ಪ್ರಧಾನಿ ಮೋದಿ ಜಪಾನ್​ ಭೇಟಿ; ಭಾರತದಲ್ಲಿ ಹೂಡಿಕೆ ಮಾಡಿ, ವಿಶ್ವದ ಬೆಳವಣಿಗೆಗೆ ಸಹಕರಿಸಿ ಎಂದ ನಮೋ! | Narendra Modi in Japan

Narendra Modi in Japan
Published on

Narendra Modi in Japan: ಭಾರತದಲ್ಲಿ ಹೂಡಿಕೆ ಮಾಡಿ (ಮೇಕ್ ಇನ್​ ಇಂಡಿಯಾ) ವಿಶ್ವದ ಬೆಳವಣಿಗೆಯ ಭಾಗವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳನ್ನು ಆಹ್ವಾನಿಸಿದರು.

ಟೋಕಿಯೊದಲ್ಲಿ ಶುಕ್ರವಾರ (ಆಗಸ್ಟ್​​ 29) ನಡೆದ ಭಾರತ-ಜಪಾನ್ ಜಂಟಿ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಬನ್ನಿ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್" ಎಂಬ ಆಹ್ವಾನವನ್ನು ನೀಡಿದರು.'ಸುಜುಕಿ' ಮತ್ತು 'ಡೈಕಿನ್' ಯಶಸ್ಸಿನ ಕಥೆಗಳು ನಿಮ್ಮ ಯಶಸ್ಸಿನ ಕಥೆಗಳೂ ಆಗಬಹುದು" ಎಂದರು .

ಜಗತ್ತು ಭಾರತವನ್ನು ಕೇವಲ ನೋಡುತ್ತಿಲ್ಲ, ಅದರ ಮೇಲೆ ಭರವಸೆ ಹೊಂದಿದೆ, ಸೆಮಿಕಂಡಕ್ಟರ್‌ಗಳಿಂದ ಹಿಡಿದು ಸ್ಟಾರ್ಟ್ ಅಪ್‌ಗಳವರೆಗೆ ಜಪಾನ್ ಭಾರತಕ್ಕೆ ಪ್ರಮುಖ ಪಾಲುದಾರನಾಗಿದ್ದು, ಜಪಾನಿನ ಕಂಪನಿಗಳು ಭಾರತದಲ್ಲಿ 40 ಶತಕೋಟಿ ಡಾಲರ್‌ಗಳಿಗೂ ಹೆಚ್ಚು ಹೂಡಿಕೆ ಮಾಡಿವೆ ಎಂದರು. ಈಗಾಗಲೇ ಅನೇಕ ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ಉದ್ಯಮಗಳನ್ನು ವಿಸ್ತರಿಸಲು ಬಯಸುತ್ತಿದ್ದು, ಕಳೆದ 11 ವರ್ಷಗಳಲ್ಲಿ, ಭಾರತವು ಅಭೂತಪೂರ್ವ ಪರಿವರ್ತನೆಯನ್ನು ಕಂಡಿದೆ. ರಾಜಕೀಯ ಸ್ಥಿರತೆ, ಆರ್ಥಿಕ ಸ್ಥಿರತೆ ಮತ್ತು ತನ್ನ ನೀತಿಯಲ್ಲಿ ಪಾರದರ್ಶಕತೆಯಿಂದ ಭಾರತ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿದೆ ಎಂದು ಹೇಳಿದರು.

ಭಾರತವು ಅಮೆರಿಕದೊಂದಿಗೆ ವ್ಯಾಪಾರ ಉದ್ವಿಗ್ನತೆ ನಡುವೆ, ಇಂಡಿಯಾ, ಜಪಾನ್​ ಜೊತೆ ಆರ್ಥಿಕ ಸಂಬಂಧಗಳನ್ನು ಗಾಢವಾಗಿಸಲು ಮತ್ತು ವ್ಯಾಪಾರ, ತಂತ್ರಜ್ಞಾನ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ಅನ್ವೇಷಿಸಲು ಪ್ರಯತ್ನ ನಡೆಸುತ್ತಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net