

ಪೌಷ್ಟಿಕಾಂಶದ ಮೌಲ್ಯ ಮತ್ತು ರುಚಿ ಹೆಚ್ಚಿಸಲು ಸಾಮಾನ್ಯವಾಗಿ ಅಡುಗೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅದಕ್ಕೆ ಕಾರಣ ಮನುಷ್ಯನಿಗೆ ಬಗೆ ಬಗೆಯ ರುಚಿಯ ಸವಿಯುವ ಆಸೆ ಹೆಚ್ಚು. ಒಂದೇ ತಟ್ಟೆಯಲ್ಲಿ ತುಂಬಾ ವೆರೈಟಿ ಫುಡ್ ಇರಬೇಕೆಂಬುದು ಆಹಾರ ಪ್ರಿಯರ ಮಹದಾಸೆ. ಆದರೆ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಆಹಾರಗಳ ಸಂಯೋಜನೆ ಎಷ್ಟು ಒಳ್ಳೆಯದು? ಆಹಾರಗಳ ಸಂಯೋಜನೆ ಎಷ್ಟು ಅಪಾಯಕಾರಿ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಬಹುತೇಕರು ಯೋಚಿಸಿರುವುದೇ ಇಲ್ಲ. ಆದರೆ, ನಾವು ಅದರ ಬಗ್ಗೆ ತಿಳಿಸಿಕೊಡುತ್ತೇವೆ.
ನೀವು ತಪ್ಪಿಸಲೇಬೇಕಾದ 6 ಅಪಾಯಕಾರಿ ಮತ್ತು ಹಾನಿಕಾರ ಆಹಾರ ಸಂಯೋಜನೆಗಳು ಈ ಕೆಳಕಂಡಂತಿವೆ.
1. ಮೀನು ಮತ್ತು ಹಾಲು: ಆಯುರ್ವೇದದ ಪ್ರಕಾರ ಈ ಎರಡು ಆಹಾರಗಳ ಸ್ವಭಾವ ಬೇರೆ ಬೇರೆಯಾಗಿದೆ. ಹಾಲು ತಂಪಿನ ಸ್ವಭಾವ ಹೊಂದಿದ್ದರೆ, ಮೀನು ಬಿಸಿ ಸ್ವಭಾವದ ಆಹಾರವಾಗಿದೆ. ಇದನ್ನು ಒಟ್ಟಿಗೆ ಸೇವಿಸಿದರೆ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇವೆರಡನ್ನು ಯಾವುದೇ ಕಾರಣಕ್ಕೂ ಒಟ್ಟಿಗೆ ಸೇವಿಸಬೇಡಿ.
2. ಮೊಟ್ಟೆ ಮತ್ತು ಮಾಂಸ: ಈ ಎರಡು ಆಹಾರ ಪದಾರ್ಥಗಳು ಮಾಂಸಪ್ರಿಯರ ಫೇವರಿಟ್ ಎಂಬುದು ಎಲ್ಲರಿಗೂ ತಿಳಿದಿದೆ. ಬಹುತೇಕರು ಇವೆರಡನ್ನು ಒಟ್ಟಿಗೆ ಸೇವಿಸುತ್ತಾರೆ. ಆದರೆ, ಮೊಟ್ಟೆ ಮತ್ತು ಮಾಂಸವನ್ನು ಒಟ್ಟೆಗೆ ತಿನ್ನಬಾರದು. ಏಕೆಂದರೆ, ಈ ಎರಡು ಪದಾರ್ಥಗಳಲ್ಲಿ ಪ್ರೋಟಿನ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ನಿಮ್ಮ ಹೊಟ್ಟೆಗೆ ಭಾರದ ಅನುಭವವಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನೀವು ಮೊದಲು ಮಿತ ಪ್ರಮಾಣದ ಪ್ರೋಟಿನ್ ಆಹಾರ ಸೇವಿಸಿ, ಆ ಬಳಿಕ ಮಾಂಸ ಸೇವಿಸಬೇಕು.
3. ಚೀಸ್ ಫುಡ್ ಮತ್ತು ತಂಪು ಪಾನೀಯ: ಈ ಸಂಯೋಜನೆ ಆರೋಗ್ಯಕ್ಕೆಕ್ಕೆ ತುಂಬಾನೇ ಅಪಾಯಕಾರಿ. ಚೀಸ್ನೊಂದಿಗೆ ಯಾವುದೇ ತಂಪು ಪಾನೀಯವನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಎರಡೂ ಕೂಡ ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಅಲ್ಲದೆ, ಹೊಟ್ಟೆ ನೋವು ಮತ್ತು ಅಸ್ವಸ್ಥೆಯನ್ನು ಉಂಟು ಮಾಡಬಹುದು.
4. ತುಪ್ಪ ಮತ್ತು ಜೇನು ತುಪ್ಪ: 2:1ರ ಅನುಪಾತದಲ್ಲಿ ತುಪ್ಪ ಮತ್ತು ಜೇನು ತುಪ್ಪ ಮಿಶ್ರಣ ಮಾಡುವುದು ಒಳ್ಳೆಯದು. ಆದರೆ, ಎರಡನ್ನೂ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಇದನ್ನು ಶಿಫಾರಸು ಕೂಡ ಮಾಡಿಲ್ಲ.
5. ಊಟದ ಜತೆ ಹಣ್ಣುಗಳು: ಹಣ್ಣುಗಳನ್ನು ನಿಮ್ಮ ದೇಹ ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಆದರೆ, ಊಟ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಹಣ್ಣನ್ನು ಊಟದ ನಡುವೆ ಹಾಗೂ ಊಟದ ನಂತರ ತೆಗೆದುಕೊಳ್ಳಬೇಡಿ. ಸ್ವಲ್ಪ ಸಮಯದ ನಂತರ ಹಣ್ಣನ್ನು ಸೇವಿಸಿ.
6. ಆಲ್ಕೋಹಾಲ್ ಮತ್ತು ಸಿಹಿ ತಿನಿಸು: ಆಲ್ಕೋಹಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಸ್ತವ್ಯಸ್ತಗೊಳಿಸುತ್ತದೆ. ಹೀಗಾಗಿ ಸಿಹಿತಿಂಡಿಯ ಜತೆ ಮದ್ಯವನ್ನು ಸೇವಿಸಬಾರದು. ಸೇವಿಸಿದ್ದಲ್ಲಿ, ಹೆಚ್ಚಿನ ಪ್ರಮಾಣದ ಸಕ್ಕರೆಯು ಕೊಬ್ಬಿನಂತೆ ಸಂಗ್ರಹವಾಗುತ್ತದೆ ಮತ್ತು ಅನಾರೋಗ್ಯಕರ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. (ಏಜೆನ್ಸೀಸ್)