

Eye Health : ಸರ್ವೇಂದ್ರಿಯಾಣಂ ನಯನಂ ಪ್ರಧಾನಂ ಎನ್ನುತ್ತಾರೆ. ಇದರರ್ಥ ಕಣ್ಣುಗಳು ಎಲ್ಲ ಅಂಗಗಳಿಗಿಂತ ಪ್ರಮುಖವಾಗಿವೆ ಎಂದರ್ಥ. ಅದಕ್ಕಾಗಿಯೇ ಕಣ್ಣುಗಳನ್ನು ಆರೋಗ್ಯವಾಗಿರಿಸಿಕೊಳ್ಳಬೇಕು. ಆದರೆ, ಇಂದು ಸ್ಮಾರ್ಟ್ಫೋನ್ಗಳ ಅತಿಯಾದ ಬಳಕೆ ಜನರ ಕಣ್ಣಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ದೇಹದ ಬಹುಮುಖ್ಯ ಅಂಗವಾಗಿರುವ ಕಣ್ಣುಗಳು ಆರೋಗ್ಯವನ್ನು ಕಳೆದುಕೊಳ್ಳುತ್ತಿವೆ.
ದಿನವಿಡಿ ಮೊಬೈಲ್ ಪರದೆಯನ್ನು ನೋಡುವುದು, ರಾತ್ರಿಯಲ್ಲಿ ಲೈಟ್ ಆಫ್ ಮಾಡಿ, ಕತ್ತಲಲ್ಲಿ ಮೊಬೈಲ್ ಬಳಸುವುದು, ಮುಂತಾದವುಗಳಿಂದ ಕಣ್ಣಿನ ಆರೋಗ್ಯ ಹಾಳಾಗಿ, ದೃಷ್ಟಿ ಮಂದವಾಗುತ್ತದೆ. ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳಬಹುದು. ಈ ಸಮಸ್ಯೆ ಎದುರಾಗಬಾರದು ಅಂದರೆ, ಕಣ್ಣುಗಳ ಆರೋಗ್ಯದ ಮೇಲೆ ನಿಮ್ಮ ಗಮನವಿರಲಿ. ನಾವೀಗ ಕಣ್ಣಿನ ಆರೋಗ್ಯವನ್ನು ಸುಧಾರಿಸುವ ಕೆಲವು ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.
* ಕಣ್ಣಿನ ಆರೋಗ್ಯವನ್ನು ಸುಧಾರಿಸಲು ವಿಟಮಿನ್ ಎ ಅತ್ಯುತ್ತಮ ಎಂದು ಎಲ್ಲರೂ ಹೇಳುತ್ತಾರೆ. ಇದಲ್ಲದೆ, ವಿಟಮಿನ್ ಸಿ ಮತ್ತು ಖನಿಜಗಳಾದ ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತವೆ.
* ಸೊಪ್ಪು ಸೇರಿದಂತೆ ಹಸಿರು ತರಕಾರಿಗಳನ್ನು ಸೇವಿಸಿದರೆ ಕಣ್ಣಿಗೆ ಆರೋಗ್ಯವನ್ನು ಕಾಪಾಡುವ ವಿಟಮಿನ್ಗಳು ದೇಹಕ್ಕೆ ತಲುಪುತ್ತವೆ.
* ಸಾಲ್ಮನ್ ಮೀನು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ನೀವು ಕಣ್ಣಿನ ಶುಷ್ಕತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಮೀನುಗಳನ್ನು ಸೇರಿಸುವುದು ಉತ್ತಮ.
* ದ್ವಿದಳ ಧಾನ್ಯಗಳಲ್ಲಿ ಸತುವು ಸಮೃದ್ಧವಾಗಿದೆ. ಈ ಕಾರಣದಿಂದಾಗಿ ಕಣ್ಣಿನ ರೆಟಿನಾಗೆ ಹಾನಿಯಾಗುವುದಿಲ್ಲ. ಅಕ್ಷಿಪಟಲ ಚೆನ್ನಾಗಿದ್ದರೆ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನೂ ಸೇರಿಸಿ.
* ಸಿಟ್ರಸ್ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು. ಆಮ್ಲ, ಕಿತ್ತಳೆ ಮತ್ತು ಸ್ಟ್ರಾಬೆರಿಯಂತಹ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿದರೆ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಇದು ಕೇವಲ ಜಾಗೃತಿಗಾಗಿ. "ವಿಜಯವಾಣಿ.ನೆಟ್" ಇದನ್ನು ದೃಢೀಕರಿಸುವುದಿಲ್ಲ. ಈ ಸಲಹೆಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.