

Gods in Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ, ಅದು ಕನಸು. ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಕನಸು ಕಂಡಿರಬೇಕು. ಕನಸು ಕಾಣುವುದು ತುಂಬಾ ಸಾಮಾನ್ಯ. ಕೆಲವೊಮ್ಮೆ ಕನಸಿನಲ್ಲಿ ಬೆಟ್ಟಗಳು, ನದಿಗಳು, ಕಾಡುಗಳು, ವಸ್ತುಗಳು ಮತ್ತು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಕೆಲವೊಮ್ಮೆ ದೇವರುಗಳು ಸಹ ಕನಸಿನಲ್ಲಿ ಬರುತ್ತಾರೆ.
ಅಂದಹಾಗೆ ಕನಸಿನಲ್ಲಿ ಏನೇ ಕಂಡರು ಅದರ ಹಿಂದೆ ಒಂದು ಸೂಚನೆ ಇರುತ್ತದೆ ಎಂದು ದೊಡ್ಡವರು ಹೇಳುವುದನ್ನು ನೀವು ಕೇಳುತ್ತೀರುತ್ತೀರಿ. ಕನಸುಗಳು ಭವಿಷ್ಯದಲ್ಲಿ ಸಂಭವಿಸಲಿರುವ ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಮುನ್ಸೂಚಿಸುವ ಎಚ್ಚರಿಕೆಯ ಗಂಟೆಯಾಗಿ ಕಾರ್ಯನಿರ್ವಹಿಸುತ್ತವೆ. ಅದೇ ರೀತಿ, ಕನಸಿನಲ್ಲಿ ದೇವರುಗಳು ಕಾಣಿಸಿಕೊಂಡರೆ ಧರ್ಮಗ್ರಂಥಗಳ ಆಧಾರದ ಮೇಲೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಯಾವುದೇ ದೇವರ ಚಿತ್ರಗಳು ಅಥವಾ ಚಿಹ್ನೆಗಳನ್ನು ಕಂಡರೆ ನೀವು ಯಾವ ರೀತಿಯ ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬುದನ್ನು ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಬಹುದು.
ಕನಸಿನಲ್ಲಿ ಶಿವನ ಚಿತ್ರಣ ಕಾಣಸಿಕೊಂಡರೆ, ನಮ್ಮ ಜೀವನದಲ್ಲಿ ಶೀಘ್ರದಲ್ಲೇ ನಮಗೆ ಮನ್ನಣೆ ಸಿಗುತ್ತದೆ ಎಂದರ್ಥ. ಒಂದು ವೇಳೆ ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳೆಲ್ಲವೂ ಬಗೆಹರಿಯುತ್ತವೆ ಎಂಬ ಮುನ್ಸೂಚನೆಯನ್ನು ನೀಡುತ್ತದೆ. ಶಿವನ ಕನಸುಗಳು ಹಣ ಮತ್ತು ಪ್ರಭಾವವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.
ನಿಮ್ಮ ಕನಸಿನಲ್ಲಿ ಗಣೇಶ ಬಂದರೆ, ನಾವು ಪ್ರಾರಂಭಿಸುವ ಹೊಸ ಕೆಲಸವು ಯಾವುದೇ ಅಡೆತಡೆಗಳಿಲ್ಲದೆ ಬಹಳ ಸುಗಮವಾಗಿ ನಡೆಯುತ್ತದೆ ಎಂದರ್ಥ. ಇದು ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಸಂಕೇತವಾಗಿಯೂ ತೆಗೆದುಕೊಳ್ಳಬಹುದು. ಹಾಗೆಯೇ ವಿಷ್ಣುವು ಕನಸಿನಲ್ಲಿ ಬಂದರೆ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದರ್ಥ. ಕನಸಿನಲ್ಲಿ ಯಾವುದೇ ದೇವತೆ ಕಾಣಿಸಿಕೊಂಡರೆ, ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ ಎಂದರ್ಥ.
ಕನಸಿನಲ್ಲಿ ನಿಮ್ಮ ಕುಲದೇವತೆ ಕಾಣಿಸಿಕೊಂಡರೆ, ಕುಲದೇವತೆಯನ್ನು ಪೂಜಿಸಬೇಕೆಂಬ ಸೂಚನೆಯಾಗಿ ಕಂಡುಬರುತ್ತದೆ. ದೇವಸ್ಥಾನದ ಗೋಪುರ ಬಂದರೆ ಹಿಂದಿನ ಜನ್ಮದ ಪಾಪಗಳಿಂದ ವಿಮೋಚನೆಯ ಸಮಯ ಬಂದಿದೆ ಮತ್ತು ಇನ್ನು ಮುಂದೆ ಜೀವನ ಸುಖಮಯವಾಗಿರುತ್ತದೆ ಎಂದರ್ಥ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.