ನಿಮಗೂ ಹೀಗಾಗಿರಬಹುದು!; ಜಿಮೇಲ್​ ಸಮಸ್ಯೆ-ಸ್ಥಗಿತ, ಜಗತ್ತಿನಾದ್ಯಂತ ಲಕ್ಷಗಟ್ಟಲೆ ಜನರ ಪರದಾಟ..

Gmail
Published on

ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವಾಗ ಆಗಾಗ ತಾಂತ್ರಿಕ ಸಮಸ್ಯೆಗೆ ಒಳಗಾಗುವುದು ಸಹಜ. ಅಂಥದ್ದೇ ಒಂದು ಸಮಸ್ಯೆಯನ್ನು ಜಿಮೇಲ್ ಬಳಸುವವರು ಎದುರಿಸುವಂತಾಗಿದೆ. ಜಗತ್ತಿನ ಲಕ್ಷಾಂತರ ಬಳಕೆದಾರರು ಇದರಿಂದಾಗಿ ಅನನುಕೂಲ ಉಂಟಾಗಿದೆ.

ಕಳೆದೊಂದು ಗಂಟೆಯಿಂದ ಜಿಮೇಲ್ ಸಮಸ್ಯೆಯಲ್ಲಿ ತೊಂದರೆ ಉಂಟಾಗಿದ್ದು, ಹಲವರು ಮೇಲ್ ಸ್ವೀಕರಿಸುವಲ್ಲಿ ಹಾಗೂ ಕಳಿಸುವಲ್ಲಿ ಹಲವರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಡೌನ್​ಡಿಟೆಕ್ಟರ್​.ಕಾಮ್​ ವರದಿ ಮಾಡಿದೆ. ಜಿಮೇಲ್​ ಆ್ಯಪ್​ನಲ್ಲೂ ಈ ಸಮಸ್ಯೆ ಉಂಟಾಗಿದ್ದು, ಅಗತ್ಯ ಸಂವಹನಕ್ಕೆ ಪರದಾಡುವಂತಾಗಿದೆ.

1.5 ಬಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಜಗತ್ತಿನಲ್ಲಿ 2022ರಲ್ಲಿ ಅತ್ಯಧಿಕ ಡೌನ್​ಲೋಡ್ ಆಗಿರುವ ಟಾಪ್ ಆ್ಯಪ್​ಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಈಗಿನ ಸಮಸ್ಯೆ ಬಗ್ಗೆ ಜಿಮೇಲ್​ನಿಂದ ಯಾವುದೇ ಅಧಿಕೃತ ಸ್ಪಷ್ಟನೆ ಪ್ರಕಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net