

Egg: ಮೊಟ್ಟೆಗಳು ಪೌಷ್ಟಿಕಾಂಶಯುಕ್ತ ಆಹಾರವಾಗಿವೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಬಿ12, ವಿಟಮಿನ್ ಡಿ, ಕೋಲೀನ್ ಮತ್ತು ಕಬ್ಬಿಣದಂತಹ ಶಕ್ತಿಶಾಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ, ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೀವು ಪ್ರತಿದಿನ ಒಂದು ಮೊಟ್ಟೆ ತಿನ್ನಲು ಪ್ರಾರಂಭಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟಿನ್ ಇದ್ದು, ಇದು ಬಲವಾದ ಮತ್ತು ಆರೋಗ್ಯಕಾರ ಸ್ನಾಯುಗಳ ರೂಪಿಸಲು ಮೊಟ್ಟೆ ಸಹಕಾರಿಯಾಗಲಿದೆ. ಒಂದು ಮೊಟ್ಟೆಯಲ್ಲಿ ಸುಮಾರು 6-7 ಗ್ರಾಂ ಪ್ರೋಟಿನ್ ಇರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವುದಲ್ಲದೆ ಅಂಗಾಂಶ ದುರಸ್ತಿಯೂ ಸಹಾಯ ಮಾಡುತ್ತದೆ. ಫಿಟ್ನೆಸ್ ಕಾಯ್ದುಕೊಳ್ಳುವರು ತಮ್ಮ ದೈನಂದಿನ ಊಟದಲ್ಲಿ ಮೊಟ್ಟೆ ಸೇರಿಸಿಕೊಳ್ಳುವುದು ಉತ್ತಮ. ಆದರೆ ಮೊಟ್ಟೆ ತಿನ್ನುವಾಗ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುತ್ತದೆ ಹಾಗಾಗಿ ಅದೇನೆಂಬುದನ್ನು ನೋಡೋಣ
ಅರೆಬೆಂದ ಮೊಟ್ಟೆ ತಿನ್ನುವುದು: ಸರಿಯಾಗಿ ಬೆಯದ ಮೊಟ್ಟೆಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಕೂಡಿರಬಹುದು. ಇದು ಆಹಾರ ವಿಷಕ್ಕೆ ಕಾರಣವಾಗಬಹುದು. ಯಾವಾಗಲೂ ಮೊಟ್ಟೆಗಳನ್ನು ಸಂಪೂರ್ಣವಾಗಿ ಬೇಯಿಸಿದ ಬಳಿಕ ತಿನ್ನಿರಿ.
ಹಳೆಯ ಮೊಟ್ಟೆಗಳನ್ನು ಬಳಸುವುದು: ಫ್ರಿಜ್‌ನಲ್ಲಿ ತುಂಬಾ ದಿನಗಳಿಂದ ಇಟ್ಟಿರುವ ಮೊಟ್ಟೆಗಳು ಹಾಳಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಖರೀದಿಸಿದ ದಿನಾಂಕವನ್ನು ಪರಿಶೀಲಿಸಿ ಮತ್ತು ಒಂದು ತಿಂಗಳ ಒಳಗೆ ಅದನ್ನು ಬಳಸಿ. ತಾಜಾತನ ಪರೀಕ್ಷಿಸಲು, ಮೊಟ್ಟೆಯನ್ನು ನೀರಿನ ಬೌಲ್‌ನಲ್ಲಿ ಇಡಿ. ಅದು ಮುಳುಗಿದರೆ ತಾಜಾ, ತೇಲಿದರೆ ಹಾಳಾಗಿದೆ ಎಂದರ್ಥ.
ಅತಿಯಾಗಿ ತಿನ್ನುವುದು: ಮೊಟ್ಟೆಗಳು ಪೌಷ್ಟಿಕವಾಗಿದ್ದರೂ, ಅತಿಯಾಗಿ ತಿನ್ನುವುದರಿಂದ (ವಿಶೇಷವಾಗಿ ಹಳದಿ ಭಾಗ) ಕೊಲೆಸ್ಟ್ರಾಲ್ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ವ್ಯಕ್ತಿಗೆ ದಿನಕ್ಕೆ 1-2 ಮೊಟ್ಟೆ ಸಾಮಾನ್ಯವಾಗಿ ಸೂಕ್ತವೆಂದು ಪರಿಗಣಿಸಲಾಗುತ್ತದೆ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೈದ್ಯರ ಸಲಹೆ ಅನುಸರಿಸಿ.
ತಪ್ಪಾದ ಶೇಖರಣೆ: ಮೊಟ್ಟೆಗಳನ್ನು ಫ್ರಿಜ್‌ನ ಬಾಗಿಲಿನಲ್ಲಿ ಇಡುವ ಬದಲು, ತಂಪಾದ, ಸ್ಥಿರ ತಾಪಮಾನದ ಒಳಗಿನ ಭಾಗದಲ್ಲಿ ಇಡಿ, ಏಕೆಂದರೆ ತಾಪಮಾನದ ಏರಿಳಿತ ಮೊಟ್ಟೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
(ಏಜೆನ್ಸೀಸ್)
ತೊಗಟೆಯನ್ನು ತೊಳೆಯದೆ ಬಿಡುವುದು: ಮೊಟ್ಟೆಯ ತೊಗಟೆಯ ಮೇಲೆ ಬ್ಯಾಕ್ಟೀರಿಯಾ ಇರಬಹುದು. ಬೇಯಿಸುವ ಮೊದಲು ಅದನ್ನು ಚೆನ್ನಾಗಿ ತೊಳೆಯಿರಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.