More

    ಹೆಚ್ಚಾಗಲಿದೆ ಬಿಸಿಲ ಧಗೆ! ‘ಮೇ’ನಲ್ಲೂ ಸಿಗಲ್ಲ ರಿಲೀಫ್​, ಈ ಜಿಲ್ಲೆಯಲ್ಲಿ ದಾಖಲಾಗಲಿದೆ ಗರಿಷ್ಠ ತಾಪಮಾನ

    ಬೆಂಗಳೂರು: ದೇಶವ್ಯಾಪಿ ಬಿಸಿಲ ಧಗೆ ಹೆಚ್ಚಾಗುತ್ತಿದ್ದು, ಜನರು ಮನೆಯಿಂದ ಹೊರಬರಲು ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ, ಅತಿಯಾದ ತಾಪಮಾನ. ನಿವಾಸದಿಂದ ಹೊರಬಂದರೆ, ಬೆವರಿನ ಸ್ನಾನವೇ ಗತಿ ಎಂಬ ಮುಂಜಾಗ್ರತೆಯಿಂದ ಅನೇಕರು ತಮ್ಮ ಕೆಲಸಗಳಿಗೆ ಪರ್ಯಾಯ ವ್ಯವಸ್ಥೆ ಹುಡುಕಿಕೊಂಡಿದ್ದಾರೆ. ರಾಜ್ಯದಲ್ಲಿಯೂ ಸಹ ದಿನೇ ದಿನೇ ಹೆಚ್ಚಾಗುತ್ತಿರುವ ತಾಪಮಾನದಿಂದ ಈ ತಿಂಗಳಾದರೂ ಮುಕ್ತಿ ಸಿಗಬಹುದು ಎಂದು ನಿರೀಕ್ಷಿಸುತ್ತಿದ್ದ ಜನಸಾಮಾನ್ಯರಿಗೆ ಈ ವರದಿ ಮತ್ತಷ್ಟು ಆಘಾತ ತಂದಿದೆ.

    ಇದನ್ನೂ ಓದಿ: ರಸ್ತೆ ಏನು ನಿಮ್ಮ ಅಪ್ಪನ ಮನೆ ಆಸ್ತಿಯಾ? ಶಾಸಕ-ಮೇಯರ್​ ದಂಪತಿಗೆ KSRTC ಡ್ರೈವರ್​ ತಾಯಿಯಿಂದ ತರಾಟೆ

    ಮೇ ತಿಂಗಳಿಗೆ ಕಾಲಿಟ್ಟ ಬೆನ್ನಲ್ಲೇ ಜನರು, ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಕಡಿಮೆಯಾಗಬಹುದು. ಜೂನ್​ನಿಂದ ಮಳೆಗಾಲ ಆರಂಭವಾಗುತ್ತದೆ. ಈ ಮುನ್ಸೂಚನೆ ಇರುವುದರಿಂದ ಧಗೆ ಕ್ಷಿಣಿಸಬಹುದು ಎಂದು ಯೋಚಿಸುತ್ತಿದ್ದರು. ಆದರೆ, ಮೇ ತಿಂಗಳಲ್ಲಿ ಸಹ ತಾಪಮಾನದಿಂದ ಬಿಗ್ ರಿಲೀಫ್ ಇಲ್ಲ. ಬದಲಿಗೆ ಜನರು ಗರಿಷ್ಠ ತಾಪಮಾನ ನೋಡಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

    ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಿಸಿರುವ ವರದಿ ಪ್ರಕಾರ, ಬೆಂಗಳೂರು ನಗರದ ನಿವಾಸಿಗಳು ಈ ತಿಂಗಳು ಗರಿಷ್ಠ ಎಂದರೆ 38 ಡಿಗ್ರಿ ಸೆಲ್ಸಿಯಸ್​​ನಷ್ಟು ತಾಪಮಾನ ನೋಡಲಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ (ಏ.30) ರಾಜ್ಯದ ಕಲಬುರ್ಗಿ ಜಿಲ್ಲೆಯಲ್ಲಿ 42.8 ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ: ಈಗಲೇ ವಿಚಾರಣೆಗೆ ಹಾಜರಾಗಿ: ಪ್ರಜ್ವಲ್ ರೇವಣ್ಣ ಹೊಳೆನರಸೀಪುರದ ಮನೆ ಬಾಗಿಲಿಗೆ ನೊಟೀಸ್‌ ಅಂಟಿಸಿ ಎಸ್‌ಐಟಿ ವಾಪಸ್

    ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ (ಬಯಲು ಪ್ರದೇಶ), ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಮಗಳೂರು (ಬಯಲು ಪ್ರದೇಶ) ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿಗಾಳಿಯ ವಾತಾವರಣ ಎಂದಿನಂತೆ ಮುಂದುವರೆಯಲಿದೆ. ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗಿರಲಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

    ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

    ಟಿ-20 ವಿಶ್ವಕಪ್​: ತಂಡದಲ್ಲಿ ಇವರಿಗೆ ಸ್ಥಾನ ಕೊಡಿ, ಆತ ಬೇಡ! ಅಭಿಪ್ರಾಯ ಹೊರಹಾಕಿದ ಕ್ರಿಕೆಟ್ ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts