ಕೆಲಸದ ಆಯಾಸಕ್ಕೆ ವಿದಾಯ: ಐಟಿ ಉದ್ಯೋಗಿಗಳಿಗೆ ಬರ್ನೌಟ್‌ನಿಂದ ಮುಕ್ತಿಯ ರಹಸ್ಯ!| Health tips

untitled-design-2025-09-18t181858438-68cbffcbde79d
Published on

Health tips: ಬರ್ನೌಟ್ ಸಿಂಡ್ರೋಮ್ ಎಂದರೆ, ದೀರ್ಘಕಾಲದ ಒತ್ತಡದಿಂದಾಗುವ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಮಾನಸಿಕ ಬಳಲಿಕೆಯ ಸ್ಥಿತಿ ಎಂದು ಕರೆಯುತ್ತಾರೆ.

ಈ ಸಮಸ್ಯೆಯು ಸಾಮಾನ್ಯವಾಗಿ ಐಟಿ ಉದ್ಯೋಗಿಗಳಲ್ಲಿ ಕಂಡುಬರುವಂತಹ ಸಾಮಾನ್ಯ ಲಕ್ಷಣವಾಗಿದೆ. ಇದು ದೀರ್ಘಕಾಲದ ಕೆಲಸದ ಒತ್ತಡ, ಕಡಿಮೆ ವಿಶ್ರಾಂತಿ, ಮತ್ತು ಏಕತಾನತೆಯಿಂದ ಉಂಟಾಗುವ ಈ ಸಿಂಡ್ರೋಮ್ ಆರೋಗ್ಯ, ಉತ್ಪಾದಕತೆ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. ಆದರಿಂದ ಇವುಗಳಿಂದ ಮುಕ್ತಿ ಪಡೆಯಲು ಈ ಪರಿಣಾಮಕಾರಿ ವಿಧಾನಗಳನ್ನು ಇಲ್ಲಿ ಚರ್ಚಿಸಲಾಗಿದೆ.

* ಬರ್ನೌಟ್‌ನ ಲಕ್ಷಣಗಳು

* ದೈಹಿಕ ಸಮಸ್ಯೆ

ಯಾವುದೇ ವ್ಯಕ್ತಿಯು ಬರ್ನೌಟ್‌ ಸಮಸ್ಯೆಯಿಂದ ದೈಹಿಕ ಸಮಸ್ಯೆಗಳನ್ನು ಅನುಭವಿಸುತ್ತಾನೆ. ತೀವ್ರ ಆಯಾಸ, ನಿದ್ರಾಹೀನತೆ, ತಲೆನೋವು, ದೇಹದಾರಿಕೆ ಇಂತಹ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾನೆ.

* ಭಾವನಾತ್ಮಕ ಸಮಸ್ಯೆ

ನಿರಂತರ ಒತ್ತಡಗಳಿಂದ ಮನುಷ್ಯನು ಭಾವನಾತ್ಮಕವಾಗಿ ಸಮಸ್ಯೆಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಆತಂಕ, ಕಿರಿಕಿರಿ, ಖಿನ್ನತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾನೆ.

* ಉದ್ಯೋಗ ಸಂಬಂಧಿಸಿದ ಸಮಸ್ಯೆ

ಕೆಲಸಕ್ಕೆ ಸಂಬಂಧಿಸಿದಂತೆ, ಕೆಲಸ ಮಾಡುವುದಲ್ಲಿ ಇಷ್ಟವಿಲ್ಲದಿರುವುದು, ಆಸಕ್ತಿಯ ಕೊರತೆ, ಗುರಿಗಳಿಂದ ದೂರಾಗುವಿಕೆ ಸಂಬಂಧಿಸಿದ ಒತ್ತಡಗಳಿಗೆ ಉಂಟಾಗುವುದು.

ಬರ್ನೌಟ್‌ನಿಂದ ಮುಕ್ತಿಗೆ 5 ಪರಿಣಾಮಕಾರಿ ಮಾರ್ಗಗಳು

* ಕೆಲಸ ಮತ್ತು ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಿ

ಐಟಿ ಉದ್ಯೋಗಿಗಳು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಅವರು ವಿಶ್ರಾಂತಿ ಪಡೆಯುವುದರಲ್ಲಿ ಕೊರತೆ ಹೊಂದುತ್ತಿದ್ದಾರೆ. ಆದರಿಂದ ಉದ್ಯೋಗಿಗಳು ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡುವುದು ಮುಖ್ಯ. ಹಾಗೆಯೇ ಈ ಸಮಸ್ಯೆಗಳಿಂದ ಬಳಲುತ್ತಿರುವವರು ವಾರಾಂತ್ಯದಲ್ಲಿ ಮೊಬೈಲ್​, ಲ್ಯಾಪ್​ಟಾಪ್​ಗಳಿಂದ ಅಂತರ ಕಾಯ್ದುಕೊಳ್ಳಿ.

* ವ್ಯಾಯಾಮ ಮತ್ತು ಧ್ಯಾನ

ದೈನಂದಿನ ಯೋಗ, ವಾಕಿಂಗ್ ಅಥವಾ ಜಿಮ್ ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡುತ್ತದೆ. 10-15 ನಿಮಿಷದ ಧ್ಯಾನ ಅಥವಾ ದೀರ್ಘವಾದ ಉಸಿರಾಟವನ್ನು ಮಾಡುವುದರಿಂದ ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಒತ್ತಡ ಹಾರ್ಮೋನ್​ಗಳನ್ನು ಕಡಿಮೆ ಮಾಡುವ ಮೂಲಕ ಆರೋಗಹ್ಯವನ್ನು ಸುಧಾರಿಸುತ್ತದೆ.

* ಸಮಯ ಸರಿದೂಗಿಸುವುದು

ಕೆಲಸಗಳನ್ನು ಆದಷ್ಟು ಸಣ್ಣ ಭಾಗಗಳಾಗಿ ವಿಂಗಡಿಸಿಕೊಳ್ಳಿ. ಇದು ಒತ್ತಡಕ್ಕೆ ಕಾರಣವಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆಯೇ, ಈ ರೀತಿಯಾಗಿ ವಿಂಗಡನೆ ಮಾಡುವುದರಿಂದ ಕೆಲಸದ ಒತತಡಗಳು ಕಡಿಮೆಯಾಗಿ, ಉತ್ಪಾದಕತೆ ಹೆಚ್ಚಾಗುತ್ತದೆ.

* ಸಾಮಾಜಿಕ ಸಂಪರ್ಕ ಬೆಳೆಸಿ

ಕುಟುಂಬ, ಸ್ನೇಹಿತರ ಜೊತೆ ಸಮಯ ಕಳೆಯುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಐಟಿ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳ ಜೊತೆ ಒಳ್ಳೆಯ ಸಂವಹನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆ ಅವರೊಂದಿಗೆ ಕಳೆಯುವ ಸಮಯಗಳು ಮನಸ್ಸಿನ ದುಗುಡನ್ನು ಕಡಿಮೆ ಮಾಡಲು ಸಹಅಯ ಮಾಡುತ್ತದೆ.

* ಮನಶ್ಶಾಸ್ತ್ರಜ್ಞರ ಸಹಾಯ

ಬರ್ನೌಟ್ ಲಕ್ಷಣಗಳು ತೀವ್ರವಾಗಿ ಕಂಡುಬರುತ್ತಿದ್ದರೆ, ಮನಶ್ಶಾಸ್ತ್ರಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ. ಕಾಗ್ನಿಟಿವ್ ಬಿಹೇವಿಯರ್ ಥೆರಪಿ (CBT) ಮತ್ತು ಒತ್ತಡ ನಿರ್ವಹಣೆ ತಂತ್ರಗಳು ದೀರ್ಘಕಾಲೀನ ಪರಿಹಾರ ನೀಡುತ್ತವೆ. ಹಾಗೆಯೇ ನಿಮ್ಮ ಸಮಸ್ಯೆಗಳು ಏನು ಎಂಬುದನ್ನು ಪೂರ್ತಿಯಾಗಿ ತಿಳಿಸಿದರೆ ಮಾತ್ರ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಐಟಿ ಉದ್ಯೋಗಿಗಳು ಒತ್ತಡದ ಕೆಲಸದ ವಾತಾವರಣದಲ್ಲಿ ಬರ್ನೌಟ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಆದರೆ, ಕೆಲಸ-ಜೀವನ ಸಮತೋಲನ, ವ್ಯಾಯಾಮ, ಧ್ಯಾನ, ಸಮಯ ವ್ಯವಸ್ಥಾಪನೆ ಮತ್ತು ಸಾಮಾಜಿಕ ಸಂಪರ್ಕದಿಂದ ಇದನ್ನು ನಿಯಂತ್ರಿಸಬದಾಗಿದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net