More

    ತಿರುಪತಿ ಪಾದಚಾರಿ ಮಾರ್ಗದಲ್ಲಿ ಮತ್ತೊಮ್ಮೆ ಚಿರತೆ ಪ್ರತ್ಯಕ್ಷ!

    ತಿರುಪತಿ: ತಿರುಮಲೆಯ ಪಾದಚಾರಿ ಮಾರ್ಗದಲ್ಲಿ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡಿದೆ. ಇದರಿಂದಾಗಿ ಕಾಲ್ನಡಿಗೆಯಲ್ಲಿ ತೆರಳುವ ಸಹಸ್ರಾರು ಮಂದಿ ಭಕ್ತರಲ್ಲಿ ಆತಂಕ ಮನೆ ಮಾಡಿದೆ.

    ಇದನ್ನೂ ನೋಡಿ: ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ; 1,400ಕ್ಕೂ ಅಧಿಕ ಕಲಾವಿದರಿಂದ ಸ್ವಾಗತ!

    ತಿರುಮಲೆಯ ಪಾದಚಾರಿ ಮಾರ್ಗದ ಶ್ರೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಹಾಕಲಾಗಿದ್ದ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಮತ್ತು ಕರಡಿ ಚಲನವಲನ ದಾಖಲಾಗಿದೆ. ಈ ಮಾರ್ಗದಲ್ಲಿ ಚಿರತೆ ಮತ್ತೊಮ್ಮೆ ಕಾಣಿಸಿಕೊಂಡು ಸಂಚಲನ ಮೂಡಿಸಿದೆ.

    ಡಿಸೆಂಬರ್ 13 ಮತ್ತು 26 ರಂದು ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಚಿರತೆ ಮತ್ತು ಕರಡಿಗಳ ಚಲನವಲನವನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು. ಇದರಿಂದ ಟಿಟಿಡಿ ಎಚ್ಚೆತ್ತುಕೊಂಡಿದೆ. ವಾಕಿಂಗ್ ಪಾತ್ ನಲ್ಲಿ ತಿರುಮಲಕ್ಕೆ ತೆರಳುವ ಭಕ್ತರಿಗೆ ಹಲವು ಸೂಚನೆಗಳನ್ನು ನೀಡಿದೆ. ಜಾಗೃತರಾಗಿ ಗುಂಪುಗಳಾಗಿ ಹೋಗುವಂತೆ ಸೂಚಿಸಲಾಗಿದೆ.

    ಈ ಹಿಂದೆ ಅಲಿಪಿರಿ ಕಾಲ್ನಡಿಗೆ ದಾರಿಯಲ್ಲಿ ಚಿರತೆಗಳು ಸಂಚರಿಸುತ್ತಿದ್ದವು. ನೆಲ್ಲೂರು ಜಿಲ್ಲೆಯ ಕೊವ್ವೂರಿನ ಹುಡುಗಿ ಲಕ್ಷಿತಾ ಚಿರತೆ ದಾಳಿಗೆ ಬಲಿಯಾಗಿ್ದಳು. ಇದರಿಂದ ಎಚ್ಚೆತ್ತ ಟಿಟಿಡಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಬೋನ್‌ಗಳಳನ್ನು ಇರಿಸಿ ಐದು ಚಿರತೆಗಳನ್ನು ಸೆರೆ ಹಿಡಿದಿತ್ತು. ಮೆಟ್ಟಿಲ ಮಾರ್ಗದಲ್ಲಿ ಪದೇ ಪದೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಭಕ್ತರಲ್ಲಿ ಆತಂಕ ಮೂಡುವಂತೆ ಮಾಡಿದೆ. ಇದರ ಬೆನ್ನಲ್ಲೇ ಮತ್ತೊಮ್ಮೆ ಚಿರತೆ, ಕರಡಿ ಪ್ರತ್ಯಕ್ಷವಾಗಿದ್ದು, ಭಕ್ತರು ಭಯ ವ್ಯಕ್ತಪಡಿಸುತ್ತಿದ್ದಾರೆ.

    ಮಧುವಣಗಿತ್ತಿಯಂತೆ ಶೃಂಗಾರಗೊಂಡ ಅಯೋಧ್ಯೆ; ಇಂದು ‘ರಾಮನಗರಿ’ಗೆ ಭರ್ಜರಿ ಗಿಫ್ಟ್ ನೀಡಲಿದ್ದಾರೆ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts