Abhishek Sharma : ನಿನ್ನೆ (ಜ.22) ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ.
ಇಂಗ್ಲೆಂಡ್ ನೀಡಿದ 132 ರನ್‌ಗಳ ಗುರಿಯನ್ನು ಕೇವಲ 12.5 ಓವರ್‌ಗಳಲ್ಲಿ ಭಾರತ ಮುಟ್ಟಿತು. ಈ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅಬ್ಬರಿಸಿ ಬೊಬ್ಬಿರಿದರು. ಕೇವಲ 34 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳೊಂದಿಗೆ 79 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅಭಿಷೇಕ್, ಕೊಂಚ ವಿಭಿನ್ನವಾಗಿ ಸಂಭ್ರಮಿಸಿದರು. ಬಲಗೈ ಗ್ಲೌಸ್ ಬಿಚ್ಚಿ, ಕೈಯನ್ನು ಮೇಲೆತ್ತಿ ಎರಡೂ ಬೆರಳುಗಳಿಂದ ಎಲ್ ಆಕೃತಿಯಲ್ಲಿ ತಮ್ಮ ಹೆಬ್ಬೆರಳು ಮತ್ತು ತೋರುಬೆರಳನ್ನು ತೋರಿಸಿ, ಏನೋ ಸೂಚನೆ ನೀಡಿದರು. ಪಂದ್ಯದ ನಂತರ ಆ ರೀತಿ ಮಾಡಿದ್ದೇಕೆ ಎಂಬುದನ್ನು ವಿವರಿಸಿದರು.
The fifty celebration by Abhishek Sharma.#INDvsENG #BCCI pic.twitter.com/f2DJbRTjZK
— Cricket Tufani (@mohitso39392499) January 22, 2025
ನಾನು ನನ್ನನ್ನು ಸಾಬೀತುಪಡಿಸಲು ತುಂಬಾ ಪ್ರಯತ್ನಿಸಿದೆ. ಅರ್ಧಶತಕ ಗಳಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅರ್ಧಶತಕ ಗಳಿಸಿದ ಬಳಿಕ ನನ್ನ ಹೆಬ್ಬೆರೆಳು ಮತ್ತು ತೋರುಬೆರಳನ್ನು ತೋರಿಸಲು ಒಂದು ಕಾರಣವಿದೆ. ನಾನು ಅದನ್ನು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್‌ಗಾಗಿ ಮಾಡಿದ್ದೇನೆ. ಇಬ್ಬರೂ ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಅವರು ಯುವ ಕ್ರಿಕೆಟಿಗರೊಂದಿಗೆ ಮಾತನಾಡುವ ರೀತಿ ಚೆನ್ನಾಗಿದೆ ಎಂದು ಅಭಿಷೇಕ್ ಶರ್ಮಾ ಹೇಳಿದರು.
ಈಡನ್ ಗಾರ್ಡನ್ ಪಿಚ್ ಚೆನ್ನಾಗಿದೆ. ನಮ್ಮ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. 160 ರಿಂದ 170 ರನ್‌ಗಳ ಗುರಿ ಇರುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ, ಅರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ತಮ್ಮ ಅದ್ಭುತ ಬೌಲಿಂಗ್‌ನಿಂದ ಇಂಗ್ಲೆಂಡ್ ಅನ್ನು ನಿರ್ಬಂಧಿಸಿದರು. ಇನ್ನೊಂದು ತುದಿಯಲ್ಲಿ ಸಂಜು ಸ್ಯಾಮ್ಸನ್ ಇದ್ದುದನ್ನು ನಾನು ಆನಂದಿಸಿದೆ. ಐಪಿಎಲ್ ಪಂದ್ಯಗಳಲ್ಲಿ ಆಕ್ರಮಣಕಾರಿಯಾಗಿ ಆಡುವುದು ನನಗೆ ಉಪಯುಕ್ತವಾಗಿದೆ. ಇಂಗ್ಲೆಂಡ್‌ನ ವೇಗವನ್ನು ಎದುರಿಸಲು ನಾನು ಯಾವಾಗಲೂ ಸಿದ್ಧ. ಅವರು ಶಾರ್ಟ್-ಪಿಚ್ ಎಸೆತಗಳಿಂದ ನನಗೆ ತೊಂದರೆ ನೀಡುತ್ತಾರೆಂದು ನನಗೆ ತಿಳಿದಿದೆ. ನಾನು ನನ್ನ ಆಟವನ್ನು ಆಡಿದೆ ಎಂದು ಅಭಿಷೇಕ್ ಹೇಳಿದರು. (ಏಜೆನ್ಸೀಸ್)
ಇಲ್ಲಿವರೆಗೆ ಹೇಳಿದ ಸಿನಿಮಾ ಕಲೆಕ್ಷನ್ ಎಲ್ಲ ಸುಳ್ಳಾ? ಐಟಿ ದಾಳಿ ವೇಳೆ ಸ್ಫೋಟಕ ಸತ್ಯ ಬಯಲು! Fake Collections
ಅನಂತ್ ಅಂಬಾನಿ ಮದ್ವೆಯಂತೆ ನನ್ನ ಮಗನ ವಿವಾಹ… ಅಚ್ಚರಿಯ ಹೇಳಿಕೆ ನೀಡಿದ ಗೌತಮ್ ಅದಾನಿ! Gautam Adani