

ಬೆಳ್ತಂಗಡಿ: ಭಗವಂತನ ಅನುಗ್ರಹ ಪಡೆಯಲು ಭಕ್ತಿಯೇ ಮುಖ್ಯ. ಭಕ್ತಿಯ ಮೂಲಕವೇ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರೆಲ್ಲ ಒಗ್ಗೂಡಿ ಪೂಜೆ ಉತ್ಸವ ಸತ್ಸಂಗದಲ್ಲಿ ಭಾಗವಹಿಸುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸಾಧ್ಯವೆಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಭದ್ರತಾ ಕೋಶದ ಕೊಠಡಿ ಉದ್ಘಾಟಿಸಿ, ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪುತ್ತೂರು ನಗರಸಭಾ ಸದಸ್ಯೆ ದೀಕ್ಷಾ ಪೈ, ಸಾಮಾಜಿಕ ಮುಂದಾಳು ಉಮೇಶ ಶೆಣೈ ರಾಮನಗರ, ದೇವಾಲಯದ ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ, ಉಪಾಧ್ಯಕ್ಷ ನಾರಾಯಣ ಗೌಡ, ಪುತ್ತೂರು ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕ ಯುವರಾಜ್ ಪೆರಿಯತ್ತೋಡಿ, ಸ್ವರ್ಣ ಲತಾ ಭಾಸ್ಕರ್, ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ, ಟ್ರಸ್ಟಿಗಳಾದ ವಿಜಯಲಕ್ಷ್ಮೀ ರೈ, ನವೀನ, ರಾಮಣ್ಣ ಗೌಡ, ಗಣೇಶ ಪಿ.ಪುತ್ತಿಲ, ಮುಖ್ಯಮಂತ್ರಿಗಳ ಪೊಲೀಸ್ ಪದಕ ಪುರಸ್ಕೃತ ಪ್ರವೀಣ್ ಎಂ.ಬಾರ್ಯ, ಮಾಜಿ ತಾ.ಪಂ.ಸದಸ್ಯ ಮಂಜುನಾಥ ಸಾಲ್ಯಾನ್ ಮೊದಲಾದವರಿದ್ದರು.
ಟ್ರಸ್ಟ್ ಕೋಶಾಧಿಕಾರಿ ಸೇಸಪ್ಪ ಸಾಲ್ಯಾನ್ ಬಾರ್ಯ ಸ್ವಾಗತಿಸಿದರು. ಆಡಳಿತ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ಪ್ರಸ್ತಾವನೆಗೈದರು. ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಶಿವರಾಮ ನಾಯ್ಕ ವಂದಿಸಿದರು.