

lifestyle; ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಅತಿಯಾದ ಬಳಕೆ ಜನರ ನಡುವಿನ ವೈಯಕ್ತಿಕ ಸಂಬಂಧಗಳನ್ನು ಹಾಳುಮಾಡುತ್ತಿದೆ. ಕೂತರು, ನಿಂತರು ಹಾಗೂ ಮಲಗಿದರೂ ಮೊಬೈಲ್ ಬೇಕೇ ಬೇಕು ಎನ್ನುವಂತಾಗಿದೆ. ಊಟ ಮಾಡುವಾಗ, ಪ್ರಯಾಣ ಮಾಡುವಾಗ ಮತ್ತು ನಿತ್ಯ ಕರ್ಮಗಳನ್ನು ಮುಗಿಸುವಾಗಲೂ ಮೊಬೈಲ್ ಕೈಯಲ್ಲಿ ಹಿಡಿದಿರಲೇಬೇಕು.
ಗಂಟೆಗಟ್ಟಲೆ ಮೊಬೈಲ್ನಲ್ಲಿ ಚಾಟ್ ಮಾಡುತ್ತಿರಲಿ ಅಥವಾ ಲ್ಯಾಪ್ಟಾಪ್ನಲ್ಲಿ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುತ್ತಿರಲಿ, ಒಬ್ಬ ವ್ಯಕ್ತಿಯು ದೇಹದ ಸಂಪೂರ್ಣ ತೂಕವನ್ನು ಬಗ್ಗಿಸುವ ಮೂಲಕ ಕೆಲಸ ಮಾಡುತ್ತಾನೆ. ಇದು ಕುತ್ತಿಗೆ ನೋವು (ಟೆಕ್ ನೆಕ್), ಸ್ನಾಯು ಒತ್ತಡ, ಮತ್ತು ಕೆಲವೊಮ್ಮೆ ತಲೆನೋವು ಅಥವಾ ಭುಜದ ನೋವು ಸಹ ಉಂಟಾಗುವ ಸಾಧ್ಯತೆ ಇರುತ್ತದೆ.
ಇನ್ನೂ ಹೆಚ್ಚಾಗಿ ಫೋನ್ ಬಳಸುವಾಗ, ವಿಶೇಷವಾಗಿ ತಲೆಯನ್ನು ಮುಂದಕ್ಕೆ ಬಾಗಿಸಿ ನೋಡುವುದರಿಂದ ಕುತ್ತಿಗೆಯ ಮೇಲೆ ಗಮನಾರ್ಹ ಒತ್ತಡ ಬೀಳುತ್ತದೆ. ಇದನ್ನು ಫಾರ್ವರ್ಡ್ ಹೆಡ್ ಪೋಸ್ಚರ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ತಲೆಯ ತೂಕ ಸುಮಾರು 4.5 ರಿಂದ 5.5 ಕೆ.ಜಿ. ಆಗಿರುತ್ತದೆ. ಆದರೆ ತಲೆಯನ್ನು ಮುಂದಕ್ಕೆ ಬಾಗಿಸಿದಾಗ ಕುತ್ತಿಗೆಯ ಮೇಲಿನ ಒತ್ತಡ ಹೆಚ್ಚಾಗುತ್ತದೆ.
ಇದರರ್ಥ ನೀವು ನಿಮ್ಮ ಫೋನ್ನಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿದರೆ, ನಿಮ್ಮ ಕುತ್ತಿಗೆ ಮತ್ತು ಸ್ನಾಯುಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತವೆ. ಇದು ನಿಮ್ಮ ಕುತ್ತಿಗೆಯಲ್ಲಿರುವ ನಮ್ಯತೆಯನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ.
60° ಬಾಗಿದಾಗ: ಸುಮಾರು 27 ಕೆ.ಜಿ.
45° ಬಾಗಿದಾಗ: ಸುಮಾರು 22 ಕೆ.ಜಿ.
30° ಬಾಗಿದಾಗ: ಸುಮಾರು 18 ಕೆ.ಜಿ.
15° ಬಾಗಿದಾಗ: ಕುತ್ತಿಗೆಯ ಮೇಲಿನ ಒತ್ತಡ ಸುಮಾರು 12 ಕೆ.ಜಿ.
(ಏಜೆನ್ಸೀಸ್)
ಇನ್ನು ಸ್ಯಾಪಿಯನ್ ಲ್ಯಾಬ್ಸ್ನ ಸಂಶೋಧನೆಯು ಸ್ಮಾರ್ಟ್ಫೋನ್ ಬಳಕೆಯನ್ನು ನಿಯಂತ್ರಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಸ್ಮಾರ್ಟ್ಫೋನ್ಗಳು ಭಾವನಾತ್ಮಕ ನಿಯಂತ್ರಣ, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ಸಂಶೋಧನೆ ಹೇಳಿದೆ
ಕುತ್ತಿಗೆ ಮತ್ತು ಭುಜದ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.
ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ.
ವಿರಾಮ ತೆಗೆದುಕೊಂಡು ಕುತ್ತಿಗೆ ವ್ಯಾಯಾಮ ಮಾಡಿ.
ಫೋನ್ನ್ನು ಕಣ್ಣಿನ ಮಟ್ಟದಲ್ಲಿ ಬಳಕೆ ಮಾಡಿ.