ಮುಂದಿನ ಚಿತ್ರದತ್ತ ಮಹೇಶ್ ಬಾಬು ಚಿತ್ತ: ಗುಟ್ಟು ಬಿಡದಂತೆ ಸೂಚಿಸಿದರೇ ರಾಜಮೌಳಿ?! ಕಾರಣ ಇದೇ ನೋಡಿ..

rajamouly-mahesh babu
Published on

ಹೈದರಾಬಾದ್​: ಸೂಪರ್ ಸ್ಟಾರ್ ಮಹೇಶ್ ಬಾಬು ಈಗಾಗಲೇ ಗುಂಟೂರು ಕಾರಂ ಮುಗಿಸಿ ತಮ್ಮ ಮುಂದಿನ ಚಿತ್ರದತ್ತ ಗಮನ ಹರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಲಿದ್ದಾರೆ. ಆದರೆ ಮಹೇಶ್​ ಬಾಬು ಈ ಚಿತ್ರಕ್ಕೆ ಹಲವು ಷರತ್ತುಗಳನ್ನು ಹಾಕುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ.

ಇನ್ನು ಮಹೇಶ್ ಬಾಬು ಮನವೊಲಿಸಲು ರಾಜಮೌಳಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಆರ್ ಆರ್ ಆರ್ ಸಿನಿಮಾ ಮುಗಿಸಿದ ರಾಜಮೌಳಿ ಈಗ ಮಹೇಶ್ ಬಾಬು ಸಿನಿಮಾದತ್ತ ಗಮನ ಹರಿಸಿದ್ದಾರೆ. ಮಹೇಶ್ ಬಾಬು ಅವರ ವೃತ್ತಿ ಜೀವನದಲ್ಲಿ 29ನೇ ಸಿನಿಮಾ ಆಗಲಿರುವ ಈ ಸಿನಿಮಾದ ಕಥೆ ಇದು ಎಂದು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಈ ಸಿನಿಮಾವನ್ನು ಇಂಡಿಯಾನಾ ಜೋನ್ಸ್ ನಂತೆ ವಿಶ್ವದಾದ್ಯಂತ ಎಲ್ಲರೂ ಮೆಚ್ಚುವ ರೀತಿಯಲ್ಲಿ ಮಾಡಲಾಗುವುದು ಎಂದು ಸುಳಿವು ನೀಡಿದ್ದಾರೆ.

ಆದರೆ ಇದೀಗ ಈ ಸಿನಿಮಾಗೆ ಸಂಬಂಧಿಸಿದ ಪ್ರಚಾರವೊಂದು ಮುನ್ನೆಲೆಗೆ ಬಂದಿದೆ. ಅದೇನೆಂದರೆ, ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಹಲವು ಪ್ರಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರ್​ಆರ್​ಆರ್​ ಸಿನಿಮಾ ವೇಳೆ ಪ್ರೆಸ್ ಮೀಟ್ ಏರ್ಪಡಿಸಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿ ಒಂದಷ್ಟು ಕ್ಲಾರಿಟಿ ನೀಡಿದಂತೆ ರಾಜಮೌಳಿ ಇದೀಗ ಮಹೇಶ್ ಬಾಬು ವಿಚಾರದಲ್ಲೂ ಅದೇ ರೀತಿ ಮಾಡಲು ಹೊರಟಿದ್ದಾರಂತೆ.

ಇನ್ನು ನಿರ್ಮಾಪಕ ಕೆ.ಎಲ್.ನಾರಾಯಣ, ಮಹೇಶ್ ಬಾಬು ಮತ್ತು ರಾಜಮೌಳಿ ಒಟ್ಟಾಗಿ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಈ ಪ್ರೆಸ್ ಮೀಟ್ ಬಳಿಕ ಮಹೇಶ್ ಬಾಬು ಆ್ಯಡ್ ಶೂಟ್ ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಅಲ್ಲಿತನಕ ಮಹೇಶ್ ಬಾಬುಗೆ ಸಂಪೂರ್ಣ ಗೌಪ್ಯತೆಯನ್ನು ಕಾಯ್ದುಕೊಳ್ಳುವಂತೆ ರಾಜಮೌಳಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಈ ಚಿತ್ರದ ಇಡೀ ತಂಡವು ಒಪ್ಪಿಗೆ ನೀಡಿದೆಯಂತೆ.

ಈ ಸಿನಿಮಾ ಏಪ್ರಿಲ್ ಮೊದಲ ವಾರದಲ್ಲಿ ಸೆಟ್‌ ಏರಲಿದೆಯಂತೆ. ಇದಕ್ಕೂ ಮುನ್ನ ಮಹೇಶ್ ಬಾಬು ಫ್ಯಾಮಿಲಿ ಟೂರ್ ಮುಗಿಸಲಿದ್ದಾರೆ. ಅಲ್ಲಿ ತನಕ ಮಹೇಶ್ ಬಾಬು ಅವರನ್ನು ಮಾಧ್ಯಮದವರಿಂದ ಹೊರಗಿಡಲು ರಾಜಮೌಳಿ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಇನ್ನು ಈಗಾಗಲೇ ಕೆಲವು ದೇಶಗಳಿಗೆ ಹೋಗಿ ತಮ್ಮ ದೇಹವನ್ನು ಪೂರ್ಣ ಪ್ರಮಾಣದಲ್ಲಿ ಟ್ಯೂನ್ ಮಾಡಿಕೊಳ್ಳುವ ಕೆಲಸವನ್ನು ಮಹೇಶ್ ಬಾಬು ಮಾಡಲಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಅದೇ ರೀತಿ ಮಹೇಶ್ ಬಾಬು ಸಂಭಾವನೆ ಬಗ್ಗೆ ನಾನಾ ರೀತಿಯ ಪ್ರಚಾರಗಳೂ ಮುನ್ನೆಲೆಗೆ ಬರುತ್ತಿವೆ. ಮಹೇಶ್ ಬಾಬು ಅವರ ಜಿಎಂಬಿ ಎಂಟರ್‌ಟೈನ್‌ಮೆಂಟ್ ಕಂಪನಿಯು ಈ ಚಿತ್ರದಲ್ಲಿ ಸಹ-ನಿರ್ಮಾಪಕ ಎಂದು ವದಂತಿಗಳಿವೆ. ಮಹೇಶ್ ಬಾಬು ಸಂಭಾವನೆ ತೆಗೆದುಕೊಳ್ಳದೆ ಸಿನಿಮಾದಲ್ಲಿ ಪಾಲು ತೆಗೆದುಕೊಳ್ಳುತ್ತಾರೆ ಎಂಬ ವರದಿಗಳೂ ಇವೆ.

ಆರ್​ಆರ್​ಆರ್​ ವಿಷಯದಲ್ಲೂ ರಾಜಮೌಳಿ ಜೊತೆಗೆ ಇಬ್ಬರು ಹೀರೋಗಳು ಅದೇ ವಿಧಾನವನ್ನು ಅನುಸರಿಸಿದ್ದಾರೆ. ಸಂಭಾವನೆಯ ಬದಲು ಲಾಭದ ಪಾಲು ತೆಗೆದುಕೊಂಡರು ಎಂಬ ಪ್ರಚಾರವೂ ಇತ್ತು. ಈಗ ಅದೇ ಹಾದಿಯಲ್ಲಿ ಮಹೇಶ್ ಬಾಬು ಕೂಡ ನಡೆಯಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net