

Digestion: ಇಂದಿನ ಕಾಲಮಾನದಲ್ಲಿ ಬಹುತೇಕರು ತಿಂದ ಅನ್ನವನ್ನು ಅರಗಿಸಿಕೊಳ್ಳಲು ತೀರ ಪರದಾಡುವಂತ ಹಂತವನ್ನು ತಲುಪಿದ್ದಾರೆ. ಇಷ್ಟಪಟ್ಟ ಆಹಾರ ತಿನ್ನೋದಿರಲಿ, ಬೆಳಗ್ಗಿನ ಲಘು ತಿಂಡಿ ಅಥವಾ ಉಪಹಾರ ಸೇವನೆಯನ್ನು ಜೀರ್ಣಿಸಿಕೊಳ್ಳಲು ಕುಳಿತ ಜಾಗದಲ್ಲಿಯೇ ಹಲವು ಸಾಹಸಗಳನ್ನು ಮಾಡುತ್ತಿರುತ್ತಾರೆ. ತಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಹಣ್ಣು-ತರಕಾರಿ ಸೇರಿಸಿಕೊಳ್ಳದ ಜನರು, ಇಂತಹ ಅಜೀರ್ಣ ಸಮಸ್ಯೆಯನ್ನು ದೊಡ್ಡ ತೊಂದರೆಯನ್ನಾಗಿ ಎದುರಿಸುತ್ತಿದ್ದಾರೆ. ಅಸಲಿಗೆ ನೂರಾರು ಹಣ್ಣುಗಳ ಪೈಕಿ ಯಾವ ಹಣ್ಣು ಸೇವಿಸಿದರೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ? ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಪಪ್ಪಾಯ ಅಥವಾ ಪರಂಗಿ ಎಂದು ಕರೆಯಲ್ಪಡುವ ಈ ಹಣ್ಣಿನಲ್ಲಿ ಹಲವಾರು ಜೀರ್ಣಕಾರಿ ಪ್ರಯೋಜನಗಳು ಹೇರಳವಾಗಿವೆ. ಇದರಲ್ಲಿನ ಪ್ರೋಟಿಯೋಲೈಟಿಕ್ ಕಿಣ್ವವು ಪ್ರೋಟೀನ್‌ಗಳನ್ನು ಅಮೈನೋ ಆಮ್ಲಗಳಾಗಿ ವಿಭಜಿಸುತ್ತದೆ ಮತ್ತು ಅವುಗಳನ್ನು ಜೀರ್ಣಿಸಿಕೊಳ್ಳಲು ಸುಲಭ ಮಾಡುತ್ತದೆ. ಈ ಕಿಣ್ವವು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳುವಲ್ಲಿ ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ, ಪಪ್ಪಾಯದಲ್ಲಿನ ಹೆಚ್ಚಿನ ನೀರು ಮತ್ತು ಫೈಬರ್ ಅಂಶವು ಮಲಬದ್ಧತೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಇದು ಕರುಳಿನ ಆರೋಗ್ಯಕ್ಕೂ ಅತ್ಯುತ್ತಮ ಹಣ್ಣಾಗಿದೆ.
ಸಾಮಾನ್ಯವಾಗಿ ವರ್ಷ ಪೂರ ಲಭ್ಯವಿರುವ ಅನಾನಸ್ ಹಣ್ಣಿನಲ್ಲಿ ಬ್ರೊಮೆಲೈನ್ ಅಂಶವಿರುತ್ತದೆ. ಇದು ಪ್ರೋಟೀನ್‌ಗಳನ್ನು ಸಣ್ಣ ಪೆಪ್ಟೈಡ್ಗಳು ಮತ್ತು ಅಮೈನೋ ಆಮ್ಲಗಳಾಗಿ ವಿಭಜಿಸುವ ಮೂಲಕ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೊಟ್ಟೆ ಭಾರವಾಗುವಂತೆ ಅಥವಾ ಪ್ರೋಟೀನ್ ಭರಿತ ಆಹಾರವನ್ನು ಜೀರ್ಣಿಸಲು ಪೈನಾಪಲ್ನಲ್ಲಿರುವ ನೈಸರ್ಗಿಕ ಸಿಹಿ ಮತ್ತು ಅಸಿಡಿಟಿ ಅಂಶ ಸಾಕು. ಇದು ಪ್ರಕ್ರಿಯೆಯನ್ನು ಸರಾಗಗೊಳಿಸುವ ಶಕ್ತಿಯನ್ನು ಹೊಂದಿದೆ.
ಬಾಳೆಹಣ್ಣು ಫೈಬರ್‌ನಲ್ಲಿ ಹೆಚ್ಚು ಸಮೃದ್ಧವಾಗಿದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಸಹಕಾರಿಯಾಗಿದೆ. ಬಾಳೆಹಣ್ಣು ನಿರೋಧಕ ಪಿಷ್ಟವನ್ನು ಸಹ ಹೊಂದಿರುತ್ತದೆ. ಇದು ಪ್ರೀಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಹೊಟ್ಟೆಯಲ್ಲಿನ ಹುಣ್ಣುಗಳಂತಹ ಜೀರ್ಣಕಾರಿ ಸಮಸ್ಯೆಗಳಿರುವ ಜನರಿಗೆ ಇದು ಹೇಳಿ ಮಾಡಿಸಿದ ಹಣ್ಣಾಗಿದೆ.
ಪ್ರೋಟೀನ್ ಜೀರ್ಣಕ್ರಿಯೆಯನ್ನು ಸುಧಾರಿಸುವ ಕಿಣ್ವದ ಶಕ್ತಿ ಕೇಂದ್ರವಾದ ಕಿವಿ ಹಣ್ಣು ಜೀರ್ಣಕ್ರಿಯೆಗೆ ಉತ್ತಮವಾದ ದುಬಾರಿ ಫ್ರೂಟ್. ಇದು ಸೇವಿಸಿದ ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಒಡೆಯುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿನ ಹೆಚ್ಚಿನ ಫೈಬರ್ ಅಂಶವು ಕರುಳಿನ ಕ್ರಮಬದ್ಧತೆಯನ್ನು ಉತ್ತೇಜಿಸುತ್ತದೆ. ಈ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುವ ಕಾರಣ ಬೇಡದ ಅಂಶವನ್ನು ಹೊರಹಾಕುವಲ್ಲಿ ಸಹಕಾರಿಯಾಗಿದೆ.
ಊಟಕ್ಕೂ ಮೊದಲು ಅಥವಾ ಊಟದ ನಂತರದಲ್ಲಿ ಯಥೇಚವಾಗಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆಯಿಂದ ದೂರ ಉಳಿಯಬಹುದು ಎಂದು ಹಲವರು ಅಭಿಪ್ರಾಯಿಸುತ್ತಾರೆ. ಆದರೆ, ಈ ಹಣ್ಣು ತನ್ನ ದೇಹವನ್ನು ಶೇ.90ರಷ್ಟು ನೀರಿನ ಅಂಶದಿಂದಲೇ ಕೂಡಿಸಿಕೊಂಡಿರುವುದು ವಿಶೇಷ. ಕಲ್ಲಂಗಡಿ ಜಲಸಂಚಯನಕ್ಕೆ ಉತ್ತಮ ಹಣ್ಣುಗಳಲ್ಲಿ ಒಂದಾಗಿದೆ. ಇದು ಆರೋಗ್ಯಕರ ಜೀರ್ಣಕ್ರಿಯೆಗೆ ನಿರ್ಣಾಯಕವಾಗಿದೆ. ಇದು ಮಲವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಯಮಿತ ಕರುಳಿನ ಚಲನೆಯನ್ನು ಬೆಂಬಲಿಸುತ್ತದೆ. ಜೀರ್ಣಕಾರಿ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಉತ್ತಮ ಹಣ್ಣು, (ಏಜೆನ್ಸೀಸ್).