ಮನೆ, ಆಸ್ಪತ್ರೆ ಬಳಕೆಗೆ ಬರಲಿದೆ ಆಮ್ಲಜನಕ ಪುಷ್ಟೀಕರಣ ಘಟಕ

Oxygen-Enrichment-Unit-OEU-built-by-NCL-Pune
Published on

ನವದೆಹಲಿ: ಕೋವಿಡ್​ 19 ಸೋಂಕು ತಗುಲಿ ಉಸಿರಾಟದ ತೊಂದರೆ ಅನುಭವಿಸುವವರ ಅನುಕೂಲಕ್ಕಾಗಿ ಆಮ್ಲಜನಕ ಪುಷ್ಟೀಕರಣ ಘಟಕ (ಆಕ್ಸಿಜನ್​ ಎನ್​ರಿಚ್​ಮೆಂಟ್​ ಯುನಿಟ್​)ವನ್ನು ಕೌನ್ಸಿಲ್​ ಆಫ್​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ (ಸಿಆರ್​ಐಆರ್​) ವಿನ್ಯಾಸಗೊಳಿಸಿದೆ. ಇದನ್ನು ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ಹಿಂದುಳಿದ ಗ್ರಾಮೀಣ ಭಾಗಗಳಲ್ಲಿ ಬಳಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ತಿಳಿಸಿದ್ದಾರೆ.

ಈ ಘಟಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಿದರೆ ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್​ಗಳ ಬೇಡಿಕೆ ಕಡಿಮೆಯಾಗಲಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಹರ್ಷವರ್ಧನ್​, ಸಿಎಸ್​ಐಆರ್​ ಸೈಂಟಿಸ್ಟ್​ಗಳು ಮತ್ತು ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ ಪರಿಣತರು ಈ ಘಟಕವನ್ನು ಅಭಿವೃದ್ಧಿ ಪಡಿಸಿದ್ದಾರೆ. ಕೋವಿಡ್​ ಸಂಕಷ್ಟ ಸಮಯದಲ್ಲಿ ಇದು ನೆರವಿಗೆ ಬರಲಿದೆ ಎಂದಿದ್ದಾರೆ.

ಅದೇ ರೀತಿ, ಈ ಘಟಕಕ್ಕೆ ಆಕ್ಸಿಜನ್ ಸಿಲಿಂಡರ್​ನ ಅವಶ್ಯಕತೆ ಇಲ್ಲ. ಕೋವಿಡ್ ರೋಗಿಗಳು ಉಸಿರಾಟದ ತೊಂದರೆ ಅನುಭವಿಸುವಾಗ ಅವರಿಗೆ ಆರಂಭಿಕ ಆಕ್ಸಿಜನ್ ಅನ್ನು ಈ ಘಟಕ ಪೂರೈಸುತ್ತದೆ. ಅವರಿಗೆ ವೆಂಟಿಲೇಟರ್​ಗಳ ಅವಶ್ಯಕತೆಯೂ ಬರದು. ಆ ಮೂಲಕ ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್​ ಬೇಡಿಕೆಯ ಪ್ರಮಾಣವನ್ನು ಇದು ತಗ್ಗಿಸಲಿದೆ ಎಂದು ಸಚಿವ ಹರ್ಷವರ್ಧನ್ ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net