ನಿಮ್ಮ ಸಮಸ್ಯೆಗಳು ಇವರಿಗೆ ಕೇವಲ ತಮಾಷೆ! ಇವರ ಜತೆ ನಿಮ್ಮ ದುಃಖಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ! chanakya niti

Friendship Marriage
Published on

chanakya niti : ಕಷ್ಟ, ಸುಖಃ ಎಲ್ಲ ಮನುಷ್ಯನಿಗೆ ಸರ್ವಸಾಮಾನ್ಯವಾಗಿದೆ. ನಿಮಗೆ ಪ್ರೀತಿಪಾತ್ರರೊಂದಿಗೆ ದುಃಖಗಳನ್ನು ಹಂಚಿಕೊಳ್ಳುವುದರಿಂದ ಸಮಾಧಾನ ಸಿಗಬಹುದು. ಚಾಣಕ್ಯನು ಹೇಳುವ ಪ್ರಕಾರ ಕೆಲವು ಜನರೊಂದಿಗೆ ನಿಮ್ಮ ದುಃಖಗಳನ್ನು ಹಂಚಿಕೊಳ್ಳಬಾರದು. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ...

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿಯನ್ನು ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯಗಳಲ್ಲಿ ನಿಮ್ಮೊಂದಿಗೆ ನಿಲ್ಲುವವರೇ ನಿಜವಾದ ಸ್ನೇಹಿತರು. ನೀವು ಅವರೊಂದಿಗೆ ಮಾತ್ರ ಸ್ನೇಹ ಬೆಳೆಸಬೇಕು. ಆದರೆ ವೈಯಕ್ತಿಕ ಕಾರಣಗಳಿಗಾಗಿ ನಿಮ್ಮನ್ನು ಜೊತೆಯಲ್ಲಿಟ್ಟುಕೊಳ್ಳುವವರೂ ಇದ್ದಾರೆ. ಅಂತಹ ನಕಲಿ ಸ್ನೇಹಿತರೊಂದಿಗೆ ನಿಮ್ಮ ದುಃಖಗಳನ್ನು ಹಂಚಿಕೊಳ್ಳಬೇಡಿ.

ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳದೆ ಎಲ್ಲವನ್ನೂ ಗೇಲಿ ಮಾಡುವ ಜನರಿದ್ದರೆ, ಅವರೊಂದಿಗೆ ನಿಮ್ಮ ದುಃಖಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಸಮಸ್ಯೆಗಳು ಅವರಿಗೆ ಕೇವಲ ತಮಾಷೆಯಾಗಿರುತ್ತವೆ.

ನಿಮ್ಮ ಸ್ನೇಹಿತ ಅಸೂಯೆ ಪಟ್ಟ ವ್ಯಕ್ತಿಯಾಗಿದ್ದರೆ,ನಿಮ್ಮ ಸಮಸ್ಯೆಗಳು ಅವರನ್ನು ಸಂತೋಷಪಡಿಸುತ್ತವೆ. ಆದ್ದರಿಂದ, ಅಂತಹ ಜನರೊಂದಿಗಿನ ಸಂಬಂಧವನ್ನು ಕೊನೆಗೊಳಿಸುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net