ಎಸಿ ಇಲ್ಲದ ವಿಮಾನದಲ್ಲಿ 5ತಾಸು ಉಸಿರಾಟದ ಸಮಸ್ಯೆ ಎದುರಿಸಿದ ಪ್ರಯಾಣಿಕರು! ಕಡೆಗೆ ಆಗಿದ್ದಾದರೂ ಏನು? ವಿವರ ಇಲ್ಲಿದೆ..

flaight
Published on

ಮುಂಬೈ: ಮಾರಿಷಸ್ ಫ್ಲೈಟ್ ಎಂಕೆ - 749 ವಿಮಾನದಲ್ಲಿ ಅಸಮರ್ಪಕ ಎಸಿಯಿಂದಾಗಿ ಹಲವು ಶಿಶುಗಳು ಮತ್ತು ಒಬ್ಬ ಹಿರಿಯ ಪ್ರಯಾಣಿಕ ಉಸಿರಾಟದ ಸಮಸ್ಯೆಯಿಂದ ಬಳಲಿದ್ದು, ದೂರು ಬಂದ ಬಳಿಕ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು.

ಅಸ್ವಸ್ಥಗೊಂಡಿದ್ದ 78 ವರ್ಷದ ಪ್ರಯಾಣಿಕನನ್ನು ಬಾನುದುತ್ ಬೂಲೌಕಿ ಎಂದು ಗುರುತಿಸಲಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ಶನಿವಾರ ಮುಂಜಾನೆ 4:30ಕ್ಕೆ ವಿಮಾನ ಹೊರಡಬೇಕಿತ್ತು. ಮುಂಜಾನೆ 3.45ಕ್ಕೆ ಪ್ರಯಾಣಿಕರು ಹತ್ತಿದರು. ಆದರೆ ವಿಮಾನದಲ್ಲಿ ಇಂಜಿನ್ ಸಮಸ್ಯೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಸುಮಾರು 5 ಗಂಟೆ ವಿಮಾನದೊಳಗೇ ಇದ್ದರು ಈ ಸಂದರ್ಭದಲ್ಲಿ ಸಿಬ್ಬಂದಿ ಪ್ರಯಾಣಿಕರಿಗೆ ಇಳಿಯಲು ಅವಕಾಶ ನೀಡಲಿಲ್ಲ. ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ವಿಮಾನಯಾನ ಸಂಸ್ಥೆ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ.

ಪ್ರಯಾಣಿಕರೊಬ್ಬರ ಪ್ರಕಾರ, ಬೆಳಳಗ್ಗೆ 4:30 ಕ್ಕೆ ಹೊರಡಬೇಕಾಗಿದ್ದ ವಿಮಾನವು ಎಂಜಿನ್ ಸಮಸ್ಯೆಯಿಂದಾಗಿ 5 ಗಂಟೆ ಸ್ಥಗಿತಗೊಂಡಿದೆ. ಪ್ರಯಾಣಿಕರು ಬೆಳಗ್ಗೆ 3:45 ರ ಸುಮಾರಿಗೆ ಹತ್ತಿದರು. ನಂತರ ವಿಮಾನದೊಳಗೆ ಲಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಹವಾನಿಯಂತ್ರಣವು ಕಾರ್ಯನಿರ್ವಹಿಸದೆ ಇರುವ ಕಾರಣ ತೀವ್ರ ಅಸ್ವಸ್ಥತೆಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net