ಹಾಲಿನ ಅಡ್ಡಪರಿಣಾಮಗಳು: ಈ ಸಮಸ್ಯೆಗಳಿಂದ ಬಳಲುತ್ತಿರುವವರು ರಾತ್ರಿ ಹಾಲು ಕುಡಿಯದಿರುವುದು ಉತ್ತಮ

Milk Side Effects
Published on

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ದೇಶದ ಬಹುತೇಕ ಮನೆಗಳಲ್ಲಿ ಇಂದು ಸಾಮಾನ್ಯ ಅಭ್ಯಾಸವಾಗಿದೆ. ಹಾಲು ಕುಡಿಯುವುದರಿಂದ ಉತ್ತಮ ನಿದ್ರೆ ಮತ್ತು ಆರೋಗ್ಯವನ್ನು ಪಡೆಯಬಹುದೆಂದು ಹೇಳಲಾಗುತ್ತದೆ. ಯಾವುದೇ ವಾತಾವರಣದಲ್ಲಿಯೂ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವ ಅಭ್ಯಾಸವೂ ಚಿಕ್ಕಂದಿನಿಂದಲೂ ಹಲವರ ದಿನಚರಿಯ ಭಾಗವಾಗಿದೆ.

ಹಾಲು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ, ಕೆಲವು ಅನಾನುಕೂಲಗಳು ಸಹ ಇವೆ. ಕೆಲವು ಸಮಸ್ಯೆಗಳು ಇರುವುವರು ರಾತ್ರಿಯ ಸಮಯದಲ್ಲಿ ಖಂಡಿತವಾಗಿಯೂ ಹಾಲನ್ನು ಕುಡಿಯಬಾರದು. ಯಾರು ಕುಡಿಯಬಾರದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಅಲರ್ಜಿ: ಹಾಲು, ಲ್ಯಾಕ್ಟೋಸ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಕೆಲವು ಜನರಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಅಲರ್ಜಿಯ ಸಮಸ್ಯೆ ಇರುವವರು ರಾತ್ರಿ ಹಾಲು ಕುಡಿಯುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಅಲರ್ಜಿಯ ಸಮಸ್ಯೆ ಇನ್ನಷ್ಟು ಉಲ್ಬಣಗೊಳಿಸುತ್ತದೆ.

ಉದರ ಸಮಸ್ಯೆಗಳು: ಹಾಲಿನಲ್ಲಿ ಲ್ಯಾಕ್ಟೋಸ್ ಅಂಶವಿದೆ. ಇದು ಕೆಲವು ಜನರಲ್ಲಿ ಗ್ಯಾಸ್, ಉಬ್ಬುವುದು ಮತ್ತು ಅತಿಸಾರವನ್ನು ಉಂಟುಮಾಡಬಹುದು. ಆದ್ದರಿಂದ, ಹೊಟ್ಟೆಯ ಸಮಸ್ಯೆ ಇರುವವರು ರಾತ್ರಿ ಹಾಲು ಕುಡಿಯುವುದನ್ನು ತಪ್ಪಿಸಬೇಕು.

ತೂಕ ಕಳೆದುಕೊಳ್ಳಲು ಬಯಸುವವರು: ಹಾಲಿನಲ್ಲಿ ಹೆಚ್ಚಿನ ಕ್ಯಾಲರಿಗಳಿವೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಹಾಲು ಕುಡಿಯುವುದನ್ನು ತಪ್ಪಿಸಬೇಕು.

ನಿದ್ರಿಸಲು ತೊಂದರೆ: ಹಾಲಿನಲ್ಲಿ ಕ್ಯಾಲ್ಸಿಯಂ ಇದೆ. ಇದು ನಿದ್ರೆ ಸಹಕಾರಿಯಾಗಿದೆ. ಆದರೆ, ಇದರಿಂದ ಕೆಲವರು ನಿದ್ರೆಯ ಸಮಸ್ಯೆ ಎದುರಿಸುತ್ತಿದ್ದರೆ ಅಂಥವರು ಹಾಲು ಕುಡಿಯುವುದನ್ನು ತಪ್ಪಿಸಬೇಕು.

ಆದಾಗ್ಯೂ, ಮಲಗುವ ಮುನ್ನ ಹಾಲು ಕುಡಿಯಬೇಕೆ ಅಥವಾ ಬೇಡವೇ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನಿಮಗೆ ಹೊಟ್ಟೆಯ ಸಮಸ್ಯೆಗಳಿದ್ದರೆ ಅಥವಾ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಮಲಗುವ ಮುನ್ನ ಹಾಲು ಕುಡಿಯುವುದನ್ನು ತಪ್ಪಿಸಿ. ಹಾಲನ್ನು ತಪ್ಪಿಸಲು ಸಾಧ್ಯವಾಗದಿದ್ದರೆ ಮಲಗುವ 2-3 ಗಂಟೆಗಳ ಮುಂಚೆಯೇ ಹಾಲು ಕುಡಿಯುವುದು ಉತ್ತಮ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net