ಮದುವೆಯಾದವರಲ್ಲಿ ಎಂದಿಗೂ ಈ ರೋಗ ಬರೋದಿಲ್ವಂತೆ! ಹೊಸ ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ | New Study

New Study
Published on

New Study : ಖಿನ್ನತೆ ಎನ್ನುವುದು ಇಂದು ನಾವೆಲ್ಲರೂ ಸಾಮಾನ್ಯವಾಗಿ ಬಳಸುವ ಮತ್ತು ಕೇಳುವ ಒಂದು ಪದವಾಗಿದೆ. ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಅನೇಕರು ಹೇಳುವುದನ್ನು ನೀವು ಆಗಾಗ ಕೇಳುತ್ತಿರುತ್ತೀರಿ. ಇಂತಹವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅದು ಒಂಟಿತನ.

ಇದೀಗ ಖಿನ್ನತೆ ಮತ್ತು ಮದುವೆಯ ನಡುವಿನ ಸಂಬಂಧದ ಬಗ್ಗೆ ಹೊಸ ಅಧ್ಯಯನ ವರದಿಯೊಂದು ಬಹಿರಂಗವಾಗಿದೆ. ವಿವಾಹಿತ ವ್ಯಕ್ತಿಗಳು ಖಿನ್ನತೆಗೆ ಜಾರುವ ಸಾಧ್ಯತೆ ತೀರಾ ಕಡಿಮೆ ಎಂದು ಸಂಶೋಧನೆಗಳು ತೋರಿಸಿವೆ. ಹೊಸ ತಲೆಮಾರಿನ ಜನರು ಮದುವೆಯ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬ ಬಲವಾದ ಚರ್ಚೆಗಳ ನಡುವೆಯೇ ಈ ಅಧ್ಯಯನ ವರದಿಯು ಹೊರಬಿದ್ದಿದೆ.

ವಿವಾಹಿತರಿಗಿಂತ ಅವಿವಾಹಿತರು ಹೆಚ್ಚು ಖಿನ್ನತೆಯ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಂಗಾತಿಯಿಲ್ಲದ ಜನರು ಹೆಚ್ಚು ವೇಗವಾಗಿ ಖಿನ್ನತೆಗೆ ಜಾರುತ್ತಾರೆ. ಆದರೆ, ಪೂರ್ವ ದೇಶಗಳಲ್ಲಿ ಇದು ತುಲನಾತ್ಮಕವಾಗಿ ಕಡಿಮೆ ಇದೆ. ಇನ್ನು ಅವಿವಾಹಿತ ಪುರುಷರು ಒಂಟಿ ಮಹಿಳೆಯರಿಗಿಂತ ಹೆಚ್ಚಿನ ಖಿನ್ನತೆಯ ಲಕ್ಷಣಗಳನ್ನು ಹೊಂದಿದ್ದಾರೆ. ಉನ್ನತ ಶಿಕ್ಷಣ ಹೊಂದಿರುವವರು ಕಡಿಮೆ ಶಿಕ್ಷಣ ಹೊಂದಿರುವವರಿಗಿಂತ ಹೆಚ್ಚು ವೇಗವಾಗಿ ಖಿನ್ನತೆಗೆ ಜಾರುತ್ತಾರೆಂದು ಅಧ್ಯಯನದಿಂದ ತಿಳಿದುಬಂದಿದೆ.

ಸೈಕಾಲಜಿ ಟುಡೇ ಹೆಸರಿನ ಜರ್ನಲ್‌ನಲ್ಲಿ ಮದುವೆ ಮತ್ತು ಖಿನ್ನತೆ ( Marriage and Depression ) ಎಂಬ ಶೀರ್ಷಿಕೆಯಡಿಯಲ್ಲಿ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಯುಎಸ್, ಬ್ರಿಟನ್, ಮೆಕ್ಸಿಕೊ, ಐರ್ಲೆಂಡ್, ಕೊರಿಯಾ, ಚೀನಾ ಮತ್ತು ಇಂಡೋನೇಷ್ಯಾ ಸೇರಿದಂತೆ ಏಳು ದೇಶಗಳ ಐದು ಕೋಟಿಗೂ ಹೆಚ್ಚು ಜನರ ಡೇಟಾವನ್ನು ಪರಿಶೀಲಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net