ನೀವು ರಾತ್ರಿಯಿಡಿ ಫ್ಯಾನ್​ ಆನ್​ ಮಾಡಿ ಮಲಗುತ್ತೀರಾ? ಎಷ್ಟು ಡೇಂಜರ್​ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ... Fan on all Night

Fan on all Night
Published on

Fan on all Night : ಕೆಲವರು ನಿದ್ದೆ ಮಾಡುವಾಗ ಯಾವಾಗಲೂ ಫ್ಯಾನ್ ಆನ್ ಮಾಡಿರುತ್ತಾರೆ. ಸ್ವಲ್ಪ ಚಳಿಯಿದ್ದರೂ ಕೆಲವರು ಫ್ಯಾನ್ ಇಲ್ಲದೇ ಮಲಗಲಾರರು. ಫ್ಯಾನಿನ ಸದ್ದು ಕೇಳದೆ ನಿದ್ದೆ ಬಾರದವರೂ ಇದ್ದಾರೆ. ಆದರೆ, ರಾತ್ರಿಯಿಡೀ ಫ್ಯಾನ್ ಹಾಕಿಕೊಂಡರೆ ಆರೋಗ್ಯ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತದೆ ಎನ್ನುತ್ತಾರೆ ತಜ್ಞರು.

ರಾತ್ರಿಯಿಡೀ ಫ್ಯಾನ್ ಆನ್​ ಮಾಡಿ ಮಲಗಿದರೆ, ಉಸಿರಾಟದ ತೊಂದರೆ, ಅಸ್ತಮಾ ಮತ್ತು ಅಪಸ್ಮಾರದಂತಹ ಸಮಸ್ಯೆಗಳನ್ನು ಉಂಟಾಗುತ್ತದೆ ಎಂದು ಹಲವು ಅಧ್ಯಯನಗಳು ತೋರಿಸಿವೆ.

ಎಷ್ಟೇ ಕ್ಲೀನ್​ ಮಾಡಿದರೂ ಫ್ಯಾನ್​ನಲ್ಲಿರುವ ಧೂಳು ಹೋಗುವುದಿಲ್ಲ. ಫ್ಯಾನ್​ ಆನ್​ ಮಾಡಿದಾಗ ಅದರಲ್ಲಿರುವ ಧೂಳು ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ಅಲ್ಲದೆ, ದೇಹವು ಫ್ಯಾನ್​ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಚರ್ಮವು ತುಂಬಾ ಒಣಗುತ್ತದೆ. ಇದರಿಂದ ಚರ್ಮವು ನಿರ್ಜಲೀಕರಣಗೊಳ್ಳುತ್ತದೆ. ಇದರಿಂದ ರಾತ್ರಿಯೆಲ್ಲಾ ಫ್ಯಾನಿನ ಕೆಳಗೆ ಮಲಗಿ ಬೆಳಗ್ಗೆ ಸುಸ್ತಾಗಿ ಏಳುತ್ತೀರಿ. ಕೆಲವೊಮ್ಮೆ ತೀವ್ರವಾದ ದೇಹದ ನೋವು ಕೂಡ ಇರುತ್ತದೆ.

ಇನ್ನು ಶಿಶುಗಳು ಮಲಗಿರುವಾಗ ಅವರ ಮುಖದ ಮೇಲೆ ಬಲವಾದ ಗಾಳಿ ಬೀಸದಂತೆ ತುಂಬಾ ಎಚ್ಚರಿಕೆ ವಹಿಸಿ. ನೀವು ರಾತ್ರಿಯಿಡೀ ಫ್ಯಾನ್‌ನೊಂದಿಗೆ ಮಲಗಲು ಬಯಸಿದರೆ, ಆ ಕೋಣೆಯಲ್ಲಿ ಗಾಳಿ ಬೆಳಕಿನ ವ್ಯವಸ್ಥೆ ಚೆನ್ನಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net