ಪತಿ/ಪತ್ನಿಯ ಒತ್ತಡ ಕಡಿಮೆ ಮಾಡಲು ಮನೆಯಲ್ಲಿ ಈ ರೀತಿ ಮಾಡಿ; ಇದರಿಂದ ರೋಗಗಳು ಸಹ ದೂರವಾಗಿತ್ತೆ! | Lifestyle

dk - 2025-04-24T214849.768
Published on

Lifestyle : ಗಂಡ ಹೆಂಡತಿ ನಡುವೆ ಸಾಮಾನ್ಯವಾಗಿ ಮನೆಯಲ್ಲಿ ಸಣ್ಣಪುಟ್ಟ ಜಗಳಗಳು ಹಾಗೂ ವಾದಗಳು ನಡೆಯುತ್ತಲೇ ಇರುತ್ತದೆ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ‘’ಗಂಡ-ಹೆಂಡ್ತಿ ಜಗಳ ಉಂಡು ಮಲ್ಗೊತನ’’ ಎಂದು ಹೇಳುತ್ತಾರೆ.ಆದರೆ, ಇತ್ತೀಚಿನ ಅಧುನಿಕ ಜಗತ್ತಿನಲ್ಲಿ ಅದರಲ್ಲೂ ಪಟ್ಟಣಗಳಲ್ಲಿ ಪತಿ-ಪತ್ನಿ ನಡುವೆ ನಡೆಯುವ ಸಣ್ಣಪುಟ್ಟ ವಾದಗಳಿಂದ ವಿಚ್ಛೇದನತನಕ ಹೋಗುತ್ತವೆ.

ಇದರ ಮೂಲ ಕಾರಣ ಒತ್ತಡ ಎಂದು ತಜ್ಞರು ಹೇಳುತ್ತಾರೆ. ಗಂಡ-ಹೆಂಡತಿ ಸರ್ಕಾರಿ- ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವುದರಿಂದ ಸಾಮಾನ್ಯವಾಗಿ ಒತ್ತಡ ಜೀವನ ಅನುಭವಿಸುತ್ತಾರೆ. ಇದರಿಂದ ಮನೆಯಲ್ಲಿ ನಡೆಯುವ ಸಣ್ಣಪುಟ್ಟ ವಾದಗಳಿಗೂ ಇಬ್ಬರು ಕೋಪಗೊಳ್ಳುತ್ತಾರೆ. ಹೀಗಾಗಿ, ಅದು ಸಂಬಂಧದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.

ನಿಮ್ಮ ಸಂಗಾತಿಯಿಂದ ಹೆಚ್ಚುತ್ತಿರುವ ಒತ್ತಡದಿಂದ ನೀವು ತೊಂದರೆಗೊಳಗಾಗಿದ್ದರೆ, ಅವರ ಬಗ್ಗೆ ಸ್ವಲ್ಪ ಗಮನ ಹರಿಸುವುದು ನಿಮ್ಮ ಕರ್ತವ್ಯ. ನಿಮ್ಮ ಸಂಗಾತಿ(ಅವನು/ಅವಳು) ಬಗ್ಗೆ ನೀವು ಗಮನ ಹರಿಸಿದರೆ, ಅವರ ಒತ್ತಡದ ಮಟ್ಟವು ಬಹಳ ಮಟ್ಟಿಗೆ ಕಡಿಮೆಯಾಗಬಹುದು. ಸಂಗಾತಿಯ ಹೆಚ್ಚುತ್ತಿರುವ ಒತ್ತಡವನ್ನು ಹೇಗೆ ಕಡಿಮೆ ಮಾಡುವುದು ಎಂದು ತಿಳಿಯೋಣವೇ?

ಅವನ/ಅವಳ ಮಾತು ಮೊದಲು ಅಲಿಸಿ

ನಿಮ್ಮ ಹೆಂಡತಿ/ಗಂಡ ಅಸಮಾಧಾನ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದರೆ. ಮೊದಲು ಅವರನ್ನಯ ಮುಕ್ತವಾಗಿ ಮಾತನಾಡಲು ಬಿಡಿ. ಅವರು ಹೇಳುವ ಎಲ್ಲಾವನ್ನು ಮೊದಲು ಅಲಿಸಿ. ಬಳಿಕ ನಿಮ್ಮ ಅಭಿಪ್ರಾಯ ಮಂಡಿಸಿ. ಇದರಿಂದ ಅವರು ತಮ್ಮ ಆಂತರಿಕ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು.

ನಿಮ್ಮ ಬೆಂಬಲ ಕೊಡಿ

ನಿಮ್ಮ ಸಂಗಾತಿ ತುಂಬಾ ಒತ್ತಡದಲ್ಲಿದ್ದರೆ, ಅವರಿಗೆ ನಿಮ್ಮ ಬೆಂಬಲ ಸಿಗುವಂತೆ ಮಾಡಿ. ಅವನ ಹತ್ತಿರ ಸ್ವಲ್ಪ ಹೊತ್ತು ಕುಳಿತು, "ನಾನು ನಿನ್ನೊಂದಿಗಿದ್ದೇನೆ" ಎಂದು ಹೇಳಿ. ಇದನ್ನು ಹೇಳುವುದು ಅವರಿಗೆ ಒತ್ತಡ ನಿವಾರಕವಾಗಿ ಕಾರ್ಯನಿರ್ವಹಿಸಬಹುದು. ನಿಮ್ಮ ಭಾವನಾತ್ಮಕ ಬೆಂಬಲ ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿಡುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಒಟ್ಟಿಗೆ ಧ್ಯಾನ

ಒತ್ತಡದ ಸಮಯದಲ್ಲಿ, ದಿನಕ್ಕೆ 15 ರಿಂದ 20 ನಿಮಿಷಗಳ ಕಾಲ ಯೋಗ ಮತ್ತು ಧ್ಯಾನ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ಆಹಾರ ಪದ್ಧತಿ ಅಥವಾ ಲಘು ಯೋಗ ಮಾಡುವುದರಿಂದ ಒತ್ತಡದ ಹಾರ್ಮೋನ್ (ಕಾರ್ಟಿಸೋಲ್) ಕಡಿಮೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಆರಾಮದಾಯಕ ವಾತಾವರಣವನ್ನು ರಚಿಸಿ

ನಿಮ್ಮ ಸಂಗಾತಿಯನ್ನು ಒತ್ತಡ ಮುಕ್ತವಾಗಿಡಲು, ಮನೆಯ ವಾತಾವರಣವನ್ನು ಆರಾಮದಾಯಕವಾಗಿಸಿ. ಇದಕ್ಕಾಗಿ, ಮನೆಯಲ್ಲಿ ಮಂದ ದೀಪಗಳು, ಹಿತವಾದ ಸಂಗೀತ ಮತ್ತು ಬಿಸಿ ಗಿಡಮೂಲಿಕೆ ಚಹಾದಂತಹ ವಸ್ತುಗಳನ್ನು ಬಳಸಿ. ಇದರಿಂದ ಪರಿಸರ ಶಾಂತವಾಗಬಹುದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹವನ್ನು ವಿಶ್ರಾಂತಿ ಮಾಡುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net