ವಿಶ್ವದ ಅತಿ ಎತ್ತರದ ಸೇತುವೆ ಉದ್ಘಾಟಿಸಿದ 'ಚೀನಾ'; 2 ಗಂಟೆಗಳ ಪ್ರಯಾಣ 2 ನಿಮಿಷಕ್ಕೆ ಇಳಿಕೆ| tallest bridge

china
Published on

ಚೀನಾ; ವಿಶ್ವದ ಅತಿ ಎತ್ತರದ ಸೇತುವೆಯಾದ ಹುವಾಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯನ್ ಸೇತುವೆಯನ್ನು ಇಂದು (ಸೆ.29) ಚೀನಾ ಉದ್ಘಾಟಿಸಿದೆ. ಇದು ಎಂಜಿನಿಯರಿಂಗ್‌ನ ಒಂದು ಮಹತ್ವದ ಸಾಧನೆಯಾಗಿದ್ದು, ಇದನ್ನು ಗೈಝೌ ಪ್ರಾಂತ್ಯದದಲ್ಲಿ 625 ಮೀಟರ್ (2,051 ಅಡಿ) ಎತ್ತರದಲ್ಲಿ ನಿರ್ಮಾಣಗೊಳಿಸಲಾಗಿದೆ.

ಹುವಾಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯನ್ ಸೇತುವೆ ಇದೀಗ ವಿಶ್ವದ ಅತಿ ಎತ್ತರದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ವಿಶಾಲವಾದ ನೋಟಗಳನ್ನು ಒಳಗೊಂಡಿದೆ. ಈ ಸೇತುವೆಯು ಒಟ್ಟಾರೆ 1,420 ಮೀಟರ್‌ಗಳ ಮುಖ್ಯ ವಿಸ್ತಾರವನ್ನು ಹೊಂದಿದ್ದು, ಇದು ಪರ್ವತ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ ವಿಸ್ತಾರ ಸೇತುವೆಯಾಗಿ ಹೊರಹೊಮ್ಮಿದೆ. ಒರಟಾದ ಮತ್ತು ಗುಡ್ಡಗಾಡು ಪ್ರದೇಶಗಳನ್ನು ಹೊಂದಿರುವ ಗೈಝೌ ಪ್ರಾಂತ್ಯವು ತನ್ನ ಅದ್ಭುತ ಸೇತುವೆಗಳಿಗೆ ಹೆಸರುವಾಸಿಯಾಗಿದೆ. ಕ್ಸಿನ್ಹುವಾ ಪ್ರಕಾರ, ವಿಶ್ವದ 100 ಅತಿ ಎತ್ತರದ ಸೇತುವೆಗಳಲ್ಲಿ ಸುಮಾರು ಅರ್ಧದಷ್ಟು ಈ ಪ್ರಾಂತ್ಯದಲ್ಲಿವೆ ಎಂದು ಹೇಳಲಾಗಿದೆ.

ಈ ಯೋಜನೆ ಪೂರ್ಣಗೊಳ್ಳಲು ಸರಿಸುಮಾರು ಮೂರು ವರ್ಷಗಳಿಗೂ ಅಧಿಕ ಸಮಯ ತೆಗೆದುಕೊಂಡಿದೆ. ಪ್ರಯಾಣದ ಸಮಯವನ್ನು ಎರಡು ಗಂಟೆಗಳಿಂದ ಎರಡು ನಿಮಿಷಗಳಿಗೆ ಇಳಿಸುವ ಮೂಲಕ, ಈ ಸೇತುವೆಯನ್ನು ನೆಲದಿಂದ 625 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ.

ಚೀನಾದ ಬೆಳವಣಿಗೆ

(ಏಜೆನ್ಸೀಸ್)

ಕಳೆದ ಕೆಲವು ದಶಕಗಳಲ್ಲಿ ಚೀನಾ ಮೂಲಸೌಕರ್ಯ ಮತ್ತು ನಗರೀಕರಣ ಯೋಜನೆಗಳಲ್ಲಿ ಗಮನಾರ್ಹ ಹೂಡಿಕೆಯನ್ನು ಮಾಡಿದೆ. ಇದು ಅದರ ತ್ವರಿತ ಆರ್ಥಿಕ ಬೆಳವಣಿಗೆಗೆ ಬಹುಮುಖ್ಯ ಕಾರಣವಾಗಿದೆ. ಹುವಾಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯನ್ ಸೇತುವೆಯಂತಹ ಮೆಗಾ ಯೋಜನೆಗಳು ದೂರದ ಪ್ರದೇಶಗಳನ್ನು ಸಂಪರ್ಕಿಸುವ ಮತ್ತು ಅತ್ಯಾಧುನಿಕ ಸಾರಿಗೆ ಜಾಲಗಳ ಮೂಲಕ ಅಭಿವೃದ್ಧಿಯನ್ನು ಬೆಂಬಲಿಸುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net