

ಜನಜೀವನದಲ್ಲಿ ಒಮ್ಮಿಂದೊಮ್ಮಲೇ ಏರುಪೇರು ಮಾಡುವ, ಬದುಕನ್ನೇ ಹೈರಾಣಾಗಿಸುವ ತೀವ್ರತರನಾದ ವೈರಾಣು ರೋಗಗಳು ಕಾಲಕಾಲಕ್ಕೆ ಮನುಷ್ಯರನ್ನು ಕಾಡುವುದಿದೆ. ಅಂತೆಯೇ ಕರೊನಾ ವೈರಾಣುವಿನಿಂದ ಬರುವ ಕೋವಿಡ್19 ಇದೀಗ ಬಂದಿದೆ. ಇದನ್ನು ಗುಣಪಡಿಸುವ ರಾಸಾಯನಿಕ ಔಷಧಗಳಿಲ್ಲ. ಔಷಧ ಅಥವಾ ಲಸಿಕೆ ಅಭಿವೃದ್ಧಿಪಡಿಸಲು ಕನಿಷ್ಠಪಕ್ಷ ಆರು ವರ್ಷವಾದರೂ ಬೇಕು. ಅಷ್ಟರೊಳಗೆ
ವೈರಾಣು ರೋಗಗಳ ಚಿಕಿತ್ಸಾ ವಿಚಾರದಲ್ಲಿ ಆಯುರ್ವೆದಕ್ಕೆ ಪರಮಾಧಿಕಾರವಿದೆ. ವೈರಾಣುವಿರೋಧಿ ರಾಸಾಯನಿಕ ಔಷಧಗಳು ಬೆರಳೆಣಿಕೆಯಷ್ಟೂ ಇಲ್ಲದಿರುವುದು ಒಂದೆಡೆಯಾದರೆ ಆಯುರ್ವೆದದಲ್ಲಿ ನೂರಾರು ವನಸ್ಪತಿಗಳು ವೈರಾಣು ವಿರೋಧಿ ಔಷಧಗಳಾಗಿ ಲಭ್ಯವಿರುವುದು ಮಾನವನ ಸೌಭಾಗ್ಯ ಎನ್ನಲೇಬೇಕು. ಚಿಕಿತ್ಸೆಯ ಅನುಭವದಿಂದ ಹೇಳುವುದಾದರೆ ಈ ಸಸ್ಯೌಷಧಿಗಳು ಕೇವಲ ವೈರಾಣು ವಿರೋಧಿಗಳಲ್ಲ, ಅವು ಖಚಿತವಾಗಿ ವೈರಾಣುನಾಶಕಗಳು! ನೇರವಾಗಿ ವೈರಾಣುಗಳಿಗೇ ಅಂತ್ಯ ಕಾಣಿಸಬಲ್ಲ ಔಷಧಗಳೆಂದರೆ ಇನ್ನೂ ಮೇಲ್ಮಟ್ಟದ ಔಷಧಗಳೆಂದರ್ಥ. ಇಂಥ ಮಾನವೋಪಯೋಗಿ ವೈರಾಣುನಾಶಕ ರಾಸಾಯನಿಕ ಔಷಧಗಳಂತೂ ದುರ್ಲಭವಾಗಿದೆ. ನೆಲನೆಲ್ಲಿ, ಅಮೃತಬಳ್ಳಿ, ಪರ್ಪಟಕ, ಸೊಗದೆಬೇರು, ಶ್ರೀಗಂಧ, ರಕ್ತಚಂದನ, ಲಾವಂಚ, ಶುಂಠಿ, ತುಳಸಿ, ಭದ್ರಮುಷ್ಟಿ, ಕಿರಾತಕಡ್ಡಿ, ಕಹಿಬೇವು, ಮುರುಗಲ ಹಣ್ಣು, ಬೆಳ್ಳುಳ್ಳಿ, ನೆಲಬೇವು, ಅರಿಶಿಣ, ನೆಲ್ಲಿಕಾಯಿ, ಪಾರಿಜಾತ, ನೆಲಗುಳ್ಳ, ಗೋಕ್ಷುರ, ಹಿಪ್ಪಲಿ, ಕಾಳುಮೆಣಸು, ಬಾಲಿರಕ್ಷಿ, ಬಿಲ್ವ ಮುಂತಾದವುಗಳು ಅಗ್ರಗಣ್ಯ ವೈರಾಣುನಾಶಕಗಳಾಗಿರುವುದು ನಮಗೆ ವರದಾನ. ಜೊತೆಯಾಗಿ ಇವುಗಳಲ್ಲಿ ಹೆಚ್ಚಿನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಸಾಯನ ದ್ರವ್ಯಗಳೂ ಹೌದು! ರೋಗಗಳಿಗೆ ಮೂಲಕಾರಣವಾಗಿರುವ ‘ಮಂದಾಗ್ನಿ’ಯೆಂಬ ಕುಂದಿದ ಪಚನಶಕ್ತಿಯನ್ನು ಸರಿಗೊಳಿಸಿ ಯಕೃತ್ಗೆ ಬಲದಾಯಕವಾಗಿಯೂ ಇವುಗಳೆಲ್ಲ ಕಾರ್ಯನಿರ್ವಹಿಸುವುದು ಲಾಭದ ಮೇಲಿನ ಲಾಭ! ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡ ಹಂದಿಜ್ವರ, ಹೆಪಟೈಟಿಸ್ ಬಿ, ಡೆಂಘೀಜ್ವರ, ಚಿಕೂನ್ಗುನ್ಯಾಗಳಂಥ ಕಾಯಿಲೆಗಳನ್ನು ಯಶಸ್ವಿಯಾಗಿ ಗುಣಪಡಿಸುವ ಸಾಮರ್ಥ್ಯ ಪ್ರದರ್ಶಿಸಿರುವುದರಿಂದ ಈ ದ್ರವ್ಯಗಳು ಬಹುವೈರಾಣು ರೋಗನಾಶಕಗಳಾಗಿದ್ದು ಚಿಕಿತ್ಸೆಗೆ ಅರ್ನ್ಯಘ ರತ್ನಗಳಾಗಿವೆ. ಆದುದರಿಂದ ಕೋವಿಡ್19ರ ಚಿಕಿತ್ಸೆಗೂ ಒದಗಿಬರುತ್ತದೆಂಬ ಅಪರಿಮಿತ ವಿಶ್ವಾಸವಿದೆ.
ಪಂಚಸೂತ್ರಗಳು