

Chilli potato: ಆಲೂಗಡ್ಡೆ ಪೆರಿ ಪೆರಿ ಒಂದು ಜನಪ್ರಿಯ ತಿಂಡಿಯಾಗಿದ್ದು, ಇದನ್ನು ಕಂಡ ತಕ್ಷಣ ಎಲ್ಲರಿಗೂ ಬಾಯಲ್ಲಿ ನೀರೂರಿಸುತ್ತದೆ. ಆದಾಗ್ಯೂ, ಈ ಆಹಾರವನ್ನು ಪದೇ ಪದೇ ಸೇವಿಸುವುದರಿಂದ ಮೂತ್ರಪಿಂಡದ ಆರೋಗ್ಯಕ್ಕೆ ಹಾನಿ ಮಾಡಬಹುದು. ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಇದ್ದು, ಇದು ಮೂತ್ರಪಿಂಡದ ಪ್ರಯೋಜನಗಳಿಗೆ ಸಂಬಂಧಿಸಿದೆ. ಆದರೆ ಮೆಣಸಿನಕಾಯಿ ಹಾಗೂ ಆಲೂಗಡ್ಡೆ ತಯಾರಿಸುವ ವಿಧಾನವು ಹೆಚ್ಚಾಗಿ ತುಂಬಾ ಸಮಯ ಹುರಿಯುವುದು ಜೊತೆಗೆ ಹೆಚ್ಚಿನ ಸೋಡಿಯಂ ಸಾಸ್ಗಳ ಬಳಕೆ ಮಾಡುವುದನ್ನು ಒಳಗೊಂಡಿರುತ್ತದೆ. ಹಾಗಾಗಿ ಇದು ಪ್ರಯೋಜನಗಳನ್ನು ವಿರುದ್ಧ ದಿಕ್ಕಿಗೆ ಕಳುಹಿಸುತ್ತದೆ.
ಆಲೂಗಡ್ಡೆಯು ಸ್ವಾಭಾವಿಕವಾಗಿ ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಇದು ಹೃದಯ ಮತ್ತು ಸ್ನಾಯುಗಳ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗೆಯೇ ಮೂತ್ರ ಪಿಂಡದ ಸಮಸ್ಯೆ ಇರುವಂತವರು ಇದನ್ನು ಸೇವಿಸುವುದರಿಂದ ಹೆಚ್ಚುವರಿ ಫಿಲ್ಟ್ರ್ ಮಾಡುವ ಮೂತ್ರಪಿಂಡಗಳ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ. ಇದು ಸ್ನಾಯು ಹಾಗೂ ಹೃದಯದ ಬಡಿತವನ್ನು ಆರ್ಹೆತ್ಮಿಯಾ ಮಾಡುತ್ತದೆ. ಆದರಿಂದ ನೀವು ಸೇವಿಸುವ ಮೆಣಸಿನಕಾಯಿ ಆಲೂಗಡ್ಡೆಯು ಸುರಕ್ಷಿತ ಮಿತಿಗಳನ್ನು ಮೀರಿ ಪೊಟ್ಯಾಸಿಯಮ್ ಸೇವನೆಯನ್ನು ಅಧಿಕವಾಗಿ ಹೆಚ್ಚಿಸುತ್ತದೆ.
ಮೆಣಸಿನಕಾಯಿ ಆಲೂಗಡ್ಡೆಯ ತಯಾರಿಕೆಯಲ್ಲಿ ನಾವು ಅಧಿಕವಾಗಿ ಸೋಯಾ ಸಾಸ್, ಮೆಣಸಿನಕಾಯಿ ಸಾಸ್ ಮತ್ತು ಉಪ್ಪು ಸೇರಿಸುತ್ತೇವೆ. ಇದು ದೇಹದಲ್ಲಿ ಹೆಚ್ಚಿನ ಸೋಡಿಯಂ ಅಂಶವನ್ನು ಉಂಟುಮಾಡುತ್ತದೆ. ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಿ, ದ್ರವದ ಶೇಖರಣೆಯಾಗುವಂತೆ ಕಾರಣವಾಗುತ್ತದೆ. ಹಾಗಾಗಿ ಇದು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.
ಚಿಲ್ಲಿ ಆಲೂಗಡ್ಡೆ ಮಾಡುವಾಗ ಅನೇಕ ಬಾರಿ ಅದು ಗರಿ ಗರಿಯಾಗಿರಲಿ ಎಂದು ಡೀಪ್ ಫ್ರೈ ಮಾಡಲಾಗುತ್ತದೆ. ಈ ವಿಧಾನವು ಆಹಾರದಲ್ಲಿ ಅನಾರೋಗ್ಯಕರ ಟ್ರಾನ್ಸ್ ಕೊಬ್ಬನ್ನು ಪರಿಚಯಿಸುತ್ತದೆ. ಆದರಿಂದ ಇದು ದೇಹದಲ್ಲಿ ಹೆಚ್ಚು ಉರಿಯೂತವನ್ನು ಉತ್ತೇಜಿಸಿ, ದೇಹದಲ್ಲಾಗುವ ಚಯಾಪಚಯ ಕ್ರಿಯೆಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ.
ಅಂಗಡಿಯಲ್ಲಿ ಸಿಗುವಂತಹ ಅನೇಕ ಇಂಡೋ-ಚೈನೀಸ್ ಸಾಸ್ಗಳು ಖಾರವನ್ನು ಸಮತೋಲನಗೊಳಿಸಲು ಸಕ್ಕರೆಗಳನ್ನು ಸೇರಿಸಿರುತ್ತಾರೆ. ಈ ಸಕ್ಕರೆತ ನಿಯಮಿತ ಸೇವನೆಯು ದೇಹದಲ್ಲಿ ಮಧುಮೇಹವನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುತ್ತದೆ. ಇದು ಮೂತ್ರಪಿಂಡದ ಸಮಸ್ಯೆಗಳನ್ನು ಬರುವಹಾಗೆ ಮಾಡುತ್ತದೆ.
ಹುರಿಯುವ ಬದಲು ಬೇಯಿಸಿರಿ:ದೇಹದಲ್ಲಿ ಕೊಬ್ಬಿನಂಶವನ್ನು ಕಡಿಮೆ ಮಾಡಲು ಆಲೂಗಡ್ಡೆಯನ್ನು ಬೇಯಿಸುವುದನ್ನು ಆರಿಸಿಕೊಳ್ಳಿ.
ಸೋಡಿಯಂ ಕಡಿಮೆ ಮಾಡಿ: ದೇಹದಲ್ಲಿ ಸೋಡಿಯಂ ಕಡಿಮೆ ಮಾಡಲು ಸೋಯಾ ಸಾಸ್ ಬಳಸಿ ಮತ್ತು ಹೆಚ್ಚುವರಿ ಉಪ್ಪನ್ನು ಸೇರಿಸುವುದನ್ನು ಕಡಿಮೆ ಮಾಡಿ.
ಮನೆಯಲ್ಲಿ ತಯಾರಿಸಿ ಸಾಸ್: ಸಕ್ಕರೆ ಮತ್ತು ಉಪ್ಪಿನ ಪ್ರಮಾಣವನ್ನು ನಿಯಂತ್ರಿಸಲು ಮನೆಯಲ್ಲಿಯೇ ರುಚಿಯಾದ ಸಾಸ್ಗಳನ್ನು ತಯಾರಿಸಿ.
ಭಾಗ ನಿಯಂತ್ರಣ: ಹಾನಿಕಾರಕ ಪದಾರ್ಥಗಳ ಅತಿಯಾದ ಸೇವನೆಯನ್ನು ತಪ್ಪಿಸಲು ಮೆಣಸಿನಕಾಯಿ ಆಲೂಗಡ್ಡೆಯನ್ನು ಮಿತವಾಗಿ ಸೇವಿಸಿರಿ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.