ಜೋಳದ ಜುಟ್ಟಿನಲ್ಲಿದೆ ಆರೋಗ್ಯದ ಗುಟ್ಟು! ಈ ರೀತಿ ಸೇವಿಸಿ ನೋಡಿ ನಿಮ್ಮ ಹೊಟ್ಟೆ ಫುಲ್​ ಕ್ಲೀನ್​ ಆಗುತ್ತೆ | Corn Silk

Corn Silk
Published on

Corn Silk : ಹವಾಮಾನಕ್ಕೆ ಅನುಗುಣವಾಗಿ ನಾವು ಕೆಲವು ಆಹಾರಗಳನ್ನು ಇಷ್ಟಪಡುತ್ತೇವೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿ ಬಿಸಿಯಾಗಿ ಏನನ್ನಾದರೂ ತಿನ್ನಲು ಇಷ್ಟಪಡುತ್ತೇವೆ. ಮೆಕ್ಕೆಜೋಳವು ಕೂಡ ಅಂತಹ ಆಹಾರಗಳಲ್ಲಿ ಒಂದಾಗಿದೆ. ಜೋಳವನ್ನು ಇಷ್ಟಪಡದವರು ಯಾರೂ ಇಲ್ಲ. ಬೆಂಕಿಯಲ್ಲಿ ಹುರಿದರೂ ಅಥವಾ ಬೇಯಿಸಿದರೂ ಜೋಳ ತುಂಬಾ ರುಚಿಕರವಾಗಿರುತ್ತದೆ. ಕೇವಲ ರುಚಿ ಮಾತ್ರವಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಕೂಡ.

ಅನೇಕರು ಜೋಳದ ಸಿಪ್ಪೆಯನ್ನು ಸುಲಿದ ನಂತರ, ಅದರೊಳಗಿರುವ ಜೋಳದ ಜುಟ್ಟು ಅಥವಾ ಕಾರ್ನ್​ ಸಿಲ್ಕ್​ ಅನ್ನು ಕಸವೆಂದು ಪರಿಗಣಿಸಿ ಎಸೆಯುತ್ತಾರೆ. ಆದರೆ, ಆ ಜೋಳದ ಜುಟ್ಟು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಕಾರ್ನ್​ ಸಿಲ್ಕ್​ನಿಂದ ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನಾವೀಗ ತಿಳಿಯೋಣ.

* ಜೋಳದ ಜುಟ್ಟಿನಲ್ಲಿ ಪೊಟ್ಯಾಸಿಯಂ, ಕ್ಯಾಲ್ಸಿಯಂ, ವಿಟಮಿನ್ ಬಿ2, ಸಿ ಮತ್ತು ಕೆ ನಂತಹ ಪೋಷಕಾಂಶಗಳಿವೆ. ಅದಕ್ಕಾಗಿಯೇ ಇದನ್ನು 5000 ವರ್ಷಗಳ ಹಿಂದೆ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿತ್ತು. ಇದಲ್ಲದೆ, ಜೋಳದ ಜುಟ್ಟು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿದ್ದು, ಮೂತ್ರನಾಳದ ಸೋಂಕು ಮತ್ತು ಮೂತ್ರದಲ್ಲಿ ಉರಿಯೂತದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದು ಮೂತ್ರದಲ್ಲಿರುವ ಬ್ಯಾಕ್ಟೀರಿಯಾವನ್ನು ಸಹ ನಾಶಪಡಿಸುತ್ತದೆ. ಇದು ನಮ್ಮ ದೇಹದಿಂದ ಹೆಚ್ಚುವರಿ ನೀರು ಮತ್ತು ತ್ಯಾಜ್ಯವನ್ನು ಹೊರಹಾಕುತ್ತದೆ.

* ಜೋಳದ ಜುಟ್ಟನ್ನು ಕುದಿಸಿ, ಅದರ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ಮೂತ್ರಪಿಂಡದಿಂದ ನೈಟ್ರೇಟ್‌ಗಳು ಮತ್ತು ವಿಷವನ್ನು ತೆಗೆದುಹಾಕುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಯಾರಾದರೂ ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿದ್ದರೆ, ಜೋಳದ ಜುಟ್ಟನ್ನು ಕುದಿಸಿ, ನೀರು ಕುಡಿಯುವುದರಿಂದ ಆ ಸಮಸ್ಯೆ ಕಡಿಮೆಯಾಗುತ್ತದೆ.

* ಈ ಜೋಳದ ಜುಟ್ಟಿನಿಂದ ತಯಾರಿಸಿದ ನೀರು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಖನಿಜಗಳು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

* ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಕುದಿಸಿದ ಜೋಳದ ಜುಟ್ಟಿನ ನೀರು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯು ದೇಹದಲ್ಲಿ ಉರಿಯೂತ ಮತ್ತು ನೀರಿನ ಧಾರಣದ ಸಮಸ್ಯೆಯನ್ನು ಗುಣಪಡಿಸುತ್ತದೆ. ಇದು ದೇಹದಲ್ಲಿ ಸಂಗ್ರಹವಾದ ವಿಷ ಮತ್ತು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ಯಾವುದೇ ರೀತಿಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡಿ, ನಿಮ್ಮ ಹೊಟ್ಟೆಯನ್ನು ಫುಲ್​ ಕ್ಲೀನ್​ ಮಾಡುತ್ತದೆ.

* ಕೆಲವರಿಗೆ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ ಮತ್ತು ಯಾವುದೇ ಆಹಾರವನ್ನು ಸೇವಿಸಿದ ನಂತರ ಉರಿ ಅನುಭವವಾಗುತ್ತದೆ. ಅಂತಹ ಜನರು ಜೋಳದ ಜುಟ್ಟು ಕುದಿಸಿದ ನೀರನ್ನು ಸೇವಿಸಬೇಕು. ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಆದ್ದರಿಂದ, ಇದರ ಸೇವನೆಯು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಉರಿಯೂತದ ಕಾರಣದಿಂದಾಗಿ, ನೀವು ಅದೇ ಸಮಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರಬಹುದು. ಆದ್ದರಿಂದ, ಪ್ರತಿದಿನ ಜೋಳದ ಜುಟ್ಟಿನ ನೀರನ್ನು ಕುಡಿಯುವುದರಿಂದ ಅದನ್ನು ನಿಯಂತ್ರಿಸಬಹುದು.

* ಹಲವರಿಗೆ ಎಷ್ಟೇ ಹಗುರವಾದ ಆಹಾರ ಸೇವಿಸಿದರೂ ಜೀರ್ಣಕ್ರಿಯೆ ಸರಿಯಾಗಿ ಇರುವುದಿಲ್ಲ. ಅಂತಹವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಈ ಜೋಳದ ಜುಟ್ಟಿನ ನೀರನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಹೀಗಾಗಿ, ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net