ವಿಮಾನದಲ್ಲಿ ಮಾನವ ಕಳ್ಳಸಾಗಣೆ: 20 ಜನರ ವಿಚಾರಣೆ ನಡೆಸಿದ ಗುಜರಾತ್ ಪೊಲೀಸರು

flaight
Published on

ಅಹಮದಾಬಾದ್: ಮಾನವ ಕಳ್ಳಸಾಗಣೆ ಹಿನ್ನೆಲೆಯಲ್ಲಿ ದುಬೈನಿಂದ ಹೊರಟಿದ್ದ ವಿಮಾನವನ್ನು ಫ್ರಾನ್ಸ್ ನಲ್ಲಿ ತಡೆಹಿಡಿದ ವಿಷಯ ತಿಳಿದ ಸಂಗತಿಯೇ. ಅಮೆರಿಕಾದ ನಿಕರಾಗುವಾಗೆ ತೆರಳಬೇಕಿದ್ದ ಆ ವಿಮಾನದಲ್ಲಿ ಭಾರತೀಯರನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ 4 ದಿನಗಳ ಬಳಿಕ ಇದೇ ತಿಂಗಳ 26ರಂದು ಮತ್ತೆ ಮುಂಬೈಗೆ ವಿಮಾನವನ್ನು ತರಲಾಗಿತ್ತು. ಆದರೆ ಆ ವಿಮಾನದಲ್ಲಿ ಪ್ರಯಾಣಿಸಿದ 276 ಪ್ರಯಾಣಿಕರಲ್ಲಿ ಗುಜರಾತ್‌ನ 60 ಪ್ರಯಾಣಿಕರಿದ್ದರು.

ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ಗುಜರಾತ್ ಪೊಲೀಸರು ಪ್ರಯಾಣಿಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸಿಐಡಿ ಅಧಿಕಾರಿಗಳು ಇದುವರೆಗೆ 20 ಮಂದಿಯ ವಿಚಾರಣೆ ನಡೆಸಿದ್ದಾರೆ. ನಿಕರಾಗುವಾಗೆ ಬಂದ ನಂತರ, ಪ್ರಯಾಣಿಕರು ಯುನೈಟೆಡ್ ಸ್ಟೇಟ್ಸ್ ಅನ್ನು ಅಕ್ರಮವಾಗಿ ಪ್ರವೇಶಿಸಲು ಯೋಜಿಸಿದ್ದರು ಎಂದು ನಂಬಲಾಗಿದೆ. ಸಿಐಡಿ ಎಡಿಜಿ ಎಸ್ಪಿ ರಾಜ್‌ಕುಮಾರ್ ಮಾತನಾಡಿ, ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿರುವ ಏಜೆಂಟ್‌ಗಳ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಿಐಡಿ ಎಡಿಜಿ ಎಸ್ಪಿ ರಾಜ್‌ಕುಮಾರ್ ಮಾತನಾಡಿ, ಅಕ್ರಮ ಸಾಗಣೆಯಲ್ಲಿ ಭಾಗಿಯಾಗಿರುವ ಏಜೆಂಟ್‌ಗಳ ಗುರುತು ಪತ್ತೆ ಹಚ್ಚಲಾಗುತ್ತಿದೆ. 60 ಜನರಲ್ಲಿ 20 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಉಳಿದವರನ್ನು ಕೂಡ ಶೀಘ್ರದಲ್ಲೇ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net