ಆಹಾರ ಆರೋಗ್ಯ: ಅರಿಶಿಣ ಬೆರೆಸಿದ ಹಾಲಿನ ಹಲವು ಪ್ರಯೋಜನಗಳು

Milk
Published on

ನಮ್ಮ ಮನೆಯಲ್ಲೇ ಇರುವ ರೋಗನಿರೋಧಕ ಶಕ್ತಿಯುಳ್ಳ ಪದಾರ್ಥ ಅರಿಶಿಣ. ಇದನ್ನು ನಿಯತವಾಗಿ ಬಳಸುವುದರಿಂದ ಸಾಮಾನ್ಯವಾಗಿ ಕಂಡುಬರುವ ಹಲವು ಆರೋಗ್ಯಸಂಬಂಧಿ ತೊಂದರೆಗಳಿಂದ ದೂರವಿರಬಹುದು. ಆಯುರ್ವೆದದಲ್ಲಿ ಅರಿಶಿಣಕ್ಕೆ ಬಹಳ ಪ್ರಾಮುಖ್ಯತೆಯಿದೆ. ರಕ್ತಶುದ್ಧೀಕರಣದಲ್ಲಿ ಇದು ಮುಖ್ಯವಾದುದು.

# ಗಾಯಗೊಂಡಾಗ ಆ ಜಾಗಕ್ಕೆ ಸ್ವಲ್ಪ ಅರಿಶಿಣವನ್ನು ಹಚ್ಚಿದರೆ ಗಾಯದ ರಕ್ತಸ್ರಾವ ಕಡಿಮೆಯಾಗುತ್ತದೆ. ್ಝ ರಾತ್ರಿ ಊಟದ ನಂತರ ಮಲಗುವ ಮುನ್ನ ಉಗುರುಬೆಚ್ಚಗಿನ ಒಂದು ಲೋಟ ಹಾಲಿಗೆ ಅರಿಶಿಣ ಬೆರೆಸಿ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ. ಅರಿಶಿಣಮಿಶ್ರಿತ ಹಾಲನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರತಿದಿನ ಬೆಳಗ್ಗೆ ಒಂದು ಲೋಟ ಹಾಲಿಗೆ ಅರ್ಧ ಚಮಚ ಅರಿಶಿಣ ಬೆರೆಸಿ ಕುಡಿಯುವುದರಿಂದ ದೇಹದ ಹೆಚ್ಚುವರಿ ಕೊಬ್ಬಿನ ಸಂಗ್ರಹವು ಕ್ರಮೇಣ ಕಡಿಮೆಯಾಗುತ್ತದೆ. ಅರಿಶಿಣ ಬೆರೆಸಿದ ಹಾಲಿನ ಸೇವನೆಯಿಂದ ಸಾಮಾನ್ಯ ಶೀತ ಹಾಗೂ ಕೆಮ್ಮಿನ ಸಮಸ್ಯೆಗಳು ಗುಣವಾಗುತ್ತವೆ. ಚಳಿಗಾಲದಲ್ಲಿ ಇದರ ಬಳಕೆಯು ಆರೋಗ್ಯದ ದೃಷ್ಟಿತಿಂದ ಉತ್ತಮ.

# ಮೂಳೆ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅರಿಶಿಣ ಮಿಶ್ರಿತ ಹಾಲಿನ ಸೇವನೆ ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಅರಿಶಿಣದ ಅಂಶಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ.

# ಗರ್ಭಿಣಿಯರು ಅರಿಶಿಣದ ಹಾಲು ಸೇವಿಸುವುದರಿಂದ ಸುಲಭ ಹೆರಿಗೆ ಸಹಾಯಕವಾಗುತ್ತದೆ.

# ಸ್ತನ, ಚರ್ಮ, ಶ್ವಾಸಕೋಶ, ಪ್ರಾಸ್ಟೇಟ್ ಮತ್ತು ಗುದನಾಳದ ಕ್ಯಾನ್ಸರ್​ನಂತಹ ಬೆಳವಣಿಗೆಯನ್ನು ಅರಿಶಿಣಮಿಶ್ರಿತ ಹಾಲಿನ ನಿಯತ ಸೇವನೆಯು ತಡೆಯುತ್ತದೆ. ಹಾನಿಕಾರಕ ಡಿಎನ್​ಎಯ ಕ್ಯಾನ್ಸರ್ ಜೀವಕೋಶಗಳನ್ನೂ ಇದು ತಡೆಯುತ್ತದೆ.

# ಅರಿಶಿಣ ಬೆರೆಸಿದ ಹಾಲಿನ ಸೇವನೆಯು ಸಂಧಿವಾತವನ್ನು ಮತ್ತು ಅದಕ್ಕೆ ಕಾರಣವಾದ ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೀಲು ಮತ್ತು ಸ್ನಾಯುಗಳ ನೋವುಗಳನ್ನೂ ನೀಗಿಸುತ್ತದೆ.

# ಬ್ಯಾಕ್ಟೀರಿಯಾ ಸೋಂಕುಗಳು ಮತ್ತು ವೈರಸ್ ಸೋಂಕುಗಳು ಅರಿಶಿಣದ ಹಾಲು ತಡೆಯುತ್ತದೆ. ಉಸಿರಾಟ ಸಂಬಂಧಿ ತೊಂದರೆಗಳನ್ನೂ ನಿವಾರಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net