

health tips: ದೇಹದ ಅತಿಯಾದ ಬೊಜ್ಜು ಹಾಗೂ ಕೀಲು ನೋವಿನ ಸಂಬಂಧವು ವೈದ್ಯಕೀಯವಾಗಿ ಸಾಬೀತಾದ ಸತ್ಯವಾಗಿದೆ. ದೇಹದ ತೂಕ ಹೆಚ್ಚಾದಂತೆ ಕೀಲುಗಳ ಮೇಲೆ ಅಧಿಕವಾಗಿ ಒತ್ತಡ ಉಂಟಾಗುತ್ತದೆ. ಇದು ಕೀಲು ನೋವು, ಊತ, ಹಾಗೂ ಕೀಲು ಗಟ್ಟಿಯಾಗಲು ಪ್ರಾರಂಭಿಸುತ್ತದೆ. ಇನ್ನು ವಿಶೇಷವಾಗಿ ಮೊಣಕಾಲು, ಸೊಂಟ ಮತ್ತು ಕಾಲಿನ ಕೀಲುಗಳ ತೂಕವನ್ನು ಹೊಂದಿರುವುದರಿಂದ ಬೊಜ್ಜುತನಕ್ಕೆ ತೀವ್ರ ಪರಿಣಾಮ ಉಂಟಾಗುತ್ತದೆ.
ಬೊಜ್ಜುತನವು ಒಸ್ಟಿಯೊ ಆರ್ಥರೈಟಿಸ್ನಂತಹ ಕೀಲು ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ, ದೇಹದ ಹೆಚ್ಚುವರಿ ತೂಕವು ಕೀಲುಗಳ ಮೇಲಿನ ಒತ್ತಡವನ್ನು ಹೆಚ್ಚಿಸುವುದಲ್ಲದೆ, ದೇಹದಲ್ಲಿ ಉರಿಯೂತವನ್ನು ಉಂಟುಮಾಡುವ ರಾಸಾಯನಿಕಗಳ ಉತ್ಪಾದನೆಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಗಣೇಶ ಮೂರ್ತಿ ವಿಸರ್ಜನೆಗೆ ತಾತ್ಕಾಲಿಕ ನೀರಿನ ತೊಟ್ಟಿ
ಬೊಜ್ಜುತನವು ಕೀಲುಗಳ ಮೇಲೆ ಗಣನೀಯ ಒತ್ತಡವನ್ನು ಉಂಟುಮಾಡುತ್ತದೆ. ದೇಹದ ಒಂದು ಕಿಲೋಗ್ರಾಂ ಹೆಚ್ಚುವರಿ ತೂಕವು ಮೊಣಕಾಲಿನ ಕೀಲುಗಳ ಮೇಲೆ ಸುಮಾರು 4 ಕಿಲೋಗ್ರಾಂ ಒತ್ತಡವನ್ನು ಉಂಟುಮಾಡುತ್ತದೆ. ಉದಾಹರಣೆಗೆ 10 ಕೆಜಿ ತೂಕ ಹೆಚ್ಚಾದರೆ, ಮೊಣಕಾಲಿನ ಮೇಲೆ 40 ಕೆಜಿ ಒತ್ತಡ ಬೀಳುತ್ತದೆ. ಇದು ಕಾರ್ಟಿಲೆಜ್ನ ಒಡಕಿಗೆ ಕಾರಣವಾಗುತ್ತದೆ.
ದೇಹದಲ್ಲಿ ಬೊಜ್ಜುತನವು ಸೈಟೋಕಿನ್ಗಳಂತಹ ಉರಿಯೂತ ರಾಸಾಯನಿಕಗಳನ್ನು ಹೆಚ್ಚಿಸಲು ಇದು ಪ್ರೇರೇಪಿಸುತ್ತದೆ. ಇದು ಕೀಲುಗಳಿಗೆ ಹಾನಿಯುಂಟಾಗಿ ನಡೆಯಲು ಬಾರದ ಸ್ಥಿತಿಗೆ ತಲುಪಿಸುತ್ತದೆ.
ದೇಹದ ಹೆಚ್ಚಿನ ತೂಕವು ಚಲನೆಯನ್ನು ಕಷ್ಟಕರವಾಗಿಸುತ್ತದೆ. ಇದರಿಂದ ಕೀಲುಗಳ ಗಟ್ಟಿತನ ಮತ್ತು ನೋವು ಇನ್ನಷ್ಟು ಉಲ್ಬಣಗೊಂಡು ಚಲನೆಯಲ್ಲಿ ಪರಿಣಾಮ ಬೀರುತ್ತದೆ. ಇನ್ನು ಓಡಾಡಲು ಕಷ್ಟವಾಗುವುದರ ಜೊತೆಗೆ ಹೆಚ್ಚು ಸಮಯ ನಿಲ್ಲಲು ಸಾಧ್ಯವಾಗದ ಸಮಸ್ಯೆಯನ್ನು ಅನುಭವಿಸುತ್ತದೆ.
ಸಮಸ್ಯೆಗಳಿಂದ ಪಾರಾಗಲು ಇರುವುದು ಒಂದೇ ಮಾರ್ಗ ತೂಕ ಕಡಿಮೆ ಮಾಡಿಕೊಳ್ಳುವುದು. ಇದರಿಂದ ಕೀಲು ನೋವಿನ ಸಮಸ್ಯೆಯಿಂದ ಪಾರಾಗಬಹುದು. ಇದಕ್ಕೆ ಕೆಲವೊಂದು ಕ್ರಮಗಳನ್ನು ಅನುಸರಿಸಿ.
ಕಡಿಮೆ ಕ್ಯಾಲೊರಿ, ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸಿ. ಹಣ್ಣುಗಳು, ತರಕಾರಿಗಳು, ಸಿರಿಧಾನ್ಯಗಳು ಮತ್ತು ಒಣಗಿದ ಮಾಂಸವನ್ನು ಆಹಾರದಲ್ಲಿ ಸೇರಿಸಿ ತಿನ್ನಿ. ಹಾಗೆಯೇ ಸಕ್ಕರೆ ಮತ್ತು ಕೊಬ್ಬಿನಾಂಶ ಇರುವಂತಹ ಆಹಾರ ಸೇವಿಸುವುದನ್ನು ಕಡಿಮೆ ಮಾಡುವುದರಿಂದ ದೇಹದ ಬೊಜ್ಜು ನಿವಾರಣೆಯಾಗಬಹುದು.
ಪ್ರತಿನಿತ್ಯ ಕೆಲವೊಂದು ವ್ಯಾಯಾಮ ಮಾಡುವುದರಿಂದ ಕೀಲುಗಳು ಪ್ರಯೋಜನವನ್ನು ಪಡೆಯಬಹುದು. ಹಾಗೇ ಈಜುವುದು, ಯೋಗ ಹಾಗೂ ವಾಕಿಂಗ್ನಂತಹ ಕಡಿಮೆ ಒತ್ತಡ ಇರುವಂತಹ ವ್ಯಾಯಾಮ ಮಾಡುವುದರಿಂದ ಕೀಲುಗಳ ಸಾಮರ್ಥ್ಯವನ್ನು ಹೆಚ್ಚಿಸಬಹುದು.
ತೂಕವನ್ನು ಕಡಿಮೆ ಮಾಡಿಕೊಳ್ಳಲು ಒಮ್ಮೆ ವೈದ್ಯರ ಬಳಿ ಸಲಹೆ ಪಡೆಯಿರಿ. ಶೇ.5-10 ತೂಕದ ಇಳಿಕೆಯು ಕೀಲು ನೋವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಕೀಲು ನೋವು ಹಾಗೂ ದೇಹದಲ್ಲಿನ ಅಧಿಕವಾಗಿ ಬೊಜ್ಜು ಏರಿಕೆಯಾಗುತ್ತಿದ್ದರೆ, ಅವುಗಳಿಂದ ತಪ್ಪಿಸಿಕೊಳ್ಳಲು ವೈದ್ಯಕೀಯ ಚಿಕಿತ್ಸೆಯಾದ ಫಿಜಿಯೋಥೆರಪಿಯನ್ನು ಅನುಸರಿಸಿ. ಇವುಗಳಿಂದ ದೇಹದಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಕೆಲಸದ ಒತ್ತಡ ನಿರ್ವಹಣೆಯನ್ನು ಮಾಡಿಕೊಳ್ಳಿ, ಸಾಕಷ್ಟು ನಿದ್ರೆ ಪಡೆಯುವುದು ಅಂದರೆ ದಿನಕ್ಕೆ 7-8 ಗಂಟೆ ನಿದ್ರಿಸುವುದು. ಧೂಮಪಾನ ತ್ಯಜಿಸುವುದರಿಂದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ