ಹಾಲಿವುಡ್ ರೇಂಜ್​ನಲ್ಲಿ ಮೂಡಿಬರುತ್ತಿದೆ 'ಕಲ್ಕಿ': ಶಿವರಾತ್ರಿಗೆ ಟೀಸರ್ ಬಿಡುಗಡೆ?

prabhas
Published on

ಹೈದರಾಬಾದ್​: ಪ್ಯಾನ್ ಇಂಡಿಯಾ ಮಾತ್ರವಲ್ಲದೆ ವಿದೇಶಗಳಲ್ಲೂ ಸಿನಿಮಾಗೆ ಮಾರುಕಟ್ಟೆ ಮತ್ತು ತನಗೆ ಫ್ಯಾನ್​ಗಳನ್ನು ಹೊಂದಿರುವ ನಟರಲ್ಲಿ ಪ್ರಮುಖ ಸ್ಥಾನವನ್ನು ಟಾಲಿವುಡ್​ನ ರೆಬೆಲ್ ಸ್ಟಾರ್ ಪ್ರಭಾಸ್ ಹೊಂದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಪ್ರಭಾಸ್​ ಹಲವು ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಕ್ರಿಯೇಟಿವ್ ಡೈರೆಕ್ಟರ್ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಕೂಡ ಒಂದು.

ಬಿಗ್ ಬಜೆಟ್ ನಲ್ಲಿ ಬರುತ್ತಿರುವ ಈ ಸಿನಿಮಾ ಟೈಮ್ ಟ್ರಾವೆಲ್ ಕಾನ್ಸೆಪ್ಟ್ ನಲ್ಲಿ ತೆರೆಕಾಣುತ್ತಿರುವುದು ಗೊತ್ತೇ ಇದೆ. ಹೀಗಾಗಿ ಮೊದಲಿನಿಂದಲೂ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ‘ಕಲ್ಕಿ 2898 ಎಡಿ’ ಸಿನಿಮಾವನ್ನು ಪ್ಯಾನ್ ವರ್ಲ್ಡ್ ರೇಂಜ್ ನಲ್ಲಿ ಮಾಡುತ್ತಿರುವುದಾಗಿ ಚಿತ್ರತಂಡ ಪ್ರಕಟಿಸಿದೆ.

ಈ ಸಿನಿಮಾದ ರೆಗ್ಯುಲರ್ ಶೂಟಿಂಗ್ ಹಲವು ದಿನಗಳ ಹಿಂದೆಯೇ ಶುರುವಾಗಿದೆ. ಅಂದಿನಿಂದ, ಅವರು ಅವಕಾಶ ಸಿಕ್ಕಾಗಲೆಲ್ಲಾ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೇ ಸಂಪೂರ್ಣ ಟಾಕಿ ಭಾಗವನ್ನು ಪೂರ್ಣಗೊಳಿಸಿದ್ದಾರೆ. ವಿಶುವಲ್ ವಂಡರ್ ಆಗಿ ತಯಾರಾಗುತ್ತಿರುವ 'ಕಲ್ಕಿ' ಇದುವರೆಗೆ ಕೆಲವೇ ಪೋಸ್ಟರ್‌ಗಳು ಮತ್ತು ಗ್ಲಿಂಪ್ಸ್ ವಿಡಿಯೋ ಬಿಡುಗಡೆಯಾಗಿವೆ. ಈ ಕ್ರಮದಲ್ಲಿ ಇದೀಗ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ಲೇಟೆಸ್ಟ್ ಮಾಹಿತಿ ಪ್ರಕಾರ ಮಹಾ ಶಿವರಾತ್ರಿ ಹಬ್ಬದಂದು ಟೀಸರ್ ರಿಲೀಸ್ ಮಾಡಲಾಗುತ್ತಿದೆ. ಕ್ರೇಜಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಕಲ್ಕಿ 2898 ಎಡಿ' ಟೀಸರ್ ಹಾಲಿವುಡ್ ರೇಂಜ್ ನಲ್ಲಿ ಕಟ್ ಮಾಡಲಾಗಿದೆ. ಇದಲ್ಲದೆ, ಇದು 78 ಸೆಕೆಂಡುಗಳ ಅಂದರೆ 1 ನಿಮಿಷ ಮತ್ತು 18 ಸೆಕೆಂಡುಗಳ ಉದ್ದದೊಂದಿಗೆ ಬರಲಿದೆ ಎಂಬ ಸುದ್ದಿಯೂ ಸೋರಿಕೆಯಾಗಿದೆ.

ಪ್ರಭಾಸ್ ಜೊತೆಗೆ ಕಮಲ್ ಹಾಸನ್ ಪಾತ್ರವೂ ಹೈಲೈಟ್ ಆಗಲಿದೆಯಂತೆ. ಅದರೊಂದಿಗೆ ಈ ಟೀಸರ್ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ನಡುವೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ‘ಕಲ್ಕಿ’ ಸಿನಿಮಾದಲ್ಲಿ ಪ್ರಭಾಸ್ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ. ಅಲ್ಲದೆ, ಬಿಗ್ ಬಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರವು ಮೇ 9ಕ್ಕೆ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net