತದೆ. ಏಥರ್ ಎನರ್ಜಿ ದೇಶಾದ್ಯಂತ 1,400ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಚಾರ್ಜರ್ಗಳನ್ನು ಅಳವಡಿಸಿದೆ.
> ತರುಣ್ ಮೆಹ್ತಾ, ಏಥರ್ ಎನರ್ಜಿ ಸಹ ಸಂಸ್ಥಾಪಕ ಮತ್ತು ಸಿಇಒ