

ವಾಕ್ ಮಾಡುವಾಗ ಉಸಿರುಗಟ್ಟುತ್ತಿದೆಯೇ.. ನಡೆಯುವಾಗ ಉಸಿರಾಟದ ತೊಂದರೆ ಏಕೆ ಉಂಟಾಗುತ್ತಿದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಆಸ್ತಮಾದಂತಹ ಉಸಿರಾಟದ ಕಾಯಿಲೆಗಳು, ಹೃದಯ ಸಮಸ್ಯೆಗಳು ಅಥವಾ ತುಂಬಾ ವೇಗವಾಗಿ ನಡೆಯುವುದು ಸಹ ಕಾರಣಗಳಾಗಿರಬಹುದು. ಕಾರಣವನ್ನು ತಿಳಿದುಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಉಸಿರಾಟದ ತೊಂದರೆ ಎಂದರೆ ದೇಹವು ಉಸಿರಾಡಲು ಸಾಕಷ್ಟು ಗಾಳಿಯನ್ನು ಪಡೆಯದಿದ್ದಾಗ, ಗಟ್ಟಿಯಾಗಿ ಮತ್ತು ವೇಗವಾಗಿ ಉಸಿರಾಡಲು ಪ್ರಯತ್ನಿಸುವುದು. ಫಿಟ್ನೆಸ್ಗೆ ವಾಕ್ ಬಹಳ ಮುಖ್ಯವಾಗಿದೆ. ವಾಕ್ ಮಾಡುವಾಗ ಉಸಿರಾಟದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.