ಸ್ನಾನಕ್ಕೂ ಮುಂಚೆ ಈ ಒಂದು ಸಲಹೆ ಪಾಲಿಸಿದ್ರೆ ಸಾಕು ಡ್ಯಾಂಡ್ರಫ್ ಮಾಯವಾಗಿ ಕೂದಲು ಉದುರೋದು ನಿಲ್ಲುತ್ತೆ | Dandruff

Dandruff
Published on

Dandruff : ಪ್ರಸ್ತುತ ಚಳಿಗಾಲ ಆರಂಭವಾಗಿದ್ದು, ಈ ಸೀಸನ್​ನಲ್ಲಿ ಮಕ್ಕಳು ಮತ್ತು ವಯಸ್ಕರು ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಾರೆ. ಮಲಾಸೆಜಿಯಾ ಎಂಬ ಯೀಸ್ಟ್ ತರಹದ ಶಿಲೀಂಧ್ರದ ಬೆಳವಣಿಗೆಯಿಂದ ತಲೆಹೊಟ್ಟು ಉಂಟಾಗುತ್ತದೆ.

ತಲೆಹೊಟ್ಟಿನ ಕಾರಣದಿಂದಾಗಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಅಲ್ಲದೆ, ತಲೆಯಲ್ಲಿ ತುರಿಕೆ ಮತ್ತು ಕಿರಿಕಿರಿಯು ಹೆಚ್ಚಾಗುತ್ತದೆ. ಇದರ ಜೊತೆಗೆ ತಲೆಹೊಟ್ಟು ಬಟ್ಟೆಯ ಮೇಲೆ ಬಿದ್ದು ಕೊಳಕು ಕಾಣುತ್ತದೆ. ತಲೆಹೊಟ್ಟಿನಿಂದ ತುಂಬಾ ಸಮಸ್ಯೆ ಎದರಿಸುತ್ತಿದ್ದರೆ, ಅಂಥವರಿಗಾಗಿ ನಾವೀಗ ಹೇಳುವ ಸಲಹೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.

ಏನು ಮಾಡಬೇಕು ಅಂದರೆ, ಮೊದಲು ಸ್ಟವ್ ಆನ್ ಮಾಡಿ ಒಂದು ಸಣ್ಣ ಪಾತ್ರೆಯನ್ನು ಇಡಿ. ಅದರ ಒಳಗೆ ಒಂದು ಲೋಟ ನೀರು ಹಾಕಿ. ನೀರು ಬಿಸಿಯಾದ ನಂತರ, ನಾಲ್ಕು ಬೇ ಎಲೆ ಅಥವಾ ಬಿರಿಯಾನಿ ಎಲೆ ಮತ್ತು ಸ್ವಲ್ಪ ಲವಂಗವನ್ನು ಸೇರಿಸಿ, ಚೆನ್ನಾಗಿ ಕುದಿಸಿ. ಸುಮಾರು ಹತ್ತರಿಂದ ಹನ್ನೆರಡು ನಿಮಿಷಗಳ ಕಾಲ ಕುದಿಸಿದ ನಂತರ, ಸ್ಟೌವ್ ಆಫ್ ಮಾಡಿ. ನಂತರ ಸ್ಟ್ರೈನರ್ ಸಹಾಯದಿಂದ ನೀರನ್ನು ಫಿಲ್ಟರ್ ಮಾಡಿ.

Bay Leaf and Cloves

ಫಿಲ್ಟರ್​ ಮಾಡಿದ ನೀರಿಗೆ ಒಂದು ಚಮಚ ಸಾಸಿವೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರೊಂದಿಗೆ ಉತ್ತಮ ಹೇರ್ ಟೋನರ್ ಸಿದ್ಧವಾಗುತ್ತದೆ. ಬೆಚ್ಚಗಾದ ನಂತರ ಈ ಟೋನರ್ ಅನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ನೆತ್ತಿಯ ಜೊತೆಗೆ ಇಡೀ ಕೂದಲಿಗೆ ಎರಡು ಬಾರಿ ಸ್ಪ್ರೇ ಮಾಡಿ. ಬಳಿಕ ನೆತ್ತಿಯನ್ನು ಮಸಾಜ್ ಮಾಡಬೇಕು. ಸುಮಾರು ಒಂದು ಗಂಟೆಯ ನಂತರ ಶಾಂಪೂ ಬಳಸಿ ನಿಮ್ಮ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ.

ವಾರಕ್ಕೊಮ್ಮೆ ಹೀಗೆ ಮಾಡಿದರೆ ತಲೆಹೊಟ್ಟು ಬರುವುದೇ ಇಲ್ಲ. ಈ ಟೋನರ್ ತಲೆಹೊಟ್ಟನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಮತ್ತು ನಿಮ್ಮ ನೆತ್ತಿಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ಅಲ್ಲದೆ, ಈ ಟೋನರ್ ಬಳಸುವುದರಿಂದ ಕೂದಲು ಉದುರುವ ಸಮಸ್ಯೆ ಸಹ ಕಡಿಮೆಯಾಗುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net