

Laughter ; ನಮ್ಮ ಸುತ್ತ-ಮುತ್ತಲಿನ ಜನರು ನಮ್ಮನ್ನು ಯಾವಾಗಲು ನಗು-ನಗ್ತಾ ಇರಿ ಎಂದು ಹೇಳುತ್ತಾರೆ. ಏಕೆಂದರೆ ನಗು ಜೀವನಕ್ಕೆ ಅತ್ಯಂತ ಅವಶ್ಯಕವಾಗಿದೆ. ಇನ್ನೂ ಈ ನಗು ಆರೋಗ್ಯಕ್ಕೆ ಬಹಳ ಒಳ್ಳೆಯದು, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮತ್ತು ಒಟ್ಟಾರೆ ಮನಸ್ಸಿನ ಮತ್ತು ದೇಹದ ಆರೋಗ್ಯವನ್ನು ಸುಧಾರಿಸುತ್ತದೆ. ನಗು ಸಂಬಂಧಗಳನ್ನು ಬಲಪಡಿಸುತ್ತದೆ, ಇದು ಒಡನಾಟವನ್ನು ಹೆಚ್ಚಿಸುತ್ತದೆ. ಇತರರೊಂದಿಗೆ ಸಂವಹನವನ್ನು ಸುಗಮಗೊಳಿಸುತ್ತದೆ ಮತ್ತು ಸಂಘರ್ಷಗಳನ್ನು ಕಡಿಮೆ ಮಾಡುತ್ತದೆ. ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆಯಾಮಗಳಲ್ಲಿ ಸಮಗ್ರ ಆರೋಗ್ಯವನ್ನು ಸಾಧಿಸಲು ನಗು ಒಂದು ಶಕ್ತಿಶಾಲಿ ಸಾಧನವಾಗಿದೆ.
ಬದುಕಿನಲ್ಲಿ ಅದೆಷ್ಟೇ ನೋವಿರಲಿ, ದುಃಖವಿರಲಿ ಮುಖದಲ್ಲಿ ಮೂಡುವ ಈ ಒಂದು ಸಣ್ಣ ನಗು ಎಲ್ಲವನ್ನೂ ಮರೆಸಿ, ಹೊಸ ಪ್ರಪಂಚವನ್ನೇ ತೋರಿಸುತ್ತದೆ. ನಗು ಎಂಬುದು ಒಂದು ದಿವ್ಯೌಷಧಿ. ನಾವು ನಗುವ ಜೊತೆಗೆ ಬೇರೆಯವರನ್ನೂ ನಗಿಸುತ್ತಾ ಬಾಳಬೇಕು.
ಒತ್ತಡ ಕಡಿಮೆ ಮಾಡುತ್ತದೆ: ನಗುವಿನಿಂದ ಎಂಡಾರ್ಫಿನ್ಗಳು ಬಿಡುಗಡೆಯಾಗುತ್ತವೆ, ಇದು ಒತ್ತಡ ಹಾರ್ಮೋನ್ಗಳಾದ ಕಾರ್ಟಿಸಾಲ್ನ್ನು ಕಡಿಮೆ ಮಾಡುತ್ತದೆ.
ರೋಗನಿರೋಧಕ ಶಕ್ತಿ: ನಗುವುದರಿಂದ ರಕ್ತದಲ್ಲಿನ ಒತ್ತಡದ ಪರಿಣಾಮಗಳು ಕಡಿಮೆಯಾಗಿ, ರೋಗನಿರೋಧಕ ವ್ಯವಸ್ಥೆ ಬಲಗೊಳ್ಳುತ್ತದೆ.
ಹೃದಯ ಆರೋಗ್ಯ: ನಗು ರಕ್ತನಾಳಗಳನ್ನು ವಿಸ್ತರಿಸುತ್ತದೆ ಹಾಗೂ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ.
ಮಾನಸಿಕ ಆರೋಗ್ಯ: ನಗುವಿನಿಂದ ಖಿನ್ನತೆ ಮತ್ತು ಆತಂಕ ಕಡಿಮೆಯಾಗುತ್ತದೆ, ಮನಸ್ಸಿಗೆ ಸಂತೋಷ ಮತ್ತು ಶಾಂತಿ ಸಿಗುತ್ತದೆ.
(ಏಜೆನ್ಸೀಸ್)
ನಗುವು ದೇಹದೊಳಗೆ ಶಾರೀರಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಗು ಚೈತನ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಬಲವಾಗಿ ಕಾರ್ಯನಿರ್ವಹಿಸುತ್ತದೆ. ನಗು ಪ್ರತಿಯೊಬ್ಬರಿಗೂ ವೈಯಕ್ತಿಕ ಮಟ್ಟದಲ್ಲಿ ಪ್ರಯೋಜನವನ್ನು ನೀಡುವುದಲ್ಲದೆ, ಸಮುದಾಯಗಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೂ ಆಳವಾದ ಪರಿಣಾಮ ಬೀರುತ್ತದೆ. ಸಾಮಾಜಿಕ ಸಂಪರ್ಕಗಳನ್ನು ಬೆಳೆಸುವುದರಿಂದ ಹಿಡಿದು ಸಕಾರಾತ್ಮಕ ವಾತಾವರಣವನ್ನು ಉತ್ತೇಜಿಸುವವರೆಗೆ ನಗು ಕೆಲಸ ನಿರ್ವಹಿಸುತ್ತದೆ. ದಿನಕ್ಕೆ ಕೆಲವು ನಿಮಿಷಗಳಾದರೂ ನಗುವುದು, ಜೋಕ್ಗಳನ್ನು ಹಂಚಿಕೊಳ್ಳುವುದು ಅಥವಾ ಕಾಮಿಡಿ ಕಾರ್ಯಕ್ರಮ ನೋಡುವುದು ಆರೋಗ್ಯಕ್ಕೆ ಒಳ್ಳೆಯದು.