More

    14ಬಾರಿ ಬಜೆಟ್​ ಮಂಡಿಸಿದ ಸಿದ್ದರಾಮಯ್ಯಗೆ ಆರ್ಥಿಕ ಸಲಹೆಗಾರರು ಬೇಕಾ?: ಎಚ್‌ಡಿಕೆ ವಾಗ್ದಾಳಿ

    ಬೆಂಗಳೂರು: ರಾಜ್ಯದಲ್ಲಿ ಬರ ಮತ್ತಿತರ ಕಾರಣದಿಂದ ರೈತರು ಕಂಗೆಟ್ಟುಹೋಗಿದ್ದಾರೆ. ಕೆಲವರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಕಣ್ಣೀರೊರೆಸಬೇಕಾದ ಸರ್ಕಾರ ವಸೂಲಿದಂಧೆಗೆ ಇಳಿದಿದೆ. ಅದೂ ಸಾಲದೆಂದು ಅನಗತ್ಯವಾಗಿ ಕ್ಯಾಬಿನೆಟ್​ ದರ್ಜೆ ಹುದ್ದೆಗಳನ್ನು ಸೃಷ್ಠಿಸಿ ಹಣ ಪೋಲು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಟೀಕಿಸಿದರು.

    ಇದನ್ನೂ ಓದಿ: ರಾಮ ರಾಜ್ಯದ ಕನಸು ನನಸು ಮಾಡುವಂತೆ ಕರೆಕೊಟ್ಟ ಪೇಜಾವರ ಶ್ರೀಗಳು!
    ಜೆಡಿಎಸ್‌ ಕಚೇರಿಯ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರ ಪರಿಹಾರ ಹೆಕ್ಟೇರ್​ಗೆ 2 ಸಾವಿರ ಕೊಡಲು ಕೇಂದ್ರ ಸರ್ಕಾರಕ್ಕೆ ಕಾಯುತ್ತಿದ್ದೀರಾ? ಸರ್ಕಾರದಲ್ಲಿ ಇಷ್ಟು ಹಣವೂ ಇಲ್ಲವೇ ಎಂದು ಪ್ರಶ್ನಿಸಿದರು.

    ಗ್ಯಾರಂಟಿಗಳಿಗೆ ಹಣ ಹೊಂದಿಸುವುದು, ಪಕ್ಷ, ನಾಯಕರಿಗಾಗಿ ಹಣ ವಸೂಲಿ ಮಾಡುವ ದಂಧೆಯಲ್ಲೇ ಸರ್ಕಾರ ಮುಳುಗಿಹೋಗಿದೆ. ಇದರ ನಡುವೆ ಮೂವರು ಉಪಮುಖ್ಯಮಂತ್ರಿಗಳ ನೇಮಕದ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಿದ್ದಾರೆ. ಸಿಎಂ ವಿರುದ್ಧ ಮಾತನಾಡುವವರಿಗೆ ಅನಗತ್ಯವಾಗಿ ಕ್ಯಾಬಿನೆಟ್​ ದರ್ಜೆ ಹುದ್ದೆಗಳನ್ನು ಒದಗಿಸಿಕೊಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂಬ ಕನಿಷ್ಠ ಕಾಳಜಿಯಾದರೂ ಇರಬೇಕಲ್ಲವೇ? 14 ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಯಾವುದೇ ಅನುಭವವಿರದ ಬಿ.ಆರ್. ಪಾಟೀಲ್ ರನ್ನು ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ. ಅವರಿಗಿಂತ ಅನುಭವ ಇರುವ ತಜ್ಞರನ್ನು ನೇಮಿಸಿಕೊಳ್ಳಬೇಕಿತ್ತು. ಇವರಿಗೆ ಆರ್ಥಿಕ ಸುಧಾರಣೆ ಮಾಡುವ ಯಾವ ಅನುಭವ ಇದೆ ಎಂದು ವಾಗ್ದಾಳಿ ನಡೆಸಿದರು.

    ಆಡಳಿತ ಸುಧಾರಣೆ ಆಯೋಗಕ್ಕೆ ಈ ಹಿಂದೆ ಹಾರನಹಳ್ಳಿ ರಾಮಸ್ವಾಮಿ ಅವರನ್ನು ನೇಮಿಸಿದ್ದರು. ವಿಜಯಭಾಸ್ಕರ್ ಆಯೋಗ ಮಾಡಿ ವರದಿ ಪಡೆದಿದ್ದರು. ಈ ವರದಿ ಪಡೆದು ಏನು ಸುಧಾರಣೆ ತಂದಿದ್ದೀರಿ? ಈಗ ದೇಶಪಾಂಡೆಯವರನ್ನು ಅದೇ ಆಯೋಗಕ್ಕೆ ನೇಮಕ ಮಾಡಿದ್ದೀರಿ. ವಿಧಾನಸೌಧದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಿದ್ದೀರಿ. ಈಗ ದೇಶಪಾಂಡೆ ಕೈಯಲ್ಲಿ ಏನು ಸುಧಾರಣೆ ಮಾಡಿಸುತ್ತೀರಿ? ಇವೇನು ಗಂಜಿ ಕೇಂದ್ರಗಳೇ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

    ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ನಾಟಕದಿಂದ ಖಾಲಿ ಮಾಡಿಸಿದ್ದು ಯಾರು? ಆವಾಗ ನಿಮಗೆ ಬಿ.ಆರ್.ಪಾಟೀಲ್ ಸಲಹೆ ಕೊಟ್ಟಿದ್ದರಾ? ಯಾವ ಕಾರಣಕ್ಕೆ ಸಲಹೆಗಾರರನ್ನಾಗಿ ಮಾಡಿಕೊಂಡಿರಿ? ನಿಮಗೆ ಬಿ.ಆರ್.ಪಾಟೀಲರ ಸಲಹೆ ಬೇಕಾ? ಈ ಸರ್ಕಾರ ಗ್ಯಾರಂಟಿ ಬಗ್ಗೆ ಚರ್ಚೆ ಬಿಟ್ಟರೆ ಬೇರೆ ಏನು ಮಾಡಿದೆ? ಬರಗಾಲದ ಹೇಳಿಕೆಗಳಿಗೆ ಸರ್ಕಾರ ಸೀಮಿತವಾಗಿದೆಯೇ ಹೊರತು ಅದಕ್ಕೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮದ್ಯದ ನಶೆಯಲ್ಲಿ 33 ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts