ವ್ಯಕ್ತಿಯೊಬ್ಬನಿಂದ ಬಾಲಕಿಗೆ ಬ್ಲ್ಯಾಕ್ ಮೇಲ್.. ಅಶ್ಲೀಲ ಪೋಟೋಗಳನ್ನು ಅಳಿಸಿಹಾಕಲು ಆಕೆಯ ಸ್ನೇಹಿತರು ಮಾಡಿದ್ದೇನು..? Robbery

robbery
Published on

ಚೆನ್ನೈ: ತಮಿಳುನಾಡಿನ ಸೇಲಂ ಸೇತುವೆಯ ಮೇಲೆ ವ್ಯಕ್ತಿಯೊಬ್ಬನನ್ನು ದರೋಡೆ ಮಾಡಲಾಗುತ್ತಿರುವುದನ್ನು ತೋರಿಸುತ್ತಿರುವ ಆಘಾತಕಾರಿ ಘಟನೆಯೊಂದು ತಿರುವು ಪಡೆದುಕೊಂಡಿದ್ದು, ಇದು ದರೋಡೆಯಲ್ಲ ಬದಲಾಗಿ, ಸೇಡಿನ ಕೃತ್ಯ (Robbery) ಎಂದು ಸೇಲಂ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ (ಅ.25) ರಂದು ಮೂವರು ಯುವಕರು ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನನ್ನು ಸೇತುವೆ ಮೇಲೆ ನಿಲ್ಲಿಸಿ ಅವರ ಮೊಬೈಲ್​ ಫೋನ್​ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಈ ವಿಡಿಯೋ ಗಮನಿಸಿದ ಜನರು ಹಾಡಹಗಲೇ ಅಮಾಯಕ ವ್ಯಕ್ತಿಯೊಬ್ಬನನ್ನು ದರೋಡೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಆದರೆ, ಘಟನೆ ಕುರಿತು ವಿಚಾರಣೆ ನಡೆಸಿದ ಸೇಲಂ ಜಿಲ್ಲಾ ಎಸ್ಪಿ ಅನಿಲ್ ಕುಮಾರ್ ಗಿರಿ ಇದು ದರೋಡೆ ಪ್ರಕರಣವಲ್ಲ. ಬದಲಾಗಿ ಇದನ್ನು ಉದ್ದೇಶದಿಂದ ಮಾಡಲಾದ ಕೃತ್ಯ ಎಂದು ಅವರು ಹೇಳಿದ್ದಾರೆ.

ವೀಡಿಯೊದಲ್ಲಿರುವ ಸುರೇಶ್ ಎಂದು ಕರೆದುಕೊಳ್ಳುವ ವ್ಯಕ್ತಿ ತನ್ನ ಗುರುತಿನ ಬಗ್ಗೆ ಸುಳ್ಳು ಹೇಳಿದ್ದಾನೆ. ಆತನ ನಿಜವಾದ ಹೆಸರು ಬ್ರಹ್ಮನಾಯಗಂ. ಈತ ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ಸೃಷ್ಟಿಸಿ ಒಂದು ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದನು. ಇದಾದ ಬಳಿಕ, ಆನ್‌ಲೈನ್‌ನಲ್ಲಿ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದನು ಎಂದು ಆರೋಪಿಸಲಾಗಿದೆ.

ಈ ಘಟನೆ ನಂತರ ಬಾಲಕಿಯು ರಾಮಕೃಷ್ಣನ್ ಎಂಬ ವ್ಯಕ್ತಿಗೆ ದೂರು ನೀಡಿದ್ದಾಳೆ. ರಾಮಕೃಷ್ಣನ್ ತನ್ನ ಸ್ನೇಹಿತ ಮತ್ತು ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ಬ್ರಹ್ಮನಾಯಗಮ್‌ಗೆ ಪರಿಚಿತನಾಗಿದ್ದನು. ಈ ವೇಳೆ ಹುಡುಗಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸುವಂತೆ ಹಲವಾರು ಬಾರಿ ಎಚ್ಚರಿಸಿದರೂ, ಅವರು ಕೇಳಲಿಲ್ಲ. ಹಾಗಾಗಿ ರಾಮಕೃಷ್ಣನ್​ ಹಾಗೂ ಆತನ ಸ್ನೇಹಿತರು ಒಂದು ಯೋಜನೆ ಹಾಕಿಕೊಂಡರು.

ಇವರು ನಕಲಿ ಸಾಮಾಜಿಕ ಮಾಧ್ಯಮ ಐಡಿಯನ್ನು ಸೃಷ್ಟಿಸಿ ಬ್ರಹ್ಮನಾಯಗಂ ಅವರನ್ನು ಚೆನ್ನೈಗೆ ಬರುವಂತೆ ಹೇಳಿದ್ದಾರೆ. ಆತ ಬಂದಾಗ ಅವರ ಮೊಬೈಲ್​ ಫೋನ್​ನ್ನು ಕಸಿದುಕೊಂಡು ಅದರಲ್ಲಿರುವ ಅಶ್ಲೀಲ ಫೋಟೋಗಳನ್ನು ಡಿಲೀಟ್​ ಮಾಡಿ ಆತನನ್ನು ಹೋಗಲು ಬಿಟ್ಟಿದ್ದಾರೆ.

ಹುಡುಗಿಯ ಅಶ್ಲೀಲ ಫೋಟೋಗಳು ಮತ್ತು ಚಾಟ್​ಗಳನ್ನು ನಾಶಪಡಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ಹಾಗಾಗಿ ನಕಲಿ ಸಾಮಾಜಿಕ ಮಾಧ್ಯಮ ಐಡಿಯನ್ನು ಸೃಷ್ಟಿಸಿ ಬ್ರಹ್ಮನಾಯಗಂವನ್ನು ಕರೆಸಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ. ನಾವು ಕೇವಲ ಸ್ಕ್ರೀನ್​ಶಾಟ್​ಗಳನ್ನು ನೋಡಿದ್ದೇವೆ ಆದರೆ ಅವುಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net